ETV Bharat / entertainment

'ವಿಜಯ ಸಂಕೇಶ್ವರ ಜೀವನಾಧಾರಿತ ಸಿನಿಮಾ ಮೆಗಾಹಿಟ್ ಆಗಲಿದೆ': ಟ್ರೈಲರ್‌ ಬಿಡುಗಡೆಗೊಳಿಸಿದ ಸಿಎಂ - ವಿಜಯ ಸಂಕೇಶ್ವರ ಜೀವನಾಧಾರಿತ ಸಿನಿಮಾ

ವಿಜಯಾನಂದ ಸಿನಿಮಾದ ಟ್ರೈಲರ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ‌ ಬಿಡುಗಡೆ ಮಾಡಿದರು. ಡಿಸೆಂಬರ್ 9 ರಂದು ಜಗತ್ತಿನಾದ್ಯಂತ 1,400 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ.

Vijayananda Movie trailer Released
ವಿಜಯಾನಂದ ಸಿನಿಮಾ ಟ್ರೈಲರ್ ಬಿಡುಗಡೆ
author img

By

Published : Nov 20, 2022, 8:25 AM IST

Updated : Nov 20, 2022, 9:04 AM IST

ಕನ್ನಡದ ಹೆಸರಾಂತ ಉದ್ಯಮಿ ವಿಜಯ ಸಂಕೇಶ್ವರ್ ಅವರ ಜೀವನಾಧಾರಿತ ಸಿನಿಮಾ 'ವಿಜಯಾನಂದ'. ಈ ಸಿನಿಮಾದ ಅಫೀಶಿಯಲ್ ಟ್ರೈಲರ್ ಅನ್ನು ಬೆಂಗಳೂರಿನ ಒರಾಯನ್‌ ಮಾಲ್‌ನಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಕನ್ನಡ ಟ್ರೈಲರ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ‌ ಬಿಡುಗಡೆ ಮಾಡಿ, ವಿಜಯ ಸಂಕೇಶ್ವರ್ ಅವರಿಗೆ ಯಶಸ್ಸಿನ ಹಸಿವಿದೆ‌.‌ ಏನಾದರೂ ಹೊಸದನ್ನು ಮಾಡುತ್ತಲೇ ಇರುತ್ತಾರೆ. ವಯಸ್ಸಿನ ಹಂಗು ಅವರಿಗಿಲ್ಲ. ಅವರ ಜೀವನಾಧಾರಿತ ಚಿತ್ರ ಮೆಗಾ ಹಿಟ್ ಆಗಲಿದೆ ಎಂದರು.

ವಿಜಯ ಸಂಕೇಶ್ವರ್ ಅಡ್ವೆಂಚರ್ ಮನೋಭಾವದವರು. ಇಡೀ ಜಗತ್ತು ಎಲ್ಲಿ ಹೋಗಬೇಡ ಅನ್ನುತ್ತದೋ ಅಲ್ಲಿಗೆ ಹೋಗ್ತಾರೆ. ಯಾವುದನ್ನು ಮಾಡಬೇಡ ಅನ್ನುತ್ತಾರೋ ಅದನ್ನೇ ಮಾಡ್ತಾರೆ. ಅವರು ನೋ ಎನ್ನುವುದನ್ನು ಸ್ಪಷ್ಟವಾಗಿ ಹೇಳ್ತಾರೆ. ನೋ ಅಂತ ಹೇಳಲು ಎಲ್ಲರಿಗೂ ಆಗುವುದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • " class="align-text-top noRightClick twitterSection" data="">

1,400 ಸ್ಕ್ರೀನ್‌ಗಳಲ್ಲಿ ಪ್ರದರ್ಶನ: ಡಿಸೆಂಬರ್ 9 ರಂದು ಸಿನಿಮಾ ಬಿಡುಗಡೆ ಆಗಲಿದ್ದು, 1,400 ಸ್ಕ್ರೀನ್‌ಗಳಲ್ಲಿ ತೆರೆ ಕಾಣಲಿದೆ. ಅಮೆರಿಕದ 200 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣಲಿದೆ.

ಆರೋಗ್ಯ ಸಚಿವ ಡಾ.ಕೆ ಸುಧಾಕರ್, ವಿಆರ್‌ಎಲ್ ಸಮೂಹ ಸಂಸ್ಥೆಗಳ ಸಿಎಂಡಿ ವಿಜಯ್ ಸಂಕೇಶ್ವರ್, ಲಲಿತಾ ವಿಜಯ ಸಂಕೇಶ್ವರ್, ಆನಂದ ಸಂಕೇಶ್ವರ ಹಾಗು ಚಿತ್ರದ ನಿರ್ದೇಶಕಿ ರಿಶಿಕಾ ಶರ್ಮಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದನ್ನೂ ಓದಿ:ಸೆನ್ಸಾರ್ ಪರೀಕ್ಷೆಯಲ್ಲಿ 'ಲಂಕಾಸುರ' ಪಾಸ್

Last Updated : Nov 20, 2022, 9:04 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.