ಚಂದನವನದ ಬೆಡಗಿ ಶಾನ್ವಿ ಶ್ರೀವಾಸ್ತವ್ ತಮ್ಮ ಸೌಂದರ್ಯ ಮತ್ತು ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸ್ಯಾಂಡಲ್ವುಡ್ ಜೊತೆಗೆ ಟಾಲಿವುಡ್ನಲ್ಲಿ ಮಿಂಚುತ್ತಿರುವ ಈ ಚೆಲುವೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇದೀಗ ಹೊಸ ಫೋಟೋವೊಂದನ್ನು ಶಾನ್ವಿ ಹಂಚಿಕೊಂಡಿದ್ದು, ಅಪಾರ ಮೆಚ್ಚುಗೆ ಗಳಿಸಿದೆ. ಒಂದು ವಿಶೇಷ ಫೋಟೋಶೂಟ್ನಲ್ಲಿ ನಟಿ ಉಟ್ಟುಕೊಂಡಿರೋ ಸೀರೆ ಅವರಿಗೆ ತುಂಬಾ ಸ್ಪೆಷಲ್ ಆಗಿದೆಯಂತೆ. 15 ವರ್ಷದ ಹಿಂದಿನ ಈ ಸೀರೆ ಮೇಲೆ ಅವರಿಗೊಂದು ವಿಶೇಷ ಅಟ್ಯಾಚ್ಮೆಂಟ್ ಕೂಡ ಇದೆಯಂತೆ.
ಹೌದು. ನಟಿ ಶಾನ್ವಿ ಉಟ್ಟಿರುವ ಈ ಸೀರೆ ಬೇರೆ ಯಾರದ್ದೋ ಅಲ್ಲ, ಅವರ ತಾಯಿಯದ್ದೇ. ಅವರ ಅಮ್ಮನ 15 ವರ್ಷದ ಹಿಂದಿನ ಈ ಸಾರಿಯನ್ನು ಶಾನು ಒಂದೊಳ್ಳೆ ಫೋಟೋಶೂಟ್ಗಾಗಿ ಉಪಯೋಗಿಸಿಕೊಂಡಿದ್ದಾರೆ. ಚೋರ್ ಬಜಾರ್ನಲ್ಲಿ ಈ ಫೋಟೋಗಳನ್ನು ತೆಗೆಯಲಾಗಿದ್ದು, ಅಂಗಡಿಗಳ ಮುಂದೆ ನಿಂತು ನಟಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಶಾನ್ವಿ, ಸೀರೆ ಬಗೆಗಿನ ಅಟ್ಯಾಚ್ಮೆಂಟ್ ಅನ್ನು ಕ್ಯಾಪ್ಶನ್ನಲ್ಲಿ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
"ಅಮ್ಮನ 15 ವರ್ಷದ ಹಿಂದಿನ ಈ ಸೀರೆಯನ್ನು ನಾನು ಫೋಟೋಶೂಟ್ನಲ್ಲಿ ಉಟ್ಟುಕೊಂಡಿದ್ದೇನೆ. ಇಡೀ ಫೋಟೋಶೂಟ್ ಅನ್ನು ಸ್ಪೆಷಲ್ ಆಗಿಯೇ ಮಾಡಲಾಗಿದೆ. ಇದು ನನಗೆ ತುಂಬಾನೇ ಖುಷಿ ತಂದಿದೆ" ಎಂದು ಹೇಳಿದ್ದಾರೆ. ಇದಕ್ಕೆ ಅಭಿಮಾನಿಗಳು ಹೃದಯದ ಎಮೋಜಿ ಮತ್ತು ಬಗೆ ಬಗೆಯ ಬರಹಗಳೊಂದಿಗೆ ಕಮೆಂಟ್ ವಿಭಾಗವನ್ನು ತುಂಬಿದ್ದಾರೆ. ಜೊತೆಗೆ ಶಾನ್ವಿ ಹೊಸ ಫೋಟೋಗಳಿಗೆ 50 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು ಬಂದಿವೆ. ಇವರಿಗೆ ಇನ್ಸ್ಟಾಗ್ರಾಮ್ನಲ್ಲಿ 1.4 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ಚಂದ್ರಲೇಖಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ: ಅಂದ ಚೆಂದದ ಜೊತೆಗೆ ನಟನೆಯಿಂದ ಕ್ರೇಜ್ ಹೆಚ್ಚಿಸಿಕೊಂಡಿರುವ ಶಾನ್ವಿ 2012 ರಲ್ಲಿ ಬಿ ಜಯಾ ಅವರ ತೆಲುಗು ಚಿತ್ರ ಲವ್ಲಿಯಲ್ಲಿ ಅಭಿನಯಿಸುವ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಅಡ್ಡಾ ಎಂಬ ತೆಲುಗು ಚಿತ್ರದಲ್ಲಿ ಅವರು ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡರು. ಈ ಸಿನಿಮಾ ಮೂಲಕ ಶಾನ್ವಿ ಜನರಿಗೆ ಇಷ್ಟವಾದರು. ಇದಾಗಿ 2014 ರಲ್ಲಿ ಹಾರರ್ ಕಮ್ ಕಾಮಿಡಿ ಚಲನಚಿತ್ರ ಚಂದ್ರಲೇಖಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟರು. ಈ ಸಿನಿಮಾದಲ್ಲಿನ ಇವರ ನಟನೆ ಕನ್ನಡಿಗರನ್ನು ವಿಶೇಷವಾಗಿ ಸೆಳೆಯಿತು.
ಬಳಿಕ ರಾಕಿಂಗ್ ಸ್ಟಾರ್ ಯಶ್ ಜೊತೆ ಮಾಸ್ಟರ್ ಪೀಸ್ ಸಿನಿಮಾಗೆ ನಾಯಕಿಯಾದರು. ಮಂಜು ಮಾಂಡವ್ಯ ನಿರ್ದೇಶಿಸಿದ ಈ ಚಿತ್ರಕ್ಕಾಗಿ ಕನ್ನಡದ ಅತ್ಯುತ್ತಮ ನಟಿಗಾಗಿ ಫಿಲ್ಮ್ ಫೇರ್ ಪ್ರಶಸ್ತಿಗೂ ನಾಮನಿರ್ದೇಶನಗೊಂಡರು. ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರಕ್ಕಾಗಿ ಶಾನ್ವಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಲ್ಲದೇ ರಕ್ಷಿತ್ ಶೆಟ್ಟಿ ಅವರ ಅವನೇ ಶ್ರೀಮನ್ನಾರಾಯಣ ಮತ್ತು ಗಣೇಶ್ ಅಭಿನಯದ ಗೀತಾ ಚಿತ್ರದಲ್ಲೂ ನಟಿಸಿದ್ದಾರೆ. ಬಳಿಕ ಶಾನ್ವಿ ನಟಿಸಿದ ಮಫ್ತಿ ಚಿತ್ರ ಸೂಪರ್ ಹಿಟ್ ಕಂಡಿದೆ. ಸದ್ಯ ಅವರು ತ್ರಿಶೂಲಂ ಮತ್ತು ಬ್ಯಾಂಗ್ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: "ಬನ್- ಟೀ" ಟ್ರೈಲರ್ ಬಿಡುಗಡೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್; ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಮೆಚ್ಚುಗೆ