ETV Bharat / entertainment

ನಟಿ ಸಾನ್ಯಾ ಅಯ್ಯರ್​ ಜೊತೆ ನಟ ಸಮರ್ಜಿತ್ ಲಂಕೇಶ್ ಕಲರ್​ಫುಲ್​ ಫೋಟೋಶೂಟ್​ - ನಾಳೆ ಗೌರಿ ಸಿನಿಮಾಗೆ ಮುಹೂರ್ತ

ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಮತ್ತು ನಟಿ ಸಾನ್ಯಾ ಅಯ್ಯರ್ ಭರ್ಜರಿ ಫೋಟೋಶೂಟ್ ಮಾಡಿಸಿದ್ದಾರೆ.

actor-samarjit-lankesh-colorful-photoshoot-with-actress-sanya-iyer
ನಟಿ ಸಾನ್ಯಾ ಅಯ್ಯರ್​ ಜೊತೆ ನಟ ಸಮರ್ಜಿತ್ ಲಂಕೇಶ್ ಕಲರ್​ಫುಲ್​ ಫೋಟೋಶೂಟ್​
author img

By ETV Bharat Karnataka Team

Published : Aug 30, 2023, 9:40 PM IST

Updated : Aug 30, 2023, 10:14 PM IST

ಕನ್ನಡ ಪತ್ರಿಕೋದ್ಯಮದ ಖ್ಯಾತನಾಮರಾದ ಪಿ.ಲಂಕೇಶ್ ಮೊಮ್ಮಗ ಹಾಗೂ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸಮರ್ಜಿತ್ ಲಂಕೇಶ್ ತಮ್ಮ ಸ್ಪೆಶಲ್ ಲುಕ್​ಗಾಗಿ ಕಲರ್‌ಫುಲ್‌ ಫೋಟೋಶೂಟ್ ಮಾಡಿಸಿದ್ದಾರೆ.

actor-samarjit-lankesh-colorful-photoshoot-with-actress-sanya-iyer
ನಟಿ ಸಾನ್ಯಾ ಅಯ್ಯರ್​ ಜೊತೆ ನಟ ಸಮರ್ಜಿತ್ ಲಂಕೇಶ್

ಕೆಜಿಎಫ್ ಸಿನಿಮಾ ಖ್ಯಾತಿಯ ಕ್ಯಾಮರಾಮ್ಯಾನ್ ಭುವನ್ ಗೌಡ ಹಾಗೂ ಕಬ್ಜ ಕ್ಯಾಮಾರಾಮ್ಯಾನ್ ಎ.ಜೆ.ಶೆಟ್ಟಿ ಅದ್ಧೂರಿ ಫೋಟೋಶೂಟ್ ಮಾಡಿದ್ದಾರೆ. ಲವರ್ ಬಾಯ್, ರಗಡ್ ಲುಕ್, ಪೊಲೀಸ್ ಅವತಾರ, ರೊಮ್ಯಾಂಟಿಕ್ ಹೀರೋ ಹೀಗೆ ನಾಲ್ಕೈದು ಕಾಸ್ಟೂಮ್‌ಗಳಲ್ಲಿ ಸಮರ್ಜಿತ್‌​ ಮಿಂಚಿದ್ದಾರೆ.

ಗೌರಿ ಚಿತ್ರದ ಮೂಲಕ ಸ್ಯಾಡಲ್​ವುಡ್​ಗೆ ಎಟ್ರಿ ಕೊಡುತ್ತಿರುವ ಸಮರ್ಜಿತ್ ಲಂಕೇಶ್

ಇಂದ್ರಜಿತ್ ಲಂಕೇಶ್ ಆಪ್ತರು ಹೇಳುವ ಹಾಗೆ, ಶೂಟಿಂಗ್ ಲೊಕೇಶನ್, ಕಾಸ್ಟೂಮ್ ಸೇರಿದಂತೆ ಈ ಫೋಟೋಶೂಟ್‌ಗೆ 5ರಿಂದ 6 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಸಮರ್ಜಿತ್ ಎಂಟ್ರಿ ಅದ್ಧೂರಿಯಾಗಿರಲಿ ಎಂದು ಗ್ರ್ಯಾಂಡ್ ಫೋಟೋಶೂಟ್ ಮಾಡಲಾಗಿದೆಯಂತೆ.

ಗ್ರ್ಯಾಂಡ್​​ ಎಂಟ್ರಿಗೆ ಭರ್ಜರಿ ಫೋಟೋಶೂಟ್

ಪರಭಾಷೆಯ ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವಲ್ಲಿ ಇಂದ್ರಜಿತ್ ಲಂಕೇಶ್ ಎತ್ತಿದ ಕೈ. ತುಂಟಾಟ, ಮೊನಾಲಿಸಾ, ಲಂಕೇಶ್ ಪತ್ರಿಕೆ, ಐಶ್ವರ್ಯ, ಶಕೀಲಾ ಹೀಗೆ ವಿಭಿನ್ನ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಇವರು ಈ ಬಾರಿ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ನಾಳೆ ಗೌರಿ ಸಿನಿಮಾಕ್ಕೆ ಮುಹೂರ್ತ

'ಗೌರಿ' ಸಿನಿಮಾ ಮೂಲಕ ಸಮರ್ಜಿತ್ ಲಂಕೇಶ್‌ರನ್ನು ಚಿತ್ರರಂಗಕ್ಕೆ ನಾಯಕನನ್ನಾಗಿ ಪರಿಚಯಿಸುತ್ತಿದ್ದು ಆಗಸ್ಟ್ 31ರಂದು ಮುಹೂರ್ತ ಕಾರ್ಯಕ್ರಮ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನೆರವೇರಲಿದೆ. ಗೌರಿ ಸಿನಿಮಾಗಾಗಿ ಈಗಾಗಲೇ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದು, ಸಾನ್ಯಾ ಅಯ್ಯರ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಕ್ಯಾಮಾರಾಮ್ಯಾನ್​ಗಳಾದ ಭುವನ್ ಗೌಡ ಹಾಗೂ ಎಜೆ ಶೆಟ್ಟಿ ಅವರಿಂದ ಅದ್ದೂರಿ ಫೋಟೋಶೂಟ್

ಕೆಲವು ಹಳೆ ಸಿನಿಮಾ ಸೀನ್‌ಗಳನ್ನು ರಿಕ್ರಿಯೇಟ್ ಮಾಡುವ ಮೂಲಕ ಮಗನ ಆ್ಯಕ್ಟಿಂಗ್ ಟೆಸ್ಟ್ ಮಾಡಿದ್ದಾರೆ. ಲುಕ್ ಹಾಗೂ ಆ್ಯಕ್ಟಿಂಗ್, ಸ್ಟಂಟ್, ಡ್ಯಾನ್ಸ್ ಎಲ್ಲಾ ವಿಚಾರದಲ್ಲಿಯೂ ಸಮರ್ಜಿತ್ ಪರ್ಫೆಕ್ಟ್ ಅನ್ನಿಸುತ್ತಿದ್ದು, ಮುಹೂರ್ತ ಮುಗಿಸಿ ನೇರವಾಗಿ ಶೂಟಿಂಗ್‌ಗೆ ಚಿತ್ರತಂಡ ಯೋಜಿಸಿದೆ.

ನಟಿ ಸಾನ್ಯಾ ಅಯ್ಯರ್​ ಜೊತೆ ನಟ ಸಮರ್ಜಿತ್ ಲಂಕೇಶ್ ಫೋಟೋಶೂಟ್

ಇದನ್ನೂ ಓದಿ: ನಗುವಿನ ಹೂಗಳ ಮೇಲೆ ಚಿತ್ರದ ಪ್ರೇಮಗೀತೆ ಅನಾವರಣ: ಲವ್​ಸ್ಟೋರಿ ಹೇಳಲು ಅಭಿದಾಸ್, ಶರಣ್ಯ ಶೆಟ್ಟಿ ರೆಡಿ

Last Updated : Aug 30, 2023, 10:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.