ETV Bharat / entertainment

ಶೀಘ್ರದಲ್ಲೇ ತಂದೆಯಾಗಲಿರುವ ಧ್ರುವ ಸರ್ಜಾ.. ನೋಡಿ ಪ್ರೇರಣಾ ಬೇಬಿ ಬಂಪ್ ಫೋಟೋಶೂಟ್ - Prerana is pregnant

ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ಧ್ರುವ ಪ್ರೇರಣಾರೊಂದಿಗೆ ಫೋಟೋಶೂಟ್ ಮಾಡಿಸುವ ಮೂಲಕ ತಾವು ಈ ತಿಂಗಳಲ್ಲೇ ಪೋಷಕರಾಗಲಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

Actor Dhruva Sarja wife Prerana is pregnant
ಪ್ರೇರಣಾ ಬೇಬಿ ಬಂಪ್ ಫೋಟೋಶೂಟ್
author img

By

Published : Sep 3, 2022, 1:09 PM IST

ಕನ್ನಡ ಚಿತ್ರರಂಗದ ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಫೇಮಸ್​ ಜೋಡಿಗಳಲ್ಲೊಂದು. ಸಹೋದರ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ಹೊರ ಬರುತ್ತಿರುವ ಧ್ರುವ ಸರ್ಜಾ ಮನೆಯಲ್ಲೀಗ ಸಂಭ್ರಮದ ವಾತಾವರಣವಿದೆ. ಮದುವೆ ಆಗಿ ಮೂರು ವರ್ಷಗಳ ಬಳಿಕ ಈ ದಂಪತಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪ್ರೇರಣಾ ಗರ್ಭಿಣಿ ಆಗಿರುವ ಸಂತೋಷದ ವಿಚಾರವನ್ನು ಧ್ರುವ ಸರ್ಜಾ ಬಹಳ‌ ಡಿಫ್ರೆಂಟ್ ಆಗಿ ಹಂಚಿಕೊಂಡಿದ್ದಾರೆ.

ಮಾರ್ಟಿನ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬಂದಿರುವ ಧ್ರುವ ಸರ್ಜಾ ಪ್ರೇರಣಾರೊಂದಿಗೆ ಕಲರ್ ಫುಲ್ ಫೋಟೋಶೂಟ್ ಮಾಡಿಸುವ ಮೂಲಕ ತಾವು ಈ ತಿಂಗಳಲ್ಲೇ ಪೋಷಕರಾಗಲಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಾವು ಜೀವನದ ಹೊಸ ಹಂತವನ್ನು ಪ್ರವೇಶಿಸುತ್ತಿದ್ದೇವೆ. ದೈವಿಕವಾಗಿ ನಮ್ಮನ್ನು ಆಶೀರ್ವದಿಸಿ ಅಂತಾ ತಿಳಿಸಿದ್ದಾರೆ.

ಪ್ರೇರಣಾ ಬೇಬಿ ಬಂಪ್ ಫೋಟೋಶೂಟ್

ಧ್ರುವ ಸರ್ಜಾ ಮತ್ತು ಪ್ರೇರಣಾ ಇಬ್ಬರು ಬಾಲ್ಯದಿಂದಲ್ಲೇ ಪ್ರೀತಿಸಿದ ಜೋಡಿ. ಇವರು 14 ವರ್ಷಗಳ ಪ್ರೀತಿಗೆ 24 ನವೆಂಬರ್ 2019ರಲ್ಲಿ ಮದುವೆ ಎಂಬ ಮುದ್ರೆಯನ್ನು ಒತ್ತಿದ್ದರು. ಈ ಮೂಲಕ ತಮ್ಮ ಹೊಸ ಜೀವನಕ್ಕೆ ಕಾಲಿಟ್ಟರು. ಇಬ್ಬರು ಮದುವೆಯಾದ ಬಳಿಕ ಹಲವು ಏಳುಬೀಳುಗಳನ್ನು ನೋಡಿದ್ದು, ಒಬ್ಬರಿಗೊಬ್ಬರು ಹೆಗಲು ಕೊಟ್ಟು ಜೀವನ‌ ನಡೆಸುತ್ತಿದ್ದಾರೆ. ಈ ತಿಂಗಳಲ್ಲಿ ಮನೆಗೆ ಹೊಸ ಅತಿಥಿಯ ಆಗಮನ ಆಗುತ್ತಿದ್ದು, ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಇದನ್ನೂ ಓದಿ: 'K ಕರಟಕ D ದಮನಕ' - ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ಯೋಗರಾಜ್ ಭಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.