ETV Bharat / entertainment

'ಡ್ರೀಮ್​ ಗರ್ಲ್​ 2' ಸಿನಿಮಾ ರಿಲೀಸ್​: ಪ್ರೇಕ್ಷಕರಿಂದ ಪಾಸಿಟಿವ್​ ಕಮೆಂಟ್ಸ್

Dream Girl 2: ಬಾಲಿವುಡ್​ ನಟ ಆಯುಷ್ಮಾನ್​ ಖುರಾನಾ ನಟನೆಯ 'ಡ್ರೀಮ್​ ಗರ್ಲ್​ 2' ಸಿನಿಮಾ ಇಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ.

author img

By ETV Bharat Karnataka Team

Published : Aug 25, 2023, 3:42 PM IST

Dream Girl 2
ಡ್ರೀಮ್​ ಗರ್ಲ್​ 2

2023ರ ಬಹುನಿರೀಕ್ಷಿತ ಚಿತ್ರ 'ಡ್ರೀಮ್​ ಗರ್ಲ್​ 2' ಇಂದು ತೆರೆ ಕಂಡಿತು. ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಳ್ಳುವುದರ ಜೊತೆಗೆ ವಿಮರ್ಶಕರಿಂದಲೂ ಮೆಚ್ಚುಗೆ ಗಿಟ್ಟಿಸಿಕೊಂಡಿದೆ. ಬಾಲಿವುಡ್​ ನಟ ಆಯುಷ್ಮಾನ್​ ಖುರಾನಾ ಮತ್ತು ಬ್ಯೂಟಿ ಅನನ್ಯಾ ಪಾಂಡೆ ನಟನೆಗೆ ಸಿನಿ ಪ್ರೇಮಿಗಳು ತಲೆದೂಗಿದ್ದಾರೆ. ಇದು ಬ್ಲಾಕ್​ಬಸ್ಟರ್​ 'ಡ್ರೀಮ್​ ಗರ್ಲ್'​ನ ಮುಂದುವರೆದ ಭಾಗವಾಗಿದೆ. ಈ ಸಿನಿಮಾವನ್ನು ರಾಜ್​ ಶಾಂಡಿಲ್ಯ ನಿರ್ದೇಶಿಸಿದ್ದಾರೆ. ಏಕ್ತಾ ಕಪೂರ್ ನಿರ್ಮಿಸಿದ್ದಾರೆ.

2019 ರಲ್ಲಿ ತೆರೆಕಂಡ 'ಡ್ರೀಮ್​ ಗರ್ಲ್' ಚಿತ್ರ ಸಿಕ್ಕಾಪಟ್ಟೆ ಯಶಸ್ಸು ಕಂಡಿತ್ತು. ಥಿಯೇಟರ್​ನಲ್ಲಿ ಧೂಳೆಬ್ಬಿಸಿತ್ತು. ಆಯುಷ್ಮಾನ್ ಖುರಾನಾ ಅವರ ಪಾತ್ರವಂತೂ ಎಲ್ಲರನ್ನೂ ನಡೆಗಡಲಿನಲ್ಲಿ ತೇಲಿಸಿತ್ತು. ಪೂಜಾ ಪಾತ್ರದಲ್ಲಿ ನೋಡುಗರನ್ನು ಬಹುವಾಗಿ ಆಕರ್ಷಿಸಿದ್ದರು. ಹೀಗಾಗಿ 'ಡ್ರೀಮ್​ ಗರ್ಲ್​ 2' ಬಿಡುಗಡೆಗಾಗಿ ಪ್ರೇಕ್ಷಕರು ಕಾಯುತ್ತಿದ್ದರು. ಮುಂದುವರೆದ ಭಾಗ ಯಾವ ರೀತಿ ಇರಬಹುದೆಂಬ ಕುತೂಹಲ ಅವರಲ್ಲಿತ್ತು. ಕೊನೆಗೂ ಇಂದು ಚಿತ್ರ ತೆರೆ ಕಂಡಿದ್ದು, ಇಷ್ಟು ದಿನದ ಕಾಯುವಿಕೆಗೆ ತೆರೆ ಬಿದ್ದಿದೆ.

ಸಿನಿಮಾ ಮೇಲೆ ಪ್ರೇಕ್ಷಕರು ಇಟ್ಟಿದ್ದ ನಿರೀಕ್ಷೆ ಮತ್ತು ಭರವಸೆಯನ್ನು 'ಡ್ರೀಮ್​ ಗರ್ಲ್​ 2' ಚಿತ್ರತಂಡ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ದೇಶದಾದ್ಯಂತ ಸಿನಿಮಾ ನೋಡಲು ಜನರು ಥಿಯೇಟರ್​ನಲ್ಲಿ ಮುಗಿಬಿದ್ದಿದ್ದಾರೆ. ಮೊದಲ ಶೋ ವೀಕ್ಷಿಸಿದ ಪ್ರೇಕ್ಷಕರು ಅತ್ಯಂತ ಉತ್ಸಾಹದಿಂದ ಚಿತ್ರದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ತಮ್ಮ ಅನಿಸಿಕೆ, ಆಲೋಚನೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಿನಿ ಪ್ರೇಮಿಗಳು ಎಕ್ಸ್​ (ಹಿಂದಿನ ಟ್ವಿಟರ್​) ವೇದಿಕೆಯನ್ನು ಬಳಸಿಕೊಂಡರು.

ಇದನ್ನೂ ಓದಿ: ಸಿನಿಮಾ ಹೊರತಾಗಿ ಯಾವುದೂ ಕೂಡ ಯಾರ ವ್ಯವಹಾರವೂ ಅಲ್ಲ: ಡೇಟಿಂಗ್​ ವದಂತಿಗೆ ಹೃತಿಕ್​ ರೋಷನ್ ಗೆಳತಿಯ ಪ್ರತಿಕ್ರಿಯೆ

ಚಿತ್ರತಂಡ ಹೀಗಿದೆ..: ಚಿತ್ರದಲ್ಲಿ ಆಯುಷ್ಮಾನ್ ಖುರಾನ್​, ಅನನ್ಯಾ ಪಾಂಡೆ ಜೊತೆಗೆ ಪರೇಶ್ ರಾವಲ್, ರಾಜ್ಪಾಲ್ ಯಾದವ್, ಅಸ್ರಾನಿ, ವಿಜಯ್ ರಾಜ್, ಅನ್ನು ಕಪೂರ್, ಸೀಮಾ ಪಹ್ವಾ, ಮನೋಜ್ ಜೋಶಿ, ಅಭಿಷೇಕ್ ಬ್ಯಾನರ್ಜಿ ಮತ್ತು ಮಂಜೋತ್ ಸಿಂಗ್ ಮುಂತಾದವರು ನಟಿಸಿದ್ದಾರೆ. ಏಕ್ತಾ ಆರ್ ಕಪೂರ್ ಅವರು ಬಾಲಾಜಿ ಟೆಲಿಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಡ್ರೀಮ್​ ಗರ್ಲ್​ ಮೊದಲ ಭಾಗಕ್ಕಿಂತ ಈ ಚಿತ್ರ ಮತ್ತಷ್ಟು ಮನರಂಜನೆ ಜೊತೆ ಹಾಸ್ಯದ ರಸದೌತಣ ನೀಡಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಬಾಕ್ಸ್​ ಆಫೀಸ್​ನಲ್ಲಿ ಗದರ್​ 2 ಮತ್ತು ಓಎಂಜಿ 2 ಚಿತ್ರಗಳು ಧೂಳೆಬ್ಬಿಸುತ್ತಿವೆ. ಇವುಗಳಿಗೆ ಪೈಪೋಟಿ ನೀಡಲು 'ಡ್ರೀಮ್​ ಗರ್ಲ್​ 2' ಎಂಟ್ರಿ ಕೊಟ್ಟಿದೆ. ರಜನಿಕಾಂತ್​ ನಟನೆಯ ಜೈಲರ್​ ಸಿನಿಮಾ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಈ ಮೂರು ಸಿನಿಮಾಗಳ ಮನರಂಜನೆಯ ಜೊತೆಗೆ ಆಯುಷ್ಮಾನ್​ ಖುರಾನಾ ಸಿನಿಮಾ ಕೂಡ ಸೇರಿಕೊಂಡಿದೆ.

ಇದನ್ನೂ ಓದಿ: ಟಾಲಿವುಡ್​ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್ ರಾಷ್ಟ್ರ ಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ.. ಯಾವ ಚಿತ್ರಕ್ಕೆ ಗೊತ್ತಾ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.