ETV Bharat / entertainment

ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಬಿಟೌನ್​ ಸ್ಟಾರ್ಸ್ - ಸಲ್ಲು, ಸಿದ್ ​ಕಿಯಾರಾ, ವಿಕ್ಕಿ ಫೋಟೋ ವೈರಲ್​! - ವಿಕ್ಕಿ ಕೌಶಲ್

Bollywood actors: ಬಾಲಿವುಡ್​ ಕಲಾವಿದರು ಮುಂಬೈ ನಗರಾದ್ಯಂತ ಕಾಣಿಸಿಕೊಂಡಿದ್ದಾರೆ.

Bollywood actors spotted at Mumbai
ಮುಂಬೈನಲ್ಲಿ ಬಿಟೌನ್​ ಸ್ಟಾರ್ಸ್
author img

By

Published : Aug 5, 2023, 1:43 PM IST

ಮುಂಬೈ ನಗರಾದ್ಯಂತ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಬಾಲಿವುಡ್​ ತಾರೆಯರು ಸೆರೆಯಾಗಿದ್ದಾರೆ. ಬಾಲಿವುಡ್​ ಕ್ಯೂಟ್​ ಕಪಲ್ ಸಿದ್ಧಾರ್ಥ್ ಮಲ್ಹೋತ್ರಾ - ಕಿಯಾರಾ ಅಡ್ವಾಣಿ, ನಟ ವಿಕ್ಕಿ ಕೌಶಲ್​​, ಸೂಪರ್ ಸ್ಟಾರ್ ಸಲ್ಮಾನ್​ ಖಾನ್ ಅವರ ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅಭಿಮಾನಿಗಳು ತಮ್ಮ ಮೆಚ್ಚಿನ ತಾರೆಯರಿಗೆ ಪ್ರೀತಿಯ ಮಳೆ ಸುರಿಸುತ್ತಿದ್ದಾರೆ. ​

ಸಿದ್​ಕಿಯಾರಾ ಕಪಲ್... ಬಾಲಿವುಡ್​ ಬಹುಬೇಡಿಕೆ ನಟಿ ಕಿಯಾರಾ ಅಡ್ವಾಣಿ ಜುಲೈ 31ರಂದು ತಮ್ಮ 31ನೇ ಬರ್ತ್ ಡೇ ಸೆಲೆಬ್ರೇಟ್​ ಮಾಡಿಕೊಂಡಿದ್ದರು. ಹುಟ್ಟುಹಬ್ಬ ಆಚರಿಸಲು ಪತಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಇಟಲಿಗೆ ಪ್ರಯಾಣ ಬೆಳೆಸಿದ್ದರು. ವಿದೇಶದ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡಿತ್ತು. ವಾರಗಳ ಕಾಲ ವಿದೇಶದಲ್ಲೇ ತಂಗಿದ್ದರು. ತಾರಾ ದಂಪತಿ ಶುಕ್ರವಾರ ರಾತ್ರಿ ಮುಂಬೈಗೆ ಮರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ದೊಡ್ಡ ಲಗೇಜ್​ ಬ್ಯಾಗ್​ಗಳನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಇವರ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣ ಸುತ್ತುವರಿಯುತ್ತಿದ್ದು, ಅಭಿಮಾನಿಗಳು ಮೆಚ್ಚುಗೆಯ ಮಳೆ ಸುರಿಸುತ್ತಿದ್ದಾರೆ. ಎಂತಹ ಸುಂದರ ಜೋಡಿ, ಯಾರ ದೃಷ್ಟಿಯೂ ತಾಗದಿರಲಿ ಎಂದೆಲ್ಲ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಉಳಿದಂತೆ ರೆಡ್​ ಹಾರ್ಟ್, ಫೈಯರ್​ ಎಮೋಜಿ ಕಾಮೆಂಟ್​ ಸೆಕ್ಷನ್​​ನಲ್ಲಿ ತುಂಬಿ ತುಳುಕುತ್ತಿದೆ.

ನಟ ವಿಕ್ಕಿ ಕೌಶಲ್... ಶುಕ್ರವಾರ ರಾತ್ರಿ ಮುಂಬೈ ನಗರದಲ್ಲಿ ನಟ ವಿಕ್ಕಿ ಕೌಶಲ್​ ಕೂಡ ಕಾಣಿಸಿಕೊಂಡಿದ್ದಾರೆ. ಈವೆಂಟ್​ ಒಂದರಲ್ಲಿ ಭಾಗಿಯಾಗುವ ಸಲುವಾಗಿ ಹೊರಗೆ ಬಂದಿದ್ದ ವಿಕ್ಕಿ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಸೂಟು ಬೂಟು ಧರಿಸಿ ಬಂದಿದ್ದ ವಿಕ್ಕಿ ಫಿಟ್​ ಆ್ಯಂಡ್​ ಫೈನ್​ ಆಗಿ ಕಾಣಿಸಿಕೊಂಡರು. ಬಹುಬೇಡಿಕೆ ನಟ ವಿಕ್ಕಿ ಕೌಶಲ್​ ನೋಟಕ್ಕೆ ಮನಸೋತ ಅಭಿಮಾನಿಗಳು ಕಾಮೆಂಟ್​ ಸೆಕ್ಷನ್​ನಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ಕಿ ನಮಗೆ ಸ್ಫೂರ್ತಿ, ನ್ಯಾಷನಲ್​ ಕ್ರಶ್​, ಶ್ರಮಜೀವಿ ಎಂದೆಲ್ಲಾ ಕಾಮೆಂಟ್​ ಮಾಡುತ್ತಿದ್ದಾರೆ. ರೆಡ್​ ಹಾರ್ಟ್, ಫೈಯರ್​ ಎಮೋಜಿಗಳು ಸಹಜವಾಗಿವೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದವರ ಪೈಕಿ ವಿಕ್ಕಿ ಕೌಶಲ್​ ಕೂಡ ಓರ್ವರು.

ಇದನ್ನೂ ಓದಿ: ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ ವದಂತಿ: 'ವೃತ್ತಿಜೀವನದಲ್ಲಿ ಸಾಕಷ್ಟು ಸಂಪಾದಿಸಿದ್ದೇನೆ' ಎಂದ ಸಮಂತಾ ರುತ್​ ಪ್ರಭು

ಸೂಪರ್​ ಸ್ಟಾರ್​ ಸಲ್ಮಾನ್ ಖಾನ್... ಇನ್ನು ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್ ಖಾನ್ ಕೂಡ ಮುಂಬೈ ನಗರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರಿಯ ಸಹೋದರ ಅರ್ಬಾಜ್​ ಖಾನ್​​ ಬರ್ತ್ ಡೇ ಪಾರ್ಟಿಯಲ್ಲಿ ನಟ ಕಾಣಿಸಿಕೊಂಡರು. ಈವೆಂಟ್​ಗೆ ಆಗಮಿಸಿದ್ದ ಸಲ್ಲು ಪಿಂಕ್​ ಪ್ಯಾಂಟ್​ ಧರಿಸಿದ್ದರು. ಈ ಬಗ್ಗೆ ಅಭಿಮಾನಿಗಳು ಆಸಕ್ತಿದಾಯಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ ಭಾಯ್​​ ಬಾರ್ಬಿ ಸಿನಿಮಾ ಪ್ರಮೋಶನ್​ ಮಾಡುತ್ತಿದ್ದಾರೆ ಎಂದು ಕಾಮೆಂಟ್​ ಮಾಡಿದ್ದಾರೆ. ಬಾಲಿವುಡ್​ ಬ್ಯಾಚುಲರ್​ನ ಫೋಟೋಗಳು ವೈರಲ್​ ಆಗುತ್ತಿವೆ.

ಇದನ್ನೂ ಓದಿ: Actress Kajol Birthday: ಎವರ್​ಗ್ರೀನ್​ ಬ್ಯೂಟಿ ಕಾಜೋಲ್​​ ದೇವಗನ್​ಗೆ 49ರ ಸಂಭ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.