ETV Bharat / entertainment

'ಕೆಜಿಎಫ್​ಗೂ ಮುನ್ನ ಯಶ್​ ಯಾರು?': ನಟ ಅಲ್ಲು ಅರ್ಜುನ್​ ತಂದೆ ಹೀಗೆ ಹೇಳಿದ್ದೇಕೆ? - Allu Aravind

ಯಶಸ್ವಿ ನಿರ್ಮಾಪಕರಲ್ಲಿ ಓರ್ವರಾದ ಅಲ್ಲು ಅರವಿಂದ್ ಅವರು ಸಂದರ್ಶನವೊಂದರಲ್ಲಿ, ಸಿನಿಮಾ ಬಜೆಟ್‌ ಕುರಿತು ಮಾತನಾಡುವಾಗ 'ನಾಯಕ ನಟರಿಂದಲೇ ಎಲ್ಲವೂ ಅಲ್ಲ' ಎಂದರು.

Allu Aravind statement on Yash
ಯಶ್ ಬಗ್ಗೆ ಅಲ್ಲು ಅರವಿಂದ್​ ಹೇಳಿಕೆ
author img

By ETV Bharat Karnataka Team

Published : Nov 9, 2023, 11:07 AM IST

ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಅವರ ತಂದೆ, ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ಮಾಪಕರಲ್ಲಿ ಓರ್ವರಾದ ಅಲ್ಲು ಅರವಿಂದ್ ಸಿನಿಮಾ ಬಜೆಟ್‌ ಕುರಿತು ಮಾತನಾಡುತ್ತಿದ್ದಾಗ ನಟ ಯಶ್​​​ ಅವರ ಉದಾಹರಣೆ ಕೊಟ್ಟರು. ಸಂದರ್ಶನವೊಂದರಲ್ಲಿ ಪಾಲ್ಗೊಂಡು, ಕೇವಲ ತಾರೆಯರ ಉಪಸ್ಥಿತಿಯಿಂದ 'ಹೈ ಬಜೆಟ್'​​ ಆಗುವುದಿಲ್ಲ ಎಂದು ಪ್ರತಿಪಾದಿಸಿದರು. ಇದರ ಜೊತೆಗೆ, ತಮ್ಮ ಹೇಳಿಕೆ ಸಮರ್ಥಿಸಿಕೊಳ್ಳಲು ಕನ್ನಡ ಚಿತ್ರರಂಗದ ಹೆಸರಾಂತ ನಟ ಯಶ್ ಹೆಸರನ್ನು ಉದಾಹರಣೆಯಾಗಿ ನೀಡಿದರು. ಬ್ಲಾಕ್​ಬಸ್ಟರ್ ಚಿತ್ರದ ಸಂಪೂರ್ಣ ಯಶಸ್ಸು ಕೇವಲ ಸ್ಟಾರ್​ಗಳ ಜನಪ್ರಿಯತೆಯ ಮೇಲೆ ಅವಲಂಬಿತವಾಗಿಲ್ಲ. ಸ್ಟಾರ್ಸ್ ಪ್ರಭಾವವನ್ನು ಹೆಚ್ಚಿಸಲು ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಬೇಕು. ಅದಕ್ಕೆ ಹೈ ಬಜೆಟ್​ ಬೇಕು ಎಂದರು.

ನಿಮ್ಮ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ 'ಗೀತಾ ಆರ್ಟ್ಸ್' ಪ್ರಸ್ತುತ ತನ್ನ ಗಮನವನ್ನು ಬಿಗ್​​ ಬಜೆಟ್ ಸಿನಿಮಾದಿಂದ ಸಣ್ಣ ಚಿತ್ರಗಳತ್ತ ಏಕೆ ಕೇಂದ್ರೀಕರಿಸಿಕೊಂಡಿದೆ ಎಂಬ ಪ್ರಶ್ನೆ ನಿರ್ಮಾಪಕ ಅಲ್ಲು ಅರವಿಂದ್ ಅವರಿಗೆ ಎದುರಾಯಿತು. ಅದಕ್ಕೆ ಪ್ರತಿಕ್ರಿಯಿಸುತ್ತಾ, 'ವೆಚ್ಚ'ದ ಕುರಿತು ಮಾತನಾಡಿದರು. 'ಸಿನಿಮಾಗಳ ದುಬಾರಿ ವೆಚ್ಚಕ್ಕೆ ಸ್ಟಾರ್ಸ್ ಕಾರಣ' ಎಂಬ ಮಾತನ್ನು ನಿರ್ಮಾಪಕರು ಅಲ್ಲಗಳೆದರು. ಚಿತ್ರದ ನಾಯಕ ನಟ ಸಾಮಾನ್ಯವಾಗಿ ಒಟ್ಟು ಬಜೆಟ್‌ನ ಶೇ 20 ರಿಂದ 25 ರಷ್ಟು ಮಾತ್ರ ಸಂಭಾವನೆಯಾಗಿ ಪಡೆಯುತ್ತಾರೆ ಎಂದು ಹೇಳಿದರು. ಹಾಗಾಗಿ, ಸ್ಟಾರ್‌ಗಳ ಶುಲ್ಕವೇ ಚಿತ್ರದ ಬಜೆಟ್ ಅನ್ನು ಹೆಚ್ಚಿಸುತ್ತದೆ ಎಂದು ಹೇಳುವುದು ಸರಿಯಲ್ಲ. ನಟರ ಶುಲ್ಕದ ಜೊತೆಗೆ, ಅದ್ಧೂರಿ ಸಿನಿಮಾ ನಿರ್ಮಾಣಕ್ಕೆ ಹೆಚ್ಚಿನ ಹಣ ವ್ಯಯವಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಇಂದು 'ಆಟೋರಾಜ' ಶಂಕರ್‌ ನಾಗ್‌ ಜನ್ಮದಿನ: ಅಭಿಮಾನಿಗಳ ಮನದಾಳದಲ್ಲಿ ಶಂಕ್ರಣ್ಣ ಸದಾ ಜೀವಂತ

ನಿರ್ಮಾಪಕರು ತಮ್ಮ ಮಾತನ್ನು ವಿವರಿಸುವ ವೇಳೆ, ಸ್ಯಾಂಡಲ್​ವುಡ್​​ ಸೂಪರ್ ಸ್ಟಾರ್ ಯಶ್ ಉದಾಹರಣೆ ನೀಡಿದರು. "ಕೆಜಿಎಫ್​ಗೂ ಮೊದಲು ಯಶ್ ಯಾರು" ಎಂದು ಪ್ರಶ್ನಿಸಿದರು. ಕೆಜಿಎಫ್ ಬಿಡುಗಡೆಗೂ ಮೊದಲು ಯಶ್ ಸೀಮಿತ ಪ್ರಾಮುಖ್ಯತೆ ಹೊಂದಿದ್ದರೆಂದು ಪರೋಕ್ಷವಾಗಿ ತಿಳಿಸಿದರು. ಸಿನಿಮಾವೊಂದರ ಯಶಸ್ಸು ಪ್ರಾಥಮಿಕವಾಗಿ ಅದ್ಧೂರಿ ನಿರ್ಮಾಣದ ಮೇಲೆ ನಿರ್ಧಾರವಾಗುತ್ತದೆ. ಅದ್ಧೂರಿ ಮೇಕಿಂಗ್​​ ಅಥವಾ ಭವ್ಯ ನಿರ್ಮಾಣ 'ಸಿನಿಮಾ ಯಶಸ್ಸಿ'ನ ಪ್ರಮುಖ ಕಾರಣಗಳಲ್ಲೊಂದು. ಇದೊಂದು ಉದಾಹರಣೆಯಷ್ಟೇ ಎಂದು ನಿರ್ಮಾಪಕರು ತಿಳಿಸಿದರು.

ಇದನ್ನೂ ಓದಿ: ಬದಲಾಯ್ತು ವೇಷ, ಶುರುವಾಯ್ತು 'ತುಕಾಲಿ' ಹಾಸ್ಯ: ಕನ್ನಡ ಬಿಗ್‌ಬಾಸ್ ಪ್ರೋಮೋ ನೋಡಿ

ನಿರ್ಮಾಪಕ ಅಲ್ಲು ಅರವಿಂದ್ ಅವರ ಈ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಅವರ ಈ ಮಾತು ಯಶ್ ಅಭಿಮಾನಿಗಳಿಗೆ ಹಿಡಿಸಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಯಶ್ ಅಭಿಮಾನಿಯೊಬ್ಬರು, "ಈ ಮನಸ್ಥಿತಿಯಿಂದ ಹೊರಗೆ ಬನ್ನಿ ಮತ್ತು ವಾಸ್ತವ ಒಪ್ಪಿಕೊಳ್ಳಿ" ಎಂದು ಬರೆದಿದ್ದಾರೆ. ಹೆಚ್ಚಿನ ಸಂಖ್ಯೆಯ ಯಶ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಯಶ್ ಕೆಜಿಎಫ್‌ನಲ್ಲಿ ನಟಿಸುವ ಮೊದಲೇ ಜನಪ್ರಿಯ ತಾರೆಯಾಗಿದ್ದರು ಎಂದು ಅಭಿಮಾನಿಗಳು ವಾದಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.