ETV Bharat / entertainment

2023ರ ರಿಷಿಸ್ ಮಿಸಸ್ ಕರ್ನಾಟಕ ಶೋನಲ್ಲಿ ಸೌತ್​ ತಾರೆ ಮಧುಬಾಲ ಮಸ್ತ್​ ಡ್ಯಾನ್ಸ್​ - ಈಟಿವಿ ಭಾರತ ಕನ್ನಡ

2023ರ ರಿಷಿಸ್​ ಮಿಸಸ್ ಕರ್ನಾಟಕ ಶೋನಲ್ಲಿ ಸೌತ್​ ನಟಿ ಮಧುಬಾಲ ಡ್ಯಾನ್ಸ್​ ಮಾಡಿದ್ದು ಗಮನ ಸೆಳೆಯಿತು.

Actress Madhu bala dance in rishis mrs karnataka 2023
2023ರ ರಿಷಿಸ್ ಮಿಸಸ್ ಕರ್ನಾಟಕ ಶೋನಲ್ಲಿ ಸೌತ್​ ತಾರೆ ಮಧುಬಾಲ ಮಸ್ತ್​ ಡ್ಯಾನ್ಸ್​
author img

By ETV Bharat Karnataka Team

Published : Dec 19, 2023, 8:22 PM IST

ಬಹುಭಾಷೆಗಳಲ್ಲಿ ತನ್ನ ಅಭಿನಯ ಮತ್ತು ಗ್ಲಾಮರ್​ನಿಂದಲೇ ಸ್ಟಾರ್​ ಆದ ನಟಿ ಮಧುಬಾಲ. ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಬೇಡಿಕೆ ಹೊಂದಿರುವ ಚೆಲುವೆ, ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ಅಣ್ಣಯ್ಯ'ಗೆ ನಾಯಕಿಯಾಗಿ ಕನ್ನಡಿಗರ ಮನೆಗೆದ್ದಿದ್ದಾರೆ. ಸುಮಾರು ಎಂಟು ವರ್ಷಗಳ ನಂತರ ಸ್ಯಾಂಡಲ್​ವುಡ್​ ಮತ್ತೆ ಬಂದ ಮಧುಬಾಲ, ರನ್ನ, ನಾನು ಮತ್ತು ವರಲಕ್ಷ್ಮಿ, ಸೀತಾರಾಮ ಕಲ್ಯಾಣ, ಪ್ರೀಮಿಯರ್ ಪದ್ಮಿನಿ, ರೇಮೊ ಸಿನಿಮಾಗಳಲ್ಲಿ ನಟಿಸಿದ್ದಾರೆ.

Actress Madhu bala dance in rishis mrs karnataka 2023
2023ರ ರಿಷಿಸ್ ಮಿಸಸ್ ಕರ್ನಾಟಕ ಶೋ

ತಮಿಳು ಸಿನಿಮಾ ಮೂಲಕ ವೃತ್ತಿ ಆರಂಭಿಸಿದ ನಟಿ ಬಾಲಿವುಡ್‌ನಲ್ಲೂ ಮಿಂಚಿದ್ದು ಕಡಿಮೆ ಸಾಧನೆಯೇನಲ್ಲ. ಕೆ.ಬಾಲಚಂದಿಲ್ ನಿರ್ದೇಶಿಸಿದ ಅಳಗನ್ ಇವರ ಮೊದಲ ಸಿನಿಮಾ. ಮಮ್ಮುಟ್ಟಿ ನಟಿಸಿದ್ದ ಈ ಸಿನಿಮಾದಲ್ಲಿ ಮಧುಬಾಲ ಕೂಡ ನಾಯಕಿಯಾಗಿ ನಟಿಸಿದ್ದರು. ಇಲ್ಲಿಂದ ಅತಿ ಕಡಿಮೆ ಸಮಯದಲ್ಲಿ ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸಿರುವ ಕೀರ್ತಿ ಮಧುಬಾಲ ಅವರಿಗೆ ಸಲ್ಲುತ್ತದೆ.

ಇತ್ತೀಚೆಗೆ ನಡೆದ 2023ರ ರಿಷಿಸ್​ ಮಿಸಸ್ ಕರ್ನಾಟಕ ಶೋನಲ್ಲಿಯೂ ಮಧುಬಾಲ ಕಾಣಿಸಿಕೊಂಡಿದ್ದರು. ರಿಷಿ ಸ್ಪೀಕ್ ಚಾರಿಟಬಲ್ ಟ್ರಸ್ಟ್ ಕರ್ನಾಟಕದ ಬ್ಯೂಟಿ ಪೇಜೆಂಟ್ ರಿಷಿಸ್ ಮಿಸಸ್ ಕರ್ನಾಟಕ ಎಂಬ ಕಾರ್ಯಕ್ರಮ ಆಯೋಜಿಸಿತ್ತು. ರಿಷಿಸ್ ಮಿಸಸ್ ಕರ್ನಾಟಕ 2023 ಕಿರೀಟವನ್ನು ಕವಿತಾ ವೀರೇಂದ್ರ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್​ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಖ್ಯಾತ ಬಾಲಿವುಡ್ ನಟಿ ಮಧುಬಾಲ ವಿಶೇಷ ಅತಿಥಿಯಾಗಿ ಆಗಮಿಸಿ, ವೇದಿಕೆ ಮೇಲೆ ಮಸ್ತ್ ಡ್ಯಾನ್ಸ್ ಮಾಡಿದರು. ಬಳಿಕ ಮಾತನಾಡಿದ ಮಧುಬಾಲ, 'ಈ ಕಾರ್ಯಕ್ರಮದ ಭಾಗವಾಗಿರುವುದು ಖುಷಿ ಕೊಟ್ಟಿದೆ. ಇಂದು ಮಹಿಳೆಯರು ರಾಜಕೀಯ, ಸಾಹಿತ್ಯ, ಶಿಕ್ಷಣ ಮತ್ತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ತಾಯಿಯಾಗಿ ಮಕ್ಕಳ ಲಾಲನೆ, ಪಾಲನೆ ಜೊತೆಯಲ್ಲಿ ತನ್ನ ಸೌಂದರ್ಯ ಮತ್ತು ಆರೋಗ್ಯದ ಮೇಲೆ ಗಮನಹರಿಸಬೇಕಿದೆ' ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಸರ್ಕಾರದ ರಾಜಕೀಯ ಗಣ್ಯರು, ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು ಸಾಕ್ಷಿಯಾಗಿದ್ದರು. ಕವಿತಾ ವೀರೇಂದ್ರ ವಿನ್ನರ್ ಆಗಿ ಹೊರಹೊಮ್ಮಿದ್ರೆ, ಪ್ರಿಯಾಂಕಾ ರಿಯಾ ಫಸ್ಟ್ ವಿನ್ನರ್ ಆಗಿ ಹಾಗೂ ಶಹಿಸ್ತಾ ನಾಜ್ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು.

ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ನಿಂದ ಆಯೋಜಿಸಲಾಗಿದ್ದ ಈ ಬ್ಯೂಟಿ ಪೇಜೆಂಟ್​ನಲ್ಲಿ ಪಲ್ಲವಿ ಗೌಡ, ಚೈತ್ರಾ ಗೌಡ, ಆರ್ ಜೆ ರಾಜೇಶ್, ಮನೋಜ್ ಕುಮಾರ್ ಹಾಗೂ ಪ್ರಿಯಾ ಗೌತಮ್ ಡೈರೆಕ್ಟರ್ಸ್ ಆಗಿದ್ದರು. ಬ್ಯೂಟಿ ಪೇಜೆಂಟ್​ನಲ್ಲಿ ರೂಪದರ್ಶಿಯರು ಹಂಸ ನಡಿಗೆ ಹೆಜ್ಜೆ ಹಾಕಿ ನೋಡುಗರ ಗಮನ ಸೆಳೆದರು. ಅಂದಹಾಗೆಯೇ ಗ್ರಾಮೀಣ ಭಾಗದ ಬಡ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿರೋದು ವಿಶೇಷ.

ಇದನ್ನೂ ಓದಿ: ತೇಜ ಸಜ್ಜ ನಟನೆಯ 'ಹನುಮಾನ್​' ಟ್ರೇಲರ್​ ಔಟ್​: ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.