ETV Bharat / entertainment

ಪ್ರಭಾಸ್ ​- ಪ್ರಶಾಂತ್​ ನೀಲ್​ ಕಾಂಬಿನೇಷನ್​​​​​​ನ​ ಸಲಾರ್​ ಟ್ರೈಲರ್​ ರಿಲೀಸ್​ಗೆ ಡೇಟ್​ ಫಿಕ್ಸ್​!?

author img

By ETV Bharat Karnataka Team

Published : Nov 6, 2023, 4:37 PM IST

Salaar trailer release date fix: ಡಿಸೆಂಬರ್​ 22 ರಂದೇ ಶಾರುಖ್​ ಅಭಿನಯದ ಡಂಕಿ ತೆರೆಗೆ ಬರಲಿದ್ದು, ಡಂಕಿ ಜೊತೆಗೆ ಸಲಾರ್​ ಬಾಕ್ಸ್​ ಆಫೀಸ್​ ಫೈಟ್​ಗೆ ತಯಾರಾಗಿದೆ.

Salaar Movie poster
ಸಲಾರ್​ ಸಿನಿಮಾದ ಪೋಸ್ಟರ್​

ಕೆಜಿಎಫ್​ ಖ್ಯಾತಿಯ ನಿರ್ದೇಶಕ ಪ್ರಶಾಂತ್​ ನೀಲ್​ ಹಾಗೂ ಟಾಲಿವುಡ್​ನ ಡಾರ್ಲಿಂಗ್​ ಪ್ರಭಾಸ್​ ಮೊದಲ ಭಾರಿಗೆ ಜೊತೆಯಾಗಿರುವ ಸಲಾರ್​ ಸಿನಿಮಾ ಈಗಾಗಲೇ ಡಿಸೆಂಬರ್​ 22 ರಂದು ತೆರೆಗೆ ಅಪ್ಪಳಿಸಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಇದೀಗ ಚಿತ್ರದ ಟ್ರೈಲರ್​ ರಿಲೀಸ್​ಗಾಗಿ ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರತಂಡ ಸಿಹಿ ಸುದ್ದಿ ನೀಡಿದೆ.

  • Bigg News : The much awaited Salaar : Part 1 Ceasefire trailer to be out on November end or early December. The actioner helmed by #PrashanthNeel and featuring #Prabhas is creating the excitement among the masses and the film will arrive in cinemas on scheduled date, December… pic.twitter.com/JWIsjIukUY

    — Ramesh Bala (@rameshlaus) November 5, 2023 " class="align-text-top noRightClick twitterSection" data=" ">

ಸಿನಿಮಾ ತೆಲುಗು ಹಾಗೂ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ಹಾಗೂ ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ಭಾರತದ ಮಾತ್ರವಲ್ಲದೇ ವಿಶ್ವಾದ್ಯಂತ ಅದ್ಧೂರಿಯಾಗಿ ಸಿನಿಮಾ ರಿಲೀಸ್​ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿದೆ. ಚಿತ್ರದ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚುತ್ತಿರುವುದನ್ನು ಗಮನಿಸಿರುವ ಚಿತ್ರತಂಡ ಸೋಷಿಯಲ್​ ಮೀಡಿಯಾದಲ್ಲಿ #50DaysToSalaarCeaseFire ಟ್ರೆಂಡ್​ ಪ್ರಾರಂಭಿಸಿದ್ದು, ಅದೀಗ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ.

ಇತ್ತೀಚಿಗೆ ಸಿನಿಮಾದ ಟ್ರೈಲರ್​ ರಿಲೀಸ್​ ಆಗುವ ಬಗ್ಗೆ ಸುದ್ದಿಯೊಂದು ವೈರಲ್​ ಆಗಿದೆ. ಸಲಾರ್​ ಸಿನಿಮಾದ ಟ್ರೈಲರ್​ ರಿಲೀಸ್​ ಫಿಕ್ಸ್​ ಆಗಿದ್ದು, ನವೆಂಬರ್​ ಕೊನೆಯ ವಾರದಲ್ಲಿ ಅಥವಾ ಡಿಸೆಂಬರ್​ ಮೊದಲ ವಾರದಲ್ಲಿ ಟ್ರೈಲರ್​ ರಿಲೀಸ್​ ಆಗುವ ಸಾಧ್ಯತೆ ಇದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಮಾಹಿತಿ ಹೊರ ಬೀಳಲಿದೆ ಎಂದು ವರದಿಯಾಗಿದೆ. ಇಂಡಸ್ಟ್ರಿ ಬಾಕ್ಸ್​​ ಆಫೀಸ್​ ವಿಶ್ಲೇಷಕ ರಮೇಶ್​ ಬಾಲಾ ಅವರು ಈ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಚಿತ್ರತಂಡದಿಂದ ಅಧಿಕೃತ ಮಾಹಿತಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಶಾರುಖ್​ ಡಂಕಿ ಜೊತೆ ಬಾಕ್ಸ್​ ಆಫೀಸ್​ ಫೈಟ್​: ಅದೇ ಡಿಸೆಂಬರ್​ 22ರಂದು ರಾಜ್​ಕುಮಾರ್​ ಹಿರಾನಿ ಆ್ಯಕ್ಷನ್​ ಕಟ್​ ಹೇಳಿರುವ ಶಾರುಖ್​ ಖಾನ್​ ಅಭಿನಯದ ಡಂಕಿ ಸಿನಿಮಾ ಕೂಡ ತೆರೆಗೆ ಬರಲಿದೆ. ಡಂಕಿ ಸಿನಿಮಾ ಜೊತೆಗೆ ಸಲಾರ್ ಸಿನಿಮಾ​ ಬಾಕ್ಸ್​ ಆಫೀಸ್​ ಫೈಟ್​ಗೆ ರೆಡಿಯಾಗಿದೆ. ಎರಡೂ ಸಿನಿಮಾಗಳ ಮೇಲೂ ಬಹುನಿರೀಕ್ಷೆ ಇದ್ದು, ಈ ಸಿನಿಮಾಗಳನ್ನು ಒಂದೇ ಬಾರಿಗೆ ಬಿಡುಗಡೆ ಮಾಡುವುದು ಸರಿಯಲ್ಲ ಎಂದು ಸಿನಿಮಾ ವಿಶ್ಲೇಷಕರು ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ ಸಲಾರ್​ ಮತ್ತೊಮ್ಮೆ ತನ್ನ ರಿಲೀಸ್​ ದಿನಾಂಕವನ್ನು ಮುಂದೂಡುವ ಸಾಧ್ಯತೆ ಇದೆ ಎನ್ನುವ ಸುದ್ದಿಯೂ ವೈರಲ್​ ಆಗುತ್ತಿದೆ. ಎರಡೂ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ನೇರಾನೇರ ಪೈಪೋಟಿ ನಡೆಸುತ್ತವೆಯಾ ಅಥವಾ ಯಾವುದಾದರೂ ಒಂದು ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡತ್ತದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

ಪ್ರಶಾಂತ್​ ನೀಲ್​ ಆ್ಯಕ್ಷನ್​ ಹೇಳುತ್ತಿರುವ ಈ ಸಿನಿಮಾದಲ್ಲಿ ನಟ ಪ್ರಭಾಸ್​ಗೆ ಜೋಡಿಯಾಗಿ, ಶೃತಿ ಹಾಸನ್​ ಅಭಿನಯಿಸುತ್ತಿದ್ದು, ಉಳಿದಂತೆ ಜಗಪತಿ ಬಾಬು, ಈಶ್ವರಿ ರಾವ್​, ಶ್ರಿಯಾ ರೆಡ್ಡಿ ಹಾಗೂ ಪೃಥ್ವಿರಾಜ್​ ಸುಕುಮಾರನ್​ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಹೊಂಬಾಳೆ ನಿರ್ಮಾಣ ಸಂಸ್ಥೆಯ ವಿಜಯ್​ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಎರಡು ಭಾಗಗಳಲ್ಲಿ ಸಿನಿಮಾ ತಯಾರಾಗುತ್ತಿದ್ದು, ಭಾರತದ ಭಾಷೆಗಳು ಮಾತ್ರವಲ್ಲದೇ ಅಂತಾರಾಷ್ಟ್ರೀಯ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ : 'ಡಂಕಿ' ಜೊತೆಗಿನ ಪೈಪೋಟಿಯಿಂದ ಹಿಂದೆ ಸರಿಯಿತೇ 'ಸಲಾರ್​'? ರಿಲೀಸ್​ ಡೇಟ್ ಮತ್ತೆ​ ಮುಂದೂಡಿಕೆ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.