ಸೂಪರ್ ಹಿಟ್ ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ಮೂಲ ಗೀತೆಗೆ ನಾಮಿನೇಟ್ ಆಗಿದ್ದು, ಭಾರತದ ಕೀರ್ತಿ ಹೆಚ್ಚಿದೆ. ಇದೇ ವಿಭಾಗದಲ್ಲಿ ಎಂಎಂ ಕೀರವಾಣಿ ಸಂಯೋಜನೆಯ ಈ ನಾಟು ನಾಟು ಹಾಡು ಈಗಾಗಲೇ ಪ್ರಪಂಚದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಆದರೆ ಅಂತಾರಾಷ್ಟ್ರೀಯ ಫೀಚರ್ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾದ ಚೆಲ್ಲೋ ಶೋ ಅಂತಿಮ ಪಟ್ಟಿಗೆ ನಾಮನಿರ್ದೇಶನಗೊಳ್ಳುವಲ್ಲಿ ವಿಫಲವಾಗಿದೆ.
-
WE CREATED HISTORY!! 🇮🇳
— RRR Movie (@RRRMovie) January 24, 2023 " class="align-text-top noRightClick twitterSection" data="
Proud and privileged to share that #NaatuNaatu has been nominated for Best Original Song at the 95th Academy Awards. #Oscars #RRRMovie pic.twitter.com/qzWBiotjSe
">WE CREATED HISTORY!! 🇮🇳
— RRR Movie (@RRRMovie) January 24, 2023
Proud and privileged to share that #NaatuNaatu has been nominated for Best Original Song at the 95th Academy Awards. #Oscars #RRRMovie pic.twitter.com/qzWBiotjSeWE CREATED HISTORY!! 🇮🇳
— RRR Movie (@RRRMovie) January 24, 2023
Proud and privileged to share that #NaatuNaatu has been nominated for Best Original Song at the 95th Academy Awards. #Oscars #RRRMovie pic.twitter.com/qzWBiotjSe
ಆಸ್ಕರ್‌ಗೆ ಭಾರತದ ಮೂರು ಚಲನಚಿತ್ರಗಳು: ಕಳೆದ 55 ವರ್ಷಗಳಿಂದ ಭಾರತವು ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಸ್ಕರ್‌ಗಾಗಿ ಅರ್ಜಿ ಕಳುಹಿಸುತ್ತಿದೆ. ಈವರೆಗೆ ಆಯ್ಕೆಯಾದ ಚಲನಚಿತ್ರಗಳು ನಾಮನಿರ್ದೇಶನಗಳ ಕಿರುಪಟ್ಟಿಗೆ ಬಂದಿರುವುದು ಕೇವಲ ಮೂರು ಸಂದರ್ಭಗಳಲ್ಲಿ ಮಾತ್ರ. ಶತಮಾನದಷ್ಟು ಹಳೆಯದಾದ ಚಲನಚಿತ್ರೋದ್ಯಮವನ್ನು ಹೊಂದಿರುವ ದೇಶಕ್ಕೆ (ಭಾರತ) ಇದು ನೀರಸ ದಾಖಲೆ. ಚೆಲ್ಲೋ ಶೋ ರೇಸ್‌ನಿಂದ ಹೊರಗೆ ಬಂದಿದೆ. ಆದರೆ ನಮ್ಮ ದೇಶದಿಂದ ಮೂರು ಚಲನಚಿತ್ರಗಳು ವಿಭಿನ್ನ ವಿಭಾಗಗಳಲ್ಲಿ ಸ್ಪರ್ಧಿಸುತ್ತಿರುವುದು ಇದೇ ಮೊದಲು.
-
Going global with this year’s nominees for International Feature Film. #Oscars #Oscars95 pic.twitter.com/naCBKbjol6
— The Academy (@TheAcademy) January 24, 2023 " class="align-text-top noRightClick twitterSection" data="
">Going global with this year’s nominees for International Feature Film. #Oscars #Oscars95 pic.twitter.com/naCBKbjol6
— The Academy (@TheAcademy) January 24, 2023Going global with this year’s nominees for International Feature Film. #Oscars #Oscars95 pic.twitter.com/naCBKbjol6
— The Academy (@TheAcademy) January 24, 2023
ಆಸ್ಕರ್ ನಾಮನಿರ್ದೇಶಿತ ಭಾರತೀಯ ಚಲನಚಿತ್ರಗಳು: ಕಳೆದ 55 ವರ್ಷಗಳಿಂದ ಭಾರತೀಯ ಚಲನಚಿತ್ರಗಳು ನಾಮನಿರ್ದೇಶನಗಳ ಪಟ್ಟಿಗೆ (ಅಂತಿಮ ಪಟ್ಟಿ) ಸೇರದೇ ಮನೆಗೆ ಹಿಂತಿರುಗುತ್ತವೆ. ನರ್ಗೀಸ್-ಸುನೀಲ್ ದತ್ ಅವರ ಮದರ್ ಇಂಡಿಯಾ (1957), ಮೀರಾ ನಾಯರ್ ಅವರ ಸಲಾಮ್ ಬಾಂಬೆ (1988) ಮತ್ತು ಅಶುತೋಷ್ ಗೋವಾರಿಕರ್ ಅವರ ಅಮೀರ್ ಖಾನ್ ಅಭಿನಯದ ಲಗಾನ್ (2001) ಆಸ್ಕರ್ ನಾಮನಿರ್ದೇಶನಗಳನ್ನು ಗಳಿಸುವಲ್ಲಿ ಯಶಸ್ವಿಯಾದ ಮೂರು ಚಿತ್ರಗಳು.
-
Truth-seeking on a shorter timeline. Presenting the nominees for Documentary Short Subject… #Oscars #Oscars95 pic.twitter.com/kM3sDkoC5R
— The Academy (@TheAcademy) January 24, 2023 " class="align-text-top noRightClick twitterSection" data="
">Truth-seeking on a shorter timeline. Presenting the nominees for Documentary Short Subject… #Oscars #Oscars95 pic.twitter.com/kM3sDkoC5R
— The Academy (@TheAcademy) January 24, 2023Truth-seeking on a shorter timeline. Presenting the nominees for Documentary Short Subject… #Oscars #Oscars95 pic.twitter.com/kM3sDkoC5R
— The Academy (@TheAcademy) January 24, 2023
ಆಸ್ಕರ್ ರೇಸ್‌ನಿಂದ ಹೊರಬಂದ ಚೆಲ್ಲೋ ಶೋ: ಡೈರೆಕ್ಟರ್ ಪಾನ್ ನಳಿನ್ ನಿರ್ದೇಶನದ ಚೆಲ್ಲೋ ಶೋ ಆಸ್ಕರ್ ರೇಸ್‌ನಿಂದ ಹೊರಬಿದ್ದಿದೆ. ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಇದು ಗುಜರಾತಿ ಭಾಷೆಯ ಸಿನಿಮಾ. ಒಂಭತ್ತು ವರ್ಷದ ಬಾಲಕ ದೂರದರ್ಶನ ಲೋಕದಲ್ಲಿ ಮಾಡಿದ ಬದಲಾವಣೆ ಕುರಿತು ತಿಳಿಸಿದೆ ಈ ಚಿತ್ರ. ಆಸ್ಕರ್ ರೇಸ್ನಲ್ಲಿ ಅಂತಿಮ ನಾಮನಿರ್ದೇಶನ ಪಟ್ಟಿಯಲ್ಲಿರುವ ಇತರೆ ಚಲನಚಿತ್ರಗಳು - ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್ (ಜರ್ಮನಿ), ಅರ್ಜೆಂಟೀನಾ 1985 (ಅರ್ಜೆಂಟೀನಾ), ಕ್ಲೋಸ್ (ಬೆಲ್ಜಿಯಂ) ಮತ್ತು ದಿ ಕ್ವೈಟ್ ಗರ್ಲ್ (ಐರ್ಲೆಂಡ್).
-
True story - your Documentary Feature nominees are... #Oscars #Oscars95 pic.twitter.com/NHf86Hskqw
— The Academy (@TheAcademy) January 24, 2023 " class="align-text-top noRightClick twitterSection" data="
">True story - your Documentary Feature nominees are... #Oscars #Oscars95 pic.twitter.com/NHf86Hskqw
— The Academy (@TheAcademy) January 24, 2023True story - your Documentary Feature nominees are... #Oscars #Oscars95 pic.twitter.com/NHf86Hskqw
— The Academy (@TheAcademy) January 24, 2023
ಆಸ್ಕರ್‌ಗೆ ಭಾರತದ ಅಧಿಕೃತ ನಮೂದುಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ: ಚಲನಚಿತ್ರ ನಿರ್ಮಾಪಕರ ಉನ್ನತ ಸಂಸ್ಥೆಯಾದ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದಿಂದ ನೇಮಕಗೊಂಡ ಸಮಿತಿಯು ಅಧಿಕೃತ ಆಯ್ಕೆಯನ್ನು ಮಾಡುತ್ತದೆ.
ಇದನ್ನೂ ಓದಿ: ಆಸ್ಕರ್ ಪ್ರಶಸ್ತಿಗೆ ಅಧಿಕೃತವಾಗಿ ನಾಟು ನಾಟು ಹಾಡು ನಾಮಿನೇಟ್: ಎರಡು ಕಿರುಚಿತ್ರಗಳು ಸಹ ರೇಸ್ನಲ್ಲಿ
ಭಾರತದ ಎರಡು ಕಿರುಚಿತ್ರಗಳು ನಾಮಿನೇಟ್: ಆಸ್ಕರ್ ಪ್ರಶಸ್ತಿಗೆ ನಾಟು ನಾಟು ಹಾಡಿನ ಜೊತೆಗೆ ಆಲ್ ದಟ್ ಬ್ರೀಥ್ಸ್ ಮತ್ತು ದಿ ಎಲಿಫೆಂಟ್ ವಿಸ್ಪರರ್ ಕಿರುಚಿತ್ರಗಳು ಕೂಡ ನಾಮಿನೇಟ್ ಆಗಿವೆ. ದಿ ಎಲಿಫೆಂಟ್ ವಿಸ್ಪರರ್ ಕಿರುಚಿತ್ರವು ಸಾಕ್ಷ್ಯಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರೆ, ಆಲ್ ದಟ್ ಬ್ರೀಥ್ಸ್ ಕಿರುಚಿತ್ರವು ಸಾಕ್ಷ್ಯಚಿತ್ರ ಫೀಚರ್ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.
ಇದನ್ನೂ ಓದಿ: ಪೆಪ್ಸಿ ಜಾಹೀರಾತಿಗೆ ರಾಕಿಂಗ್ ಸ್ಟಾರ್ ಯಶ್ ಪಡೆದ ಸಂಭಾವನೆ ಎಷ್ಟು ಗೊತ್ತಾ?