ಕರ್ನಾಟಕದ ರಾಜರತ್ನ, ಅಭಿಮಾನಿಗಳ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕನಸಿನ ಕೂಸು ಗಂಧದ ಗುಡಿ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಹಬ್ಬ ಆಚರಿಸುವುದಕ್ಕೆ ಸಜ್ಜಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಕರ್ನಾಟಕದಾದ್ಯಂತ ವಿನೂತನ ಪ್ರಚಾರ ಮಾಡಲು ಸಜ್ಜಾಗಿದ್ದು, ಅಪ್ಪು ಹೆಸರಲ್ಲಿ ಫುಡ್ ಫೆಸ್ಟಿವಲ್ ನಡೆಯಲಿದೆ.
ಹೌದು, ಅಕ್ಟೋಬರ್ 29ಕ್ಕೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಒಂದು ವರ್ಷವಾಗಲಿದೆ. ಈ ಹಿನ್ನೆಲೆ ಅಕ್ಟೋಬರ್ 28ರಂದು ಅಪ್ಪು ಕನಸು ಗಂಧದಗುಡಿ ಬೆಳ್ಳಿತೆರೆಯಲ್ಲಿ ಅನಾವರಣವಾಗಲಿದೆ. ಹಾಗಾಗಿ ಪುನೀತ್ ರಾಜ್ಕುಮಾರ್ ಅವರ ಅಸಂಖ್ಯಾತ ಅಭಿಮಾನಿಗಳು ಅಕ್ಟೋಬರ್ 21ರಂದು 'ಗಂಧದಗುಡಿ' ಸಾಕ್ಷ್ಯಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದ ಬೆನ್ನಲ್ಲಿಯೇ ಅಪ್ಪು ಹೆಸರಿನಲ್ಲಿ ಫುಡ್ ಫೆಸ್ಟಿವಲ್ ಮಾಡಲು ಮುಂದಾಗಿದ್ಧಾರೆ. ಅಕ್ಟೋಬರ್ 22 ಹಾಗೂ 23ರಂದು ಪುನೀತ್ ಫುಡ್ ಫೆಸ್ಟಿವಲ್ ಹಮ್ಮಿಕೊಂಡಿದ್ಧಾರೆ.
ಕರ್ನಾಟಕದ ಮೂಲೆ ಮೂಲೆಯಲ್ಲಿ ಪುನೀತ್ ಫುಡ್ ಫೆಸ್ಟಿವಲ್ ಆಯೋಜನೆ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಎಷ್ಟು ಸಾಧ್ಯವೋ ಅಷ್ಟು ಹೊಟೇಲ್‌ಗಳಲ್ಲಿ ಪುನೀತ್ ರಾಜ್‌ಕುಮಾರ್ ಇಷ್ಟು ಪಡುತ್ತಿದ್ದ ಆಹಾರವನ್ನು ಸಿದ್ಧಪಡಿಸಲಿದ್ದಾರೆ. ಈ ಮೆನುಗಳಿಗೆ (food menu) 'ಫ್ಲೇವರ್ಸ್ ಆಫ್ ಗಂಧದ ಗುಡಿ' ಎಂದು ಹೆಸರಿಡಲಾಗಿದೆ. ಸಸ್ಯಾಹಾರಿ ಹೋಟೆಲ್‌ಗಳಲ್ಲಿ ವೆಜ್ ಮೆನು ಹಾಗೂ ಮಾಂಸಹಾರಿ ಹೊಟೇಲ್‌ಗಳಲ್ಲಿ ನಾನ್ ವೆಜ್ ಮೆನು ಇರುತ್ತದೆ. ಈ ಆಹಾರವನ್ನು ಹಣ ನೀಡಿ ಜನರು ಸವಿಯಬಹುದು.
ಇದನ್ನೂ ಓದಿ: ಹೆಡ್ ಬುಷ್ ಪ್ರಚಾರ: ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಸೈಕಲ್ ರ‍್ಯಾಲಿ ಮಾಡಿದ ಡಾಲಿ & ಟೀಮ್
ಇನ್ನೂ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಭೋಜನ ಪ್ರಿಯ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಬಿರಿಯಾನಿ, ನಾನ್ ವೆಜ್ ಅಂದ್ರೆ ಎಲ್ಲಿಲ್ಲದ ಪ್ರೀತಿ. ಹಿಂದೆ ಅಪ್ಪು ತಾವು ಇಷ್ಟ ಪಡುವ ಫುಡ್ ಬಗ್ಗೆ ಹೇಳಿಕೊಂಡಿದ್ದು ಇದೆ. ಅದನ್ನು ಆಧಾರವಾಗಿಟ್ಟುಕೊಂಡೇ ಫುಡ್ ಮೆನು ಸಿದ್ಧವಾಗುತ್ತಿದೆ. ಸದ್ಯದ್ರಲ್ಲೇ ಅಪ್ಪು ಅಭಿಮಾನಿಗಳು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲಿದ್ದಾರೆ.
ಪುನೀತ್ ರಾಜ್‌ಕುಮಾರ್ ಫುಡ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದವರಿಗೆ ಸರ್ಪ್ರೈಸ್ ಕೂಡ ಇರುತ್ತೆ ಅಂತಾ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಇಂದು ಪವರ್ ಸ್ಟಾರ್ ನಮ್ಮ ಜೊತೆ ದೈಹಿಕವಾಗಿ ಇಲ್ಲದೆ ಇದ್ರು ಅವರು ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಇದ್ದಾರೆ ಅನ್ನೋದಿಕ್ಕೆ ಅಪ್ಪು ಹೆಸರಲ್ಲಿ ನಡೆಯುತ್ತಿರುವ ಕೆಲಸಗಳು, ಸಮಾಜ ಸೇವೆಗಳೇ ಸಾಕ್ಷಿ.
ಇದನ್ನೂ ಓದಿ: ಮನೋರಂಜನೆ ಜೊತೆಗೆ ಸಾಮಾಜಿಕ ಸಂದೇಶ ಸಾರಿದ್ದ ಅಪ್ಪು ಅಭಿನಯದ ಸ್ಮರಣೆ
ಅಕ್ಟೋಬರ್ 21ರಂದು ನಗರದ ಅರಮನೆ ಮೈದಾನದಲ್ಲಿ ಪುನೀತ್ ಪರ್ವ ಕಾರ್ಯಕ್ರಮ ನಡೆಯಲಿದೆ. ಗಂಧದ ಗುಡಿ ಪ್ರೀ ರಿಲೀಸ್ ಇವೆಂಟ್ ಪುನೀತ್ ಪರ್ವಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದಿ. ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಆಹ್ವಾನ ನೀಡಿದ್ದಾರೆ. ಚಿತ್ರರಂಗದ ಗಣ್ಯರಿಗೂ ಆಮಂತ್ರಣ ನೀಡಲಾಗಿದೆ.