ETV Bharat / entertainment

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಪಾರ್ಟಿ.. ರಣ್​​​ವೀರ್ ಸಿಂಗ್​ಗೆ ಪತ್ನಿ ದೀಪಿಕಾ ಪಡುಕೋಣೆ ಸಾಥ್ - ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಪಾರ್ಟಿ

ನಿನ್ನೆ ಸಂಜೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಬಿಡುಗಡೆಯ ಸಂಭ್ರಮಾಚರಣೆಯ ಪಾರ್ಟಿಯನ್ನು ನಿರ್ದೇಶಕ ಕರಣ್ ಜೋಹರ್ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿತ್ತು.

Ranveer Singh Deepika Padukone
ರಣ್​​​ವೀರ್ ಸಿಂಗ್ ದೀಪಿಕಾ ಪಡುಕೋಣೆ
author img

By

Published : Jul 29, 2023, 12:32 PM IST

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಶುಕ್ರವಾರ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರ ಭಾರತದಲ್ಲಿ 1.50 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿದೆ. ನಿನ್ನೆ ರಾತ್ರಿ ಚಿತ್ರದ ಪ್ರಮುಖ ನಟರಾದ ರಣ್​​​ವೀರ್ ಸಿಂಗ್ ಮತ್ತು ಆಲಿಯಾ ಭಟ್ ಅವರು ನಿರ್ದೇಶಕ ಕರಣ್ ಜೋಹರ್ ಮತ್ತು ತಂಡದ ಸದಸ್ಯರೊಂದಿಗೆ ತಮ್ಮ ಬಹು ನಿರೀಕ್ಷಿತ ಚಿತ್ರದ ಬಿಡುಗಡೆಯ ಸಂಭ್ರಮವನ್ನು ಆಚರಿಸಿದರು.

ಜುಲೈ 28 ರಂದು ಬಿಡುಗಡೆಯಾದ ಬಹುನಿರೀಕ್ಷಿತ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಸ್ವೀಕರಿಸಿದೆ. ಚಿತ್ರದ ನಿರ್ದೇಶಕ ಮತ್ತು ತಂಡ ನಿನ್ನೆ ಸಂಜೆ ಪಾರ್ಟಿಯೊಂದನ್ನು ಆಯೋಜಿಸಿದ್ದರು. ನಾಯಕ ನಟ ರಣ್​ವೀರ್​ ಸಿಂಗ್​​ ಪತ್ನಿ, ಬಾಲಿವುಡ್​ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಸಹ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ಸಿನಿಮಾದಲ್ಲಿನ ರಾಕಿ ಪಾತ್ರಕ್ಕಾಗಿ ಮೆಚ್ಚುಗೆ ಸ್ವೀಕರಿಸಿರುವ ನಟ ರಣ್​​ವೀರ್ ಸಿಂಗ್ ತಮ್ಮ ದುಬಾರಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಕರಣ್ ನಿವಾಸಕ್ಕೆ ಆಗಮಿಸಿದರು. ಈವೆಂಟ್​ಗೆ ವೈಟ್​ ಟಿ ಶರ್ಟ್, ಬ್ಲ್ಯಾಕ್​ ಕ್ಯಾಪ್, ಫೇಸ್​ ಮಾಸ್ಕ್ ಅನ್ನು ಆಯ್ದುಕೊಂಡಿದ್ದರು. ರಾಣಿ ಪಾತ್ರದಿಂದ ಪ್ರೇಕ್ಷಕರನ್ನು ಮೋಡಿ ಮಾಡಿರುವ ಆಲಿಯಾ ಭಟ್ ಸ್ವಲ್ಪ ಸಮಯದ ನಂತರ ಈ ಪಾರ್ಟಿಗೆ ಸೇರಿಕೊಂಡರು. ವೈಟ್​ ಡ್ರೆಸ್​, ಕನಿಷ್ಠ ಮೇಕ್​ ಅಪ್​ನಲ್ಲಿ ಬಹುಕಾಂತೀಯವಾಗಿ ಕಾಣಿಸಿಕೊಂಡರು.

ರಣ್​​​ವೀರ್ ಸಿಂಗ್​​ ಅವರ ಪತ್ನಿ ದೀಪಿಕಾ ಪಡುಕೋಣೆ ಕೂಡ ಪ್ರತ್ಯೇಕವಾಗಿ ಈ ಪಾರ್ಟಿಗೆ ಆಗಮಿಸಿ ಸರ್​ಪ್ರೈಸ್​ ಕೊಟ್ಟರು. ಪಠಾಣ್​ ನಟಿಯ ಎಂಟ್ರಿ ಕಾರ್ಯಕ್ರಮದ ಸಂಭ್ರಮ ಹೆಚ್ಚಿಸಿತು. ಗ್ರೀನ್​ ಪ್ರಿಂಟೆಡ್​ ಡ್ರೆಸ್, ಕನಿಷ್ಠ ಮೇಕ್ಅಪ್, ಫ್ರೀ ಹೇರ್ ​ಸ್ಟೈಲ್ ಮೂಲಕ ಎಂದಿನಂತೆ ಡಿಫ್ರೆಂಟ್​ ಸ್ಟೈಲ್​ನಲ್ಲಿ ಕಂಗೊಳಿಸಿದರು. ​

ಇದನ್ನೂ ಓದಿ: 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಮೊದಲ ದಿನದ ಕಲೆಕ್ಷನ್ ಡೀಟೆಲ್ಸ್​​

ಪ್ರತ್ಯೇಕವಾಗಿ ಆಗಮಿಸಿದ್ದ ದೀಪಿಕಾ ಮತ್ತು ರಣ್​​​ವೀರ್ ಕಾರ್ಯಕ್ರಮದಿಂದ ಒಟ್ಟಿಗೆ ತೆರಳಿದರು. ಕಾರಿನಲ್ಲಿ ಕುಳಿತ ಸ್ಟಾರ್​ ಕಪಲ್​​ ಸಂಭಾಷಣೆಯಲ್ಲಿ ಮಗ್ನರಾದರು. ಸಿನಿಮಾ ಬಿಡುಗಡೆಗೂ ಮುನ್ನ ಮುಂಬೈನಲ್ಲಿ ನಡೆದಿದ್ದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಪ್ರೀಮಿಯರ್​ಗೆ ದೀಪಿಕಾ ಆಗಮಿಸಿರಲಿಲ್ಲ. ನಗರದಿಂದ ಹೊರಗಿದ್ದ ತಾರೆ ಶುಕ್ರವಾರ ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ರಾತ್ರಿ ಕರಣ್​ ಜೋಹರ್​​ ಮನೆಯಲ್ಲಿ ಆಯೋಜನೆಗೊಂಡಿದ್ದ ಪಾರ್ಟಿಯಲ್ಲಿ ಭಾಗಿಯಾದರು. ಈ ಮೂಲಕ, ದೀಪಿಕಾ - ರಣ್​​ವಿರ್​ ನಡುವೆ ಭಿನ್ನಾಭಿಪ್ರಾಯಗಳಿವೆಯಾ? ಎಂಬ ಊಹಾಪೋಹಗಳಿಗೆ ಫುಲ್​ ಸ್ಟಾಪ್​ ಇಟ್ಟರು.

ಇದನ್ನೂ ಓದಿ: ಸಂಜಯ್​ ದತ್​ ಜನ್ಮದಿನ: ಬಿಗ್​ ಬುಲ್​ ಪೋಸ್ಟರ್ ಅನಾವರಣ - 'ಡಬಲ್ ಇಸ್ಮಾರ್ಟ್' ವಿಲನ್ ಇವ್ರು​

ಕರಣ್ ಜೋಹರ್ ಅವರ ಮುಂಬೈ ನಿವಾಸದಲ್ಲಿ ಆಯೋಜನೆಗೊಂಡಿದ್ದ ಈ ಪಾರ್ಟಿಗೆ ನಿರ್ದೇಶಕರಾದ ಜೋಯಾ ಅಖ್ತರ್ ಮತ್ತು ಅಯಾನ್ ಮುಖರ್ಜಿ ಸೇರಿದಂತೆ ಸಿನಿಮಾ ಕ್ಷೇತ್ರದ ಕೆಲ ಆಪ್ತ ಸ್ನೇಹಿತರು ಆಗಮಿಸಿದ್ದರು. ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದ ಬಾಲಿವುಡ್​ನ ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ಕೂಡ ಪಾರ್ಟಿಗೆ ಆಗಮಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.