ETV Bharat / entertainment

ಗಾಳಿಪಟ 2 ದೊಡ್ಡ ಮಟ್ಟದಲ್ಲಿ ಹಾರುತ್ತೆ: ನಿರ್ದೇಶಕ ಯೋಗರಾಜ್ ಭಟ್‌ - ಗಾಳಿಪಟ

ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಗಾಳಿಪಟ -1 ಸಿನಿಮಾದಿಂದಾಗಿ ಪಾರ್ಟ್​-2 ಮೇಲೂ ಸಾಕಷ್ಟು ನಿರೀಕ್ಷೆಯಿದೆ. ಬಿಡುಗಡೆಯ ಟೆನ್ಶನ್ ಜೊತೆಗೆ ಸಿನಿಮಾ ಬಗ್ಗೆ ಸ್ವಲ್ಪ ಭಯನೂ ಇದೆ ಎಂದು ಯೋಗರಾಜ್ ಭಟ್ ಹೇಳಿದರು.

director-yogaraj-bhat-says-much-hope-and-fear-of-gaalipata-2-movie
ಗಾಳಿಪಟ-1 ಸಕ್ಸನ್​ನಿಂದಾಗಿ ಪಾರ್ಟ್​-2 ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ, ಭಯನೂ ಇದೆ : ಭಟ್ರ ಇಂಟ್ರಸ್ಟಿಂಗ್ ಮಾತು
author img

By

Published : Aug 11, 2022, 7:43 PM IST

Updated : Aug 11, 2022, 10:15 PM IST

ಸಿನಿಮಾಗಳಲ್ಲಿ ಲವ್ ಸ್ಟೋರಿ ಜೊತೆಗೆ ಜೀವನದ ಫಿಲಾಸಫಿ ಹೇಳುವ ನಿರ್ದೇಶಕ ಯೋಗರಾಜ್ ಭಟ್. ಈಗ ಗಣೇಶ್, ದಿಗಂತ್ ಹಾಗು ಪವನ್ ಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಗಾಳಿಪಟ-2 ಚಿತ್ರ ನಿರ್ದೇಶಿಸಿರುವ ಭಟ್ರು ಈಟಿವಿ ಭಾರತ ಜೊತೆ ಸವಿಸ್ತಾರವಾಗಿ ಮಾತನಾಡಿದರು.

ಯೋಗರಾಜ್ ಭಟ್ ಅವರಿಗೆ ಗಾಳಿಪಟ ಅಂದ್ರೆ ನೆನಪಾಗೋದು ಸ್ವತಂತ್ರ ಅಂತೆ. ಗಾಳಿಪಟ -1 ಸಿನಿಮಾ ಮಾಡಿದಾಗ್ಲೇ ಪಾರ್ಟ್-2 ಮಾಡುವ ಐಡಿಯಾವೂ ಬಂದಿತ್ತು. ಆ ಮಟ್ಟಿಗೆ ಕಥೆ ಬರೆದು ಕಂಟೆಂಟ್ ರೆಡಿ ಮಾಡಿಕೊಂಡಿದ್ದೆವು. ಗಾಳಿಪಟ ಅಂತಾ ಟೈಟಲ್ ಕೊಟ್ಟಿದ್ದು ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಎಂದು ಭಟ್ರು ಹೇಳಿದರು.

ಗಾಳಿಪಟ ಅಂದಾಕ್ಷಣ ಎಲ್ಲರಿಗೂ ಬಾಲ್ಯ ನೆನಪಾಗುತ್ತೆ. ಹೀಗಾಗಿ ಗಾಳಿಪಟ -1 ಸಿನಿಮಾ ಆ ಮಟ್ಟದ ಸಕ್ಸಸ್ ಆಗಲು ಜನರೇ ಕಾರಣ. ಚಿತ್ರದ ಹಾಡುಗಳು, ಡೈಲಾಗ್ ಫೇಮಸ್ ಆಗಿದ್ದು ಗಾಳಿಪಟ ಜನರ ಸಿನಿಮಾ ಆಯಿತು ಎಂದು ಯೋಗರಾಜ್​ ಭಟ್​ ಹೇಳಿದರು.

ಗಾಳಿಪಟ-1 ಸಕ್ಸಸ್‌​ನಿಂದಾಗಿ ಪಾರ್ಟ್​-2 ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ, ಭಯನೂ ಇದೆ : ಭಟ್ರ ಇಂಟ್ರಸ್ಟಿಂಗ್ ಮಾತು

ಟೆನ್ಶನ್ ಜೊತೆಗೆ ಭಯ ಇದೆ: ಗಾಳಿಪಟ -2 ಸಿನಿಮಾದ ಕಥೆಯೂ ಇಂಟ್ರಸ್ಟಿಂಗ್ ಆಗಿದೆ. ಗಾಳಿಪಟ -1 ಸಿನಿಮಾ ಆಗಿ ಮೂರು ವರ್ಷದಲ್ಲಿ ಈ ಸಿನಿಮಾ ಕಥೆ ಮಾಡಲು ಯೋಚಿಸಿದ್ದೆ. ಆದರೆ, ಆಗ ಕಥೆ ಶುರುವಾಗಲಿಲ್ಲ. ಕೊನೆಗೆ ಗಾಳಿಪಟ -2 ಚಿತ್ರದ ಕಥೆ ಶುರುವಾಗಿದ್ದು ಮುಗುಳು ನಗೆ ಸಿನಿಮಾ ಟೈಮಲ್ಲಿ. ಈ ಸಿನಿಮಾ‌ ತುಂಬಾ ಕೆಲಸ‌ ಮಾಡಿಸಿಕೊಳ್ತು. ಅಷ್ಟು ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿರೋ ಗಾಳಿಪಟ -1 ಸಿನಿಮಾದಿಂದ ಈ ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆ ಇದೆ. ಬಿಡುಗಡೆ ಟೆನ್ಶನ್ ಜೊತೆಗೆ ಸಿನಿಮಾ ಬಗ್ಗೆ ಸ್ವಲ್ಪ ಭಯನೂ ಇದೆ ಎನ್ನುತ್ತಾರೆ ಅವರು.

ಇದು ದೊಡ್ಡ ಮಟ್ಟದಲ್ಲಿ ಹಾರುತ್ತೆ: ಚಿತ್ರದ ಟ್ರೈಲರ್​ಗೆ ದೊಡ್ಡ ಮಟ್ಟದಲ್ಲಿ ರೀಚ್ ಸಿಕ್ಕಿದೆ. ಜನ ಮೆಚ್ಚಿಕೊಂಡಿದ್ದಾರೆ. ಅಂದಿನ ಗಾಳಿಪಟಕ್ಕೂ ಇಂದಿನ ಗಾಳಿಪಟ -2 ಫ್ಲೇವರ್ ಬೇರೆ. ಈ ಸಿನಿಮಾ ಗಾಳಿಪಟ -1ಕ್ಕಿಂತ ಇದು ದೊಡ್ಡ ಮಟ್ಟದಲ್ಲಿ ಹಾರುತ್ತೆ ಎಂಬ ವಿಶ್ವಾಸ ಯೋಗರಾಜ್ ಭಟ್ ಅವರದ್ದು.

ಗಣೇಶ್ ಕಾಂಬಿನೇಷನ್ ಬಗ್ಗೆ ಹೇಳೋದಂದ್ರೆ, ಆತ ಅಸಾಮಾನ್ಯ ಪ್ರತಿಭೆ. ಯಾವ ಮಟ್ಟಿಗೆ ಅಂದ್ರೆ ಗಣೇಶ್​ಗೆ ಆನೆಗೆ ಇರುವಂತಹ ನೆನಪಿನ ಶಕ್ತಿ ಇದೆ. ಸ್ನೇಹವನ್ನು ಕಟ್ಟಿಕೊಂಡು ಸ್ಕ್ರೀನ್​ನಲ್ಲಿ ಮ್ಯಾಜಿಕ್ ಮಾಡ್ತಾನೆ. ನಾನು ಗಣೇಶನ ಗಣಪ ಅಂತಾ ಕರೆಯುತ್ತೇನೆ. ನಮ್ಮ ಮಧ್ಯೆ ದೊಡ್ಡ ಮಟ್ಟದಲ್ಲಿ ಜಗಳ ಇರುತ್ತೆ. ನಮ್ಮ ದೋಸ್ತಿ ತುಂಬಾ ಶುದ್ಧ ಎಂದು ಹೇಳಿದರು.

ಎಲ್ಲರ ಪಾತ್ರಗಳೂ ವಿಭಿನ್ನ: ಗಾಳಿಪಟ -2 ಸಿನಿಮಾದಲ್ಲಿ ಗಣೇಶ್ ಜೊತೆಗೆ ದೂದ್ ಪೇಡಾ ದಿಗಂತ್, ಪವನ್ ಕುಮಾರ್ ಪಾತ್ರಗಳು ಕೂಡ ವಿಭಿನ್ನವಾಗಿವೆ. ಗುರು ಶಿಷ್ಯರಂದ್ರೆ ಏನು?. ಅಮ್ಮ-ಮಗ, ಅಪ್ಪ-ಮಗನ ಸಂಬಂಧ ಏನು ಅನ್ನೋದನ್ನು ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ನಿರ್ಮಾಪಕ ಎಂ.ರಮೇಶ್ ರೆಡ್ಡಿ ಮಾಡಿದ್ದಾರೆ. ಸ್ವಲ್ಪ ವ್ಯಾಪಾರ ಕೂಡ ಆಗಿದೆ. ನಾನು ಒಬ್ಬ ಟೆಕ್ನಿಷಿಯನ್ ಆಗಿದ್ದರೂ, ಸಾಮಾನ್ಯ ಪ್ರೇಕ್ಷಕನಂತೆ ಸಿನಿಮಾ ನೋಡಲು ಕಾತುರನಾಗಿದ್ದೇನೆ ಎಂದು ಭಟ್ರು ತಿಳಿಸಿದರು.

ಇದನ್ನೂ ಓದಿ: ನಾಳೆ ಗಾಳಿಪಟ 2 ಬಿಡುಗಡೆ: ನಟ ಗಣೇಶ್​ ಹೇಳಿದ್ದೇನು?

Last Updated : Aug 11, 2022, 10:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.