ETV Bharat / entertainment

ಪ್ಲಾಸ್ಟಿಕ್ ಸರ್ಜರಿ ಬಳಿಕ ನಟಿ ಹೃದಯಾಘಾತದಿಂದ ನಿಧನ! - Christina Ashten Gourkani heart attack

ಕ್ರಿಸ್ಟಿನಾ ಆಶ್ಟೆನ್ ಗೌರ್ಕಾನಿ ಹೃದಯ ಸ್ತಂಭನಕ್ಕೊಳಗಾಗಿ ಕೊನೆಯುಸಿರೆಳೆದ್ದಾರೆ.

Christina Ashten Gourkani
ಕ್ರಿಸ್ಟಿನಾ ಆಶ್ಟೆನ್ ಗೌರ್ಕಾನಿ
author img

By

Published : Apr 28, 2023, 2:14 PM IST

Updated : Apr 28, 2023, 2:29 PM IST

ಲಾಸ್ ಏಂಜಲೀಸ್: ಹಾಲಿವುಡ್​ ತಾರೆ ಕಿಮ್ ಕಾರ್ಡಶಿಯಾನ್ (Kim Kardashian) ಅವರನ್ನೇ ಹೋಲುವ ಕ್ರಿಸ್ಟಿನಾ ಆಶ್ಟೆನ್ ಗೌರ್ಕಾನಿ (Christina Ashten Gourkani) ಅವರು ಪ್ಲಾಸ್ಟಿಕ್ ಸರ್ಜರಿ ನಂತರ ಹೃದಯ ಸ್ತಂಭನಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ಕೇವಲ 34ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದು, ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ.

ವರದಿ ಪ್ರಕಾರ, ಕ್ರಿಸ್ಟಿನಾ ಆಶ್ಟೆನ್ ಗೌರ್ಕಾನಿ ಏಪ್ರಿಲ್​ 20ರಂದು ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಮುಂದಿನ ವಾರ ನಿಗದಿಪಡಿಸಲಾಗಿದೆ. ಅವರ ಕುಟುಂಬವು ಅದಕ್ಕಾಗಿ ಹಣವನ್ನು ಸಂಗ್ರಹಿಸಲು GoFundMe ಪುಟವನ್ನು ಪ್ರಾರಂಭಿಸಿದೆ. ನಮ್ಮ ಸುಂದರ, ಪ್ರೀತಿಯ ಮಗಳು ಮತ್ತು ಸಹೋದರಿ ಕ್ರಿಸ್ಟಿನಾ ಆಶ್ಟೆನ್ ಗೌರ್ಕಾನಿ ಅವರ ದುರದೃಷ್ಟಕರ, ಅನಿರೀಕ್ಷಿತ ಮರಣದ ಸುದ್ದಿ ಹಂಚಿಕೊಳ್ಳುತ್ತಿದ್ದು, ಹೃದಯ ಆಳವಾದ ದುಃಖ ಮತ್ತು ಭಾರದಿಂದ ಕೂಡಿದೆ ಎಂದು ಅವರ ಕುಟುಂಬವು GoFundMe page.oneyನಲ್ಲಿ ಬರೆದುಕೊಂಡಿದೆ.

ಇನ್​ಸ್ಟಾಗ್ರಾಮ್​ ಪೇಜ್​ಗಳಲ್ಲಿ ಕಿಮ್ ಕಾರ್ಡಶಿಯಾನ್ ಅವರ ಅವರ ನೋಟ ಮತ್ತು ಭಂಗಿಗಳನ್ನು ಮರುಸೃಷ್ಟಿಸುತ್ತಿದ್ದರು. ಸಂದರ್ಶನವೊಂದರಲ್ಲಿ ಕ್ರಿಸ್ಟಿನಾ ಆಶ್ಟೆನ್ ಗೌರ್ಕಾನಿ ಅವರ ಮಾತಿನ ಮಾದರಿಯು ಕಾರ್ಡಶಿಯಾನ್ ಅವರ ಮಾತಿನ ಮಾದರಿಯನ್ನು ಅನುಕರಿಸುವಂತಿತ್ತು. ಒಟ್ಟಾರೆ ಕಿಮ್ ಕಾರ್ಡಶಿಯಾನ್ ಅಭಿಮಾನಿಯಾಗಿದ್ದು, ಅವರನ್ನೇ ಹೋಲುವ ಪ್ರಯತ್ನ ಮಾಡುತ್ತಿದ್ದರು. ಕಿಮ್ ಕಾರ್ಡಶಿಯಾನ್ ಅವರನ್ನೇ ಹೋಲುವಂತಿದ್ದರು ಕ್ರಿಸ್ಟಿನಾ ಆಶ್ಟೆನ್ ಗೌರ್ಕಾನಿ.

ಕಿಮ್ ಕಾರ್ಡಶಿಯಾನ್​ ಅಮರಿಕನ್​ ಸಿನಿಮಾ ಕ್ಷೇತ್ರದ ಪ್ರಸಿದ್ಧ​ ರಿಯಾಲಿಟಿ ಶೋಗಳ ನಿರೂಪಕಿ. ತುಂಡುಡುಗೆ ಧರಿಸಿ ಫೋಟೋಗಳಿಗೆ ಪೋಸ್​​ ನೀಡುವುದು ಎಂದರೆ ಎಲ್ಲಿಲ್ಲದ ಆಸಕ್ತಿ. ಇವರ ಸಾಮಾಜಿಕ ಜಾಲತಾಣಕ್ಕೆ ಭೇಟಿ ಕೊಟ್ಟರೆ ಕೇವಲ ತುಂಡುಡುಗೆ ಫೋಟೋಗಳೇ ಸಿಗಲಿದೆ. ಅರೆ ನಗ್ನ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಾರೆ. ಈ ನಟಿ ಅದೆಷ್ಟೋ ನಟಿಮಣಿಯರಿಗೆ ಸ್ಫೂರ್ತಿ. ಅವರಂತೆ ಕಾಣಲು ಹಲವರು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿರುವ ಉದಾಹರಣೆಗಳಿವೆ.

ಇದನ್ನೂ ಓದಿ: 'ಕೆಡಿ' ಆ್ಯಕ್ಷನ್ ಪ್ರಿನ್ಸ್ ರಾಣಿಯಾಗಿ ರೀಷ್ಮಾ ನಾಣಯ್ಯ; ಫಸ್ಟ್ ಲುಕ್ ಔಟ್​

ಕಿಮ್ ಕಾರ್ಡಶಿಯನ್ ಅವರಂತೆ ಕಾಣಲು ನಟಿ, ರೂಪದರ್ಶಿ ಜೆನ್ನಿಫರ್ ಪ್ಯಾಂಪ್ಲೋನಾ ಕೂಡಾ ಪ್ಲಾಸ್ಟಿಕ್​ ಸರ್ಜರಿಗೆ ಒಳಗಾಗಿದ್ದರು. ಒಂದಲ್ಲ, ಎರಡಲ್ಲ ಬರೋಬ್ಬರಿ 40ಕ್ಕೂ ಹೆಚ್ಚು ಬಾರಿ. ಅದಕ್ಕೆ ತೃಪ್ತಿಯಾಗದೇ ಮತ್ತೆ ಮೊದಲಿನಂತೆ ಕಾಣುವಂತೆ ಸರ್ಜರಿ ಮಾಡಿಸಿಕೊಂಡಿದ್ದರು. 12 ವರ್ಷಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡು ಕಳೆದ ವರ್ಷ ಬಾರಿ ಸುದ್ದಿಯಾಗಿದ್ದರು. ಸರ್ಜರಿಗಾಗಿ ಕೋಟಿಗಟ್ಟಲೇ ಖರ್ಚು ಕೂಡ ಮಾಡಿದ್ದರು.

ಇದನ್ನೂ ಓದಿ: ಜಿಯಾ ಖಾನ್​​ ಆತ್ಮಹತ್ಯೆ ಪ್ರಕರಣ: ಸೂರಜ್ ಪಾಂಚೋಲಿ ನಿರ್ದೋಷಿ..ಕೋರ್ಟ್​​ ಮಹತ್ವದ ತೀರ್ಪು

ವಿಶ್ವದ ಸಂಗೀತಗಾರರ ಆರಾಧ್ಯದೈವ ಎಂದೇ ಕರೆಸಿಕೊಳ್ಳುತ್ತಿದ್ದ ಮೈಕಲ್​ ಜಾನ್ಸನ್​ ಸಾವು ಸಹ ಇಂತದ್ದೊಂದು ಚರ್ಚೆ ಹುಟ್ಟು ಹಾಕಿತ್ತು. ಇವರು ಹಲವು ಬಾರಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದರು ಎಂಬ ಮಾತುಗಳಿವೆ. ಇದೇ ಅವರ ಅಕಾಲಿಕ ಸಾವಿಗೆ ಕಾರಣವಾಯಿತು ಎಂಬ ಚರ್ಚೆಗಳಿವೆ. ಇದೀಗ ಕ್ರಿಸ್ಟಿನಾ ಆಶ್ಟೆನ್ ಗೌರ್ಕಾನಿ ಪ್ಲಾಸ್ಟಿಕ್​ ಸರ್ಜರಿ ನಂತರ ಹೃದಯ ಸ್ತಂಭನಕ್ಕೆ ಒಳಗಾಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

Last Updated : Apr 28, 2023, 2:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.