ETV Bharat / entertainment

ಬಹುನಿರೀಕ್ಷಿತ 'ಬೆಂಗಳೂರು ಬಾಯ್ಸ್'​ ಚಿತ್ರದ ಟ್ರೇಲರ್​ ಔಟ್​: ನೀವೂ ನೋಡಿ..! - ಈಟಿವಿ ಭಾರತ ಕನ್ನಡ

'ಬೆಂಗಳೂರು ಬಾಯ್ಸ್' ಚಿತ್ರದ ಟ್ರೇಲರ್​ ಬಿಡುಗಡೆ ಆಗಿದ್ದು, ಕೆಲವೇ ಗಂಟೆಗಳಲ್ಲಿ ಉತ್ತಮ ವೀಕ್ಷಣೆ ಪಡೆದಿದೆ.

bengaluru boys
ಬೆಂಗಳೂರು ಬಾಯ್ಸ್
author img

By

Published : Jun 1, 2023, 9:36 PM IST

ಸದ್ಯ ಪೋಸ್ಟರ್ ಹಾಗೂ ಹಾಡುಗಳಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಟಾಕ್ ಆಗುತ್ತಿರುವ ಚಿತ್ರ 'ಬೆಂಗಳೂರು ಬಾಯ್ಸ್'. 90ರ ದಶಕದ ನಾಲ್ಕು ಐಕಾನಿಕ್‌ ಕ್ಯಾರೆಕ್ಟರ್‌ಗಳಾದ 'ಓಂ' ಚಿತ್ರದ ಶಿವಣ್ಣ, 'ಎ' ಚಿತ್ರದ ಉಪೇಂದ್ರ, 'ರಣಧೀರ' ಸಿನಿಮಾದ ರವಿಚಂದ್ರನ್‌, 'ಅಂತ' ಸಿನಿಮಾದ ಅಂಬರೀಶ್​ ಅವತಾರದಲ್ಲಿ ಈ ಚಿತ್ರದ ನಾಲ್ಕು ಜನ ನಾಯಕರಾದ ಸಚಿನ್, ಅಭಿದಾಸ್, ಚಂದನ್‌ ಆಚಾರ್‌, ರೋಹಿತ್‌ ಫಸ್ಟ್ ಲುಕ್ ಅನಾವರಣ ಮಾಡಿ ಸ್ಯಾಂಡಲ್​ವುಡ್​ನಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದ್ದಾರೆ.

  • " class="align-text-top noRightClick twitterSection" data="">

ಇದೀಗ ಬೆಂಗಳೂರು ಬಾಯ್ಸ್ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದ್ದು, ಸಿನಿ ಪ್ರೇಮಿಗಳ ಮನಸ್ಸು ಕದಿಯುವ ಎಲ್ಲ ಲಕ್ಷಣಗಳು ಕಾಣ್ತಾ ಇದೆ. "ಮೊದಲು ಮನೆಯವರು ನಮ್ಮ ಮಕ್ಕಳು ಹಂಗೇ ಹಾಕ್ತಾರೆ, ಹಿಂಗೇ ಹಾಕ್ತಾರೆ ಅಂದರು ಕೊನೆಗೆ ಅನ್ನೋದು ಕಳ್ಳ ನನ್ ಮಕ್ಳೆ" ಎಂಬ ಪಂಚಿಂಗ್ ಡೈಲಾಗ್​ನಿಂದ ಶುರುವಾಗುವ ಬೆಂಗಳೂರು ಬಾಯ್ಸ್ ಚಿತ್ರದ ಟ್ರೇಲರ್​ ಮೋಜು, ಮಸ್ತಿ, ಎಮೋಷನಲ್​ ಹಾಗೂ ಸೆಂಟಿಮೆಂಟ್​ನಿಂದ ಕೂಡಿದೆ. ಕಾಲೇಜಿನಲ್ಲಿ ಕೊನೆಯ ಬೆಂಚಿನ ಹುಡುಗರು ವೇಸ್ಟ್‌ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಅದೇ ಹುಡುಗರು ಬದುಕಿನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ಉದಾಹರಣೆಗಳು ಸಾಕಷ್ಟಿವೆ. ಇಂತಹದ್ದೇ ಕಥೆಯನ್ನು ಹೊಂದಿರುವ ಸಿನಿಮಾವೇ ಬೆಂಗಳೂರು ಬಾಯ್ಸ್.

ಈ ಚಿತ್ರದಲ್ಲಿ ನಾಯಕರಾಗಿ ಸಚಿನ್, ಅಭಿದಾಸ್, ಚಂದನ್‌ ಆಚಾರ್‌, ರೋಹಿತ್‌ ಬಾನು ಪ್ರಕಾಶ್ ಪಕ್ಕಾ ಬೆಂಗಳೂರು ಬಾಯ್ಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ನಾಲ್ಕು ಜನ ಹುಡುಗರಿಗೆ ವೈನಿಧಿ ಜಗದೀಶ್‌, ಸೋನಿ, ಜಯಶ್ರೀ ಆರಾಧ್ಯ, ಪ್ರಗ್ಯಾ ನಯನ ಎಂಬ ನಾಲ್ಕು ಸುಂದರಿ ಬೆಡಗಿಯರು ಜೊತೆಯಾಗಿದ್ದಾರೆ. ಈ ಮಧ್ಯೆ ನಟ ಚಿಕ್ಕಣ ಪಾತ್ರ ವಿಭಿನ್ನವಾಗಿದ್ದು, ಐಟಿಬಿಟಿ ಉದ್ಯೋಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇವರ ಜೊತೆ ಹಿರಿಯ ನಟ ಉಮೇಶ್, ಪಿ ಡಿ ಸತೀಶ್, ಮೋಹನ್ ಜುನೇಜಾ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಪ್ರತಿಯೊಬ್ಬರ ಕಾಲೇಜು ಲೈಫ್‌ನಲ್ಲಿ ತರ್ಲೆ, ತಮಾಷೆ ಹಾಗೂ ರೊಮ್ಯಾನ್ಸ್‌ ನಡೆದಿರುತ್ತದೆ. ಇಂತಹ ತರಲೆ, ತಮಾಷೆ ಮತ್ತು ಭಾವನಾತ್ಮಕ ಅಂಶಗಳೇ ಬೆಂಗಳೂರು ಬಾಯ್ಸ್ ಸಿನಿಮಾದ ಸ್ಟ್ರೈಂಥ್ ಆಗಿದೆ.

ಆಲ್ ಮೋಸ್ಟ್ ಶೂಟಿಂಗ್ ಮುಗಿಸಿ ಬಿಡುಗಡೆ ರೆಡಿಯಾಗಿರೋ ಬೆಂಗಳೂರು ಬಾಯ್ಸ್ ಸಿನಿಮಾವನ್ನು 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ಖ್ಯಾತಿಯ ಗುರುದತ್‌ ಗಾಣಿಗ ಕ್ರಿಯೇಟಿವ್‌ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ರವಿ ಶ್ರೀರಾಮ್ ಈ ಸಿನಿಮಾಗೆ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು, ರಿಜೋ ಪಿ ಜಾನ್ ಕ್ಯಾಮರ ವರ್ಕ್ ಇದೆ. ಶಾನೆ ಟಾಪಗೌಳೆ ಅಂತಹ ಹಿಟ್ ಹಾಡುಗಳನ್ನು ನೀಡಿರುವ ಸಂಗೀತ ನಿರ್ದೇಶಕ ಧರ್ಮ ವಿಶ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸಿನಿಮಾ ಆಸಕ್ತಿ ಹೊಂದಿರುವ ತೆಲುಗು ಮೂಲದ ವಿಕ್ರಮ್‌ ಕೆ.ವೈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಬೆಂಗಳೂರು ಬಾಯ್ಸ್ ಸಿನಿಮಾವನ್ನು ಇದೇ ತಿಂಗಳಲ್ಲಿ ತೆರೆಗೆ ತರಲು ನಿರ್ಮಾಪಕ ವಿಕ್ರಮ್ ಪ್ಲಾನ್ ಮಾಡಿದ್ದಾರೆ.

ಇದನ್ನೂ ಓದಿ: 'ಫೇವರಿಟ್​​​ ಗರ್ಲ್​'.. ಸಮಂತಾಳ ಮೆಚ್ಚಿಕೊಂಡ ವಿಜಯ್​​ ದೇವರಕೊಂಡ; ವೈರಲ್​ ಆಯ್ತು ಸ್ಯಾಮ್​ ಪೋಸ್ಟ್!​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.