ಹೈದರಾಬಾದ್: ಹೊಸ ವರ್ಷ ಸಂಭ್ರಮಾಚರಣೆಗೆ ಜಗತ್ತು ಸಿದ್ದವಾಗಿದ್ದು, ಈ ಕ್ಷಣಗಳನ್ನು ತಮ್ಮ ಆತ್ಮೀಯರ ಜೊತೆ ಕಳೆಯಲು ಬಾಲಿವುಡ್ ಮಂದಿ ಕೂಡ ಮುಂದಾಗಿದ್ದಾರೆ. ಈಗಾಗಲೇ ಅನೇಕ ಜೋಡಿಗಳು ಹೊಸ ವರ್ಷ ಬರಮಾಡಿಕೊಳ್ಳಲು ವಿದೇಶಕ್ಕೆ ಹಾರುತ್ತಿದ್ದಾರೆ. ಇದೀಗ ಹಿಂದಿ ಚಿತ್ರರಂಗದ ಮತ್ತೊಂದು ಜೋಡಿ ಹಕ್ಕಿಗಳಾಗಿ ಗುರುತಿಸಿಕೊಂಡಿರುವ ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯ ಪಾಂಡೆ ಜೊತೆಯಾಗಿದ್ದಾರೆ. ಬುಧವಾರ ಮುಂಜಾನೆ ಇಬ್ಬರೂ ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ಯಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ.
ಬಾಲಿವುಡ್ನ ಈ ರೂಮರ್ಡ್ ಜೋಡಿಗಳು ಪ್ರತ್ಯೇಕವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಇವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರು ಕೂಡ ಚಳಿಗಾಲದ ಉಡುಗೆಯಲ್ಲಿ ವಿಮಾನ ನಿಲ್ದಾಣದಲ್ಲಿ ಕಂಡು ಬಂದಿದ್ದಾರೆ. ಆದಿತ್ಯ ರಾಯ್ ಕಪೂರ್ ಕಪ್ಪು ಬಣ್ಣದ ಹ್ಯಾಟ್ ಹಾಕಿ ಸಾಮಾನ್ಯ ಟೀಶರ್ಟ್ ಟ್ರೌಶರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಕಂದು ಬಣ್ಣದ ಕೋಟ್ ಹಾಕಿ ಗಮನ ಸೆಳೆದರು.
ಮತ್ತೊಂದೆಡೆ ಡ್ರೀಮ್ ಗರ್ಲ್ 2 ಚಿತ್ರದ ನಟಿ, ಸಡಿಲವಾದ ಹೂಡಿ ಮೇಲೆ ಜಾಕೆಟ್ ಹೊದ್ದು, ಕ್ರೀಮ್ ಬಣ್ಣದ ಟ್ರೌಶರ್ನಲ್ಲಿ ಕಂಡು ಬಂದಿದ್ದಾರೆ. ಇವರ ಕ್ಯಾಪ್ ಕೂಡ ಗಮನ ಸೆಳೆಯಿತು.
ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಇಬ್ಬರ ನಡುವೆ ಪ್ರೀತಿ ನಡೆಯುತ್ತಿದೆ ಎಂಬ ಗಾಳಿ ಸುದ್ದಿ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರೂ ಆಗ್ಗಾಗ್ಗ ಒಟ್ಟಿಗೆ ರಜೆಯನ್ನು ಒಟ್ಟಿಗೆ ಕಳೆಯುತ್ತಿರುವುದು ಕಂಡು ಬಂದಿದೆ. ಇವರ ಪದೇ ಪದೇ ಔಟಿಂಗ್ಗಳ ಅನೇಕ ಫೋಟೋ ಮತ್ತು ವಿಡಿಯೋಗಳು ಆನ್ಲೈನ್ನಲ್ಲಿ ಹರಿದಾಡುತ್ತಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಇವರ ಸಂಬಂಧ ಕುರಿತು ಒಂದು ಪ್ರಶ್ನೆ ಕೂಡ ಇರುತ್ತದೆ. ಇತ್ತೀಚೆಗೆ ಅಕ್ಟೋಬರ್ 30ರಂದು ಅನನ್ಯಾ ಅವರ 25ನೇ ಹುಟ್ಟುಹಬ್ಬದ ಆಚರಣೆಗೆ ವಿದೇಶಕ್ಕೆ ತೆರಳಿದ್ದರು.
ಅನನ್ಯಾ ಮತ್ತು ಆದಿತ್ಯಾ ಅವರ ನಡುವಿನ ಈ ಸಂಬಂಧ ಕಳೆದ ವರ್ಷ ಕೃತಿ ಸನೋನ್ ಮನೆಯಲ್ಲಿ ನಡೆದ ದೀಪಾವಳಿ ಆಚರಣೆ ವೇಳೆ ಆರಂಭವಾಯಿತು. ಇನ್ನು ಈ ಗಾಳಿ ಸುದ್ದಿಯನ್ನು ಈ ಇಬ್ಬರೂ ಸ್ಪಷ್ಟಪಡಿಸಿಲ್ಲ. ವೃತ್ತಿಯಡೆಗೆ ನೋಡುವುದಾದರೆ ಅನನ್ಯಾ, ಕಾಲ್ ಮೀ ಬೆ ಎಂಬ ಒಟಿಟಿ ಸೀರಿಸ್ನಲ್ಲಿ ನಟಿಸುತ್ತಿದ್ದಾರೆ. ಇತ್ತ ನಟ ಆದಿತ್ಯ ಅನುರಾಗ್ ಬಸು ಅವರ ಮೆಟ್ರೋ.. ಇನ್ ಡಿನೋದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಪುತ್ರಿ ರಾಹಾ ಜೊತೆ ಪ್ರವಾಸ ಹೊರಟ ರಣ್ಬೀರ್, ಆಲಿಯಾ: ವಿಡಿಯೋ