ETV Bharat / entertainment

ಅಂಬಿ ಅಪ್ಪಾಜಿ ಸಹಾಯದ ಮುಂದೆ ನಾವೇನು ಮಾಡಿಲ್ಲ : ನಟ ದರ್ಶನ್ - ಅಂಬಿ ಅಪ್ಪಾಜಿ

ನಾಳೆ ರಾಜ್ಯದಾದ್ಯಂತ ಅಭಿಷೇಕ್​ ಅಭಿನಯದ ಬ್ಯಾಡ್​ ಮ್ಯಾನರ್ಸ್​ ಚಿತ್ರ ಬಿಡುಗಡೆಗೊಳ್ಳಲಿದೆ. ಈ ಬಗ್ಗೆ ನಟ ದರ್ಶನ್​ ಮತ್ತು ಅಭಿಷೇಕ್​ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ನಟ ದರ್ಶನ್ ಸಂದರ್ಶನ
ನಟ ದರ್ಶನ್ ಸಂದರ್ಶನ
author img

By ETV Bharat Karnataka Team

Published : Nov 23, 2023, 8:45 PM IST

ದುನಿಯಾ ಸೂರಿ ನಿರ್ದೇಶನದ ಹಾಗೂ ಅಭಿಷೇಕ್ ಅಂಬರೀಶ್ ಕಾಂಬೋದಲ್ಲಿ ಮೂಡಿಬರ್ತಾ ಇರೋ ಬಹು ನಿರೀಕ್ಷಿತ ಚಿತ್ರ ಬ್ಯಾಡ್ ಮ್ಯಾನರ್ಸ್. ಟ್ರೈಲರ್ ಹಾಗು ಹಾಡುಗಳಿಂದ ಸ್ಯಾಂಡಲ್​ವುಡ್​ನಲ್ಲಿ ಟಾಕ್ ಆಗುತ್ತಿರುವ ಬ್ಯಾಡ್ ಮ್ಯಾನರ್ಸ್ ನಾಳೆ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಗೆಲುವಿಗಾಗಿ ಅಣ್ಣನ ಸ್ಥಾನದಲ್ಲಿ ನಟ ದರ್ಶನ್ ನಿಂತುಕೊಂಡು ಈ ಚಿತ್ರದ ಪ್ರಮೋಷನ್ ಮಾಡ್ತಾ ಇದ್ದಾರೆ.

ಈ ಸಿನಿಮಾ ಶುರುವಾದಾಗ ದರ್ಶನ್ ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಕ್ಲಾಪ್ ಮಾಡಿದ್ರು. ಕೆಲವು ದಿನಗಳ ಹಿಂದೆ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರವನ್ನು ನೋಡಿ ಅಭಿಷೇಕ್ ಟೀ ಶರ್ಟ್ ಮೇಲೆ 5ಕ್ಕೆ 5 ರೇಟಿಂಗ್ ಕೊಟ್ಟಿದ್ದರು. ಈಗ ಅಂಬರೀಶ್​ ಅಪ್ಪಾಜಿ ಮೇಲೆ ಇರುವ ಗೌರವ ಪ್ರೀತಿಯಿಂದ ಅಭಿಷೇಕ್ ಅಂಬರೀಶ್​ ಜೊತೆ ದರ್ಶನ್ ಬ್ಯಾಡ್ ಮ್ಯಾನರ್ಸ್ ಚಿತ್ರದ ಬಗ್ಗೆ ಹಾಗು ಅಭಿ ಬಗ್ಗೆ ಸಂದರ್ಶನ ಕೊಟ್ಟಿದ್ದಾರೆ.

ದರ್ಶನ್ ಅವರು, ಅಂಬಿ ಅಪ್ಪಾಜಿ ಮಾಡಿರುವ ಸಹಾಯದ ಮುಂದೆ ನಾನು ಮಾಡ್ತಾ ಇರೋದು ಸಹಾಯ ಚಿಕ್ಕದ್ದು. ಯಾಕಂದ್ರೆ ಅಭಿ ಎರಡನೇ ಸಿನಿಮಾ ಅಂದಾಕ್ಷಣ ನಾನು ಸಹಾಯ ಮಾಡಲೇಬೇಕು. ಮೊದಲ ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. ಈಗ ಮಾಸ್ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಭಿಷೇಕ್ ಅಂಬರೀಶ್​​, ಬ್ಯಾಡ್ ಮ್ಯಾನರ್ಸ್ ಚಿತ್ರದ ಮೊದಲನೇ ದಿನ ಮೊದಲ ಸೀನ್​ನಲ್ಲಿ ನಾನು ಹೆದರಿಕೊಂಡಿರಲಿಲ್ಲ. ಯಾಕಂದ್ರೆ ಸೂರಿ ಜೊತೆ ಪ್ರತಿಯೊಬ್ಬ ನಟನಿಗೆ ಕೆಲಸ ಮಾಡಬೇಕು ಅಂತಾ ಆಸೆ ಇರುತ್ತೆ. ಅದೇ ರೀತಿ ನನಗೂ ಸೂರಿ ಸಾರ್ ಜೊತೆ ಕೆಲಸ ಮಾಡಿದ್ದು ಸಾಕಷ್ಟು ಕಲಿತುಕೊಂಡೆ ಅಂತಾರೆ ಅಭಿಷೇಕ್​.

ಇನ್ನು ದರ್ಶನ್ ಹೇಳುವ ಹಾಗೇ, ಅಭಿ ಸಿನಿಮಾದಲ್ಲಿ ಒಬ್ಬ ವಿದ್ಯಾರ್ಥಿಯಾಗಿ ಹೇಗೆ ಶಾಲೆಗೆ ಹೋಗಿ ಪಾಠ ಕಲಿತುಕೊಂಡು ಬರ್ತಾರೋ ಅದೇ ರೀತಿ ಈ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಆ್ಯಂಗ್ರಿ ಲುಕ್​ನಲ್ಲಿ ಚೆನ್ನಾಗಿ ಕಾಣಿಸುತ್ತಾರೆ. ಈ ಸಿನಿಮಾ ಕೂಡ ಮಾಸ್ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ ಅಂದರು.

ನಿರ್ದೇಶಕ ದುನಿಯಾ ಸೂರಿ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷನ್‌ನಲ್ಲಿ ಬರ್ತಿರೋ ಬ್ಯಾಡ್ ಮ್ಯಾನರ್ಸ್‌ ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದ್ದು, ಸುಕ್ಕಾ ಸೂರಿ ರಾ ಆ್ಯಕ್ಷನ್ ಥ್ರಿಲ್ಲರ್ ನೋಡೋಕೆ ಒಂದು ವರ್ಗದ ಪ್ರೇಕ್ಷಕರಂತೂ ತುದಿಗಾಗಲಲ್ಲಿ ನಿಂತಿದ್ದಾರೆ. 3 ವರ್ಷಗಳ ಬಳಿಕ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಅಭಿ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಿತ್ತಿದ್ದು, ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ನಿರ್ಮಾಪಕ ಕೆ.ಎಂ ಸುಧೀರ್ ಬಂಡವಾಳ ಹೂಡಿದ್ದು, ಚರಣ್ ರಾಜ್ ಸಂಗೀತ, ಶೇಖರ್ ಎಸ್ ಈ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿದ್ದಾರೆ. ದೀಪು ಎಸ್ ಕುಮಾರ್ ಸಂಕಲನವಿದೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಅಭಿಷೇಕ್ ಅಂಬರೀಶ್​ ಬಗ್ಗೆ ಏನು ಹೇಳ್ತಾರೆ ಅನ್ನೋದು ನಾಳೆ ಗೊತ್ತಾಗಲಿದೆ.

ಇದನ್ನೂ ಓದಿ: ಹೊಸ ಪ್ರತಿಭೆಗಳ ಸಿನಿಮಾಗೆ ಕವಿರತ್ನ ನಾಗೇಂದ್ರ ಪ್ರಸಾದ್ ಸಾಥ್: ವಿಭಿನ್ನ ಶೀರ್ಷಿಕೆ ಅನಾವರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.