ETV Bharat / entertainment

ಲಾಲ್​ ಸಿಂಗ್​ ಛಡ್ಡಾ ಜೊತೆ ಬಾಕ್ಸ್​ ಆಫೀಸ್​ ಕ್ಲ್ಯಾಶ್​ಗೆ ಸಿಲುಕಿದ ಅಕ್ಷಯ್​ ಕುಮಾರ್​ 'ರಕ್ಷಾ ಬಂಧನ' - ಅಕ್ಷಯ್​ ಕುಮಾರ್​ ಅಭಿನಯದ ರಕ್ಷಾ ಬಂಧನ

ಲಾಲ್​ ಸಿಂಗ್​ ಛಡ್ಡಾ ಏಪ್ರಿಲ್​ನಲ್ಲಿ ತೆರೆಗೆ ಬರಲು ಸಿದ್ಧತೆ ನಡೆಸಿಕೊಂಡಿತ್ತು, ಆದರೆ, ಯಶ್​ ಅಭಿನಯದ ಕೆಜಿಎಫ್​ 2 ಜೊತೆಗಿನ ಕ್ಲ್ಯಾಶ್​ ತಪ್ಪಿಸಲು ಸಿನಿಮಾ ರಿಲೀಸ್​ ಡೇಟ್​ ಮುಂದಕ್ಕೆ ಹಾಕಿತ್ತು. ಇದೀಗ ರಕ್ಷಾ ಬಂಧನ ರಿಲೀಸ್​ ದಿನವೇ ಲಾಲ್​ ಸಿಂಗ್​ ಛಡ್ಡಾ ತೆರೆಗೆ ಬರಲಿದೆ.

Akshay Kumar reacts to Raksha Bandhan's box office clash with Aamir Khan's Laal Singh Chaddha
ಲಾಲ್​ ಸಿಂಗ್​ ಛಡ್ಡಾ ಜೊತೆ ಬಾಕ್ಸ್​ ಆಫೀಸ್​ ಕ್ಲ್ಯಾಶ್​ಗೆ ಸಿಲುಕಿದ ಅಕ್ಷಯ್​ ಕುಮಾರ್​ 'ರಕ್ಷಾ ಬಂಧನ'
author img

By

Published : Jun 23, 2022, 10:53 AM IST

ಮುಂಬೈ : ಅಕ್ಷಯ್​ ಕುಮಾರ್​ ಅಭಿನಯದ ರಕ್ಷಾ ಬಂಧನ ಸಿನಿಮಾದ ಟ್ರೈಲರ್​ ಮಂಗಳವಾರ ಬಿಡುಗಡೆಗೊಂಡಿದ್ದು, ದೆಹಲಿಯ ಡೆಲಿಟ್​ ಸಿನಿಮಾದಲ್ಲಿ ನಡೆದ ಟ್ರೈಲರ್​ ಲಾಂಚ್​ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಅಕ್ಷಯ್​ ಕುಮಾರ್​, ರಕ್ಷಾ ಬಂಧನ ಸಿನಿಮಾ ಬಿಡುಗಡೆ ದಿನವೇ ತೆರೆಗೆ ಬರುತ್ತಿರುವ ಅಮೀರ್​ ಖಾನ್​ ಅಭಿನಯದ ಲಾಲ್​ ಸಿಂಗ್​ ಛಡ್ಡಾ ಸಿನಿಮಾದೊಂದಿಗೆ ಬಾಕ್ಸ್​ ಆಫೀಸ್​​ ಕ್ಲ್ಯಾಶ್​ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಆನಂದ್​ ಎಲ್​. ರೈ ನಿರ್ದೇಶನದ ರಕ್ಷಾ ಬಂಧನ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಜೊತೆಗೆ ಭೂಮಿ ಪಡ್ನೇಕರ್​ ಅವರೂ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದು, ಸಿನಿಮಾ ಆಗಸ್ಟ್​ 11ರಂದು ಬಿಡುಗಡೆಯಾಗಲಿದೆ. ಅಮೀರ್​ ಖಾನ್​ ಅಭಿನಯದ ಲಾಲ್​ ಸಿಂಗ್​ ಛಡ್ಡಾ ಸಿನಿಮಾ ಕೂಡ ಇದೇ ದಿನ ತೆರೆಗೆ ಬರಲಿದ್ದು, ಈ ಬಗ್ಗೆ ಕೇಳಿದ ಪ್ರಶ್ನೆಗೆ ಅಕ್ಷಯ್​ ಕುಮಾರ್​, ಇದು ಕ್ಲ್ಯಾಶ್​ ಅಲ್ಲ ಎಂದಿದ್ದಾರೆ.

ಅಕ್ಷಯ್​ ಕುಮಾರ್​ 'ರಕ್ಷಾ ಬಂಧನ' ಟ್ರೈಲರ್​ ರಿಲೀಸ್​ ಕಾರ್ಯಕ್ರಮ

ಎರಡು ಒಳ್ಳೆ ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾಗುತ್ತಿವೆ. ಕೋವಿಡ್​ ಕಾರಣದಿಂದಾಗಿ ಹಲವಾರು ಸಿನಿಮಾಗಳು ತೆರೆಗೆ ಬಂದಿಲ್ಲ. ತುಂಬಾ ಸಿನಿಮಾಗಳು ಈಗಲೂ ಬಿಡುಗಡೆಗೆ ಕಾಯುತ್ತಿವೆ. ಎರಡೂ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಚೆನ್ನಾಗಿ ಓಡುತ್ತವೆ ಎಂಬ ಭರವಸೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲಾಲ್​ ಸಿಂಗ್​ ಛಡ್ಡಾ ಏಪ್ರಿಲ್​ನಲ್ಲಿ ತೆರೆಗೆ ಬರಲು ಸಿದ್ಧತೆ ನಡೆಸಿಕೊಂಡಿತ್ತು, ಆದರೆ, ಯಶ್​ ಅಭಿನಯದ ಕೆಜಿಎಫ್​ 2 ಜೊತೆಗಿನ ಕ್ಲ್ಯಾಶ್​ ತಪ್ಪಿಸಲು ಸಿನಿಮಾ ರಿಲೀಸ್​ ಡೇಟ್​ ಮುಂದಕ್ಕೆ ಹಾಕಿತ್ತು. ಇದೀಗ ರಕ್ಷಾ ಬಂಧನ ರಿಲೀಸ್​ ದಿನವೇ ಲಾಲ್​ ಸಿಂಗ್​ ಛಡ್ಡಾ ತೆರೆಗೆ ಬರಲಿದೆ. ರಕ್ಷಾ ಬಂಧನ ಸಿನಿಮಾ ಅಣ್ಣ ತಂಗಿಯರ ಬಂಧನದ ಕುರಿತಾಗಿದ್ದು, ಅಭಿಮಾನಿಗಳು ಬಾಲಿವುಡ್​ನ ಎರಡು ಬಹುನಿರೀಕ್ಷಿತ ಸಿನಿಮಾಗಳ ಹವಾ ಹೇಗಿರಬಹುದು ಎಂಬುದನ್ನು ನೋಡಲು ಕಾಯುತ್ತಿದ್ದಾರೆ.

ಇದನ್ನೂ ಓದಿ : ಗ್ರೀನ್ ಇಂಡಿಯಾ ಚಾಲೆಂಜ್​ಗೆ ಸಲ್ಮಾನ್ ಸಾಥ್; ಅಭಿಯಾನಕ್ಕೆ ಹೆಗಲಾಗಲು ಅಭಿಮಾನಿಗಳಿಗೆ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.