ETV Bharat / entertainment

ಗಣೇಶ ಹಬ್ಬದ ದಿನದಂದೇ ಧ್ರುವ ಸರ್ಜಾ ಮನೆಗೆ ಬಂದ 'ಅಣ್ಣ' - ಪ್ರೇರಣಾ ಗಂಡು ಮಗುವಿಗೆ ಜನ್ಮ

ಗಣೇಶ ಹಬ್ಬದ ದಿನದಂದು ಧ್ರುವ ಸರ್ಜಾ ಪತ್ನಿ ಪ್ರೇರಣಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

Actor Dhruva Sarja is father to a baby boy
ಗಣೇಶ ಹಬ್ಬದ ದಿನದಂದೇ ಧ್ರುವ ಸರ್ಜಾ ಮನೆಗೆ ಬಂದ 'ಅಣ್ಣ'
author img

By ETV Bharat Karnataka Team

Published : Sep 18, 2023, 9:06 PM IST

Updated : Sep 18, 2023, 10:18 PM IST

ಗಣೇಶ ಹಬ್ಬದ ದಿನದಂದೇ ಧ್ರುವ ಸರ್ಜಾ ಮನೆಗೆ ಬಂದ 'ಅಣ್ಣ'

ಕನ್ನಡ ಚಿತ್ರರಂಗದಲ್ಲಿ ಕ್ಯೂಟ್ ಕಪಲ್​ ಅಂತಲೇ ಕರೆಸಿಕೊಂಡಿರುವ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ‌‌. ಗಣೇಶ ಹಬ್ಬದ ದಿನದಂದು ಧ್ರುವ ಸರ್ಜಾ ಪತ್ನಿ ಪ್ರೇರಣಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿಗೆ ಪ್ರೇರಣಾ ಜನ್ಮ ನೀಡಿದ್ದು, ಧ್ರುವ ಸರ್ಜಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ವರಮಹಾಲಕ್ಷ್ಮಿ ಪೂಜೆಯ ಶುಭ ಸಂದರ್ಭದಲ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಧ್ರುವ ಸರ್ಜಾ ತಿಳಿಸಿದ್ದರು.

ಗಂಡು ಮಗುವಿನ ಆಗಮನದಿಂದ ಸರ್ಜಾ ಕುಟುಂಬದಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲೇ ಮಗು ಜನಿಸಿರುವುದು ತುಂಬಾ ವಿಶೇಷವಾಗಿದೆ. ಧ್ರುವ ಸರ್ಜಾ ಮಗನನ್ನು ನೋಡಲು ಮೇಘನಾ ರಾಜ್ ಮತ್ತು ಸುಂದರ್​ ರಾಜ್​, ಪ್ರಮೀಳಾ ಜೋಶಾಯ್​ ಆಸ್ಪತ್ರೆಗೆ ಆಗಮಿಸಿದ್ದರು.

ಈ ವೇಳೆ ಮಾತನಾಡಿದ ಧ್ರುವ ಸರ್ಜಾ, ಅಣ್ಣನ ರೂಪದಲ್ಲಿ ಮಗ ಬಂದಿರೋದು ತುಂಬಾನೇ ಖುಷಿ ಇದೆ. ಈ ಸಂತೋಷವನ್ನು ನಾನು ದೊಡ್ಡ ಮಟ್ಟದಲ್ಲಿ ಆಚರಣೆ ಮಾಡುವುದಿಲ್ಲ. ಆ ಖುಷಿ ನನ್ನ ಜೊತೆಯಲ್ಲೇ ಇರಲಿ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: 2ನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ ದಂಪತಿ - ಸ್ಪೆಷಲ್​​ ಪೋಸ್ಟ್ ಶೇರ್ ಮಾಡಿದ ಆ್ಯಕ್ಷನ್​ ಪ್ರಿನ್ಸ್

ಬಳಿಕ ಸುಂದರ್ ರಾಜ್ ಮಾತನಾಡಿ, ಗೌರಿ ಈಗಾಗಲೇ ಮನೆಗೆ ಬಂದಿದ್ದಳು. ಈಗ ಗಣೇಶ ಬಂದ. ಈ ಮಗು ಗಜಕೇಸರಿ ಯೋಗದಲ್ಲಿ ಜನಿಸಿದೆ. ಇದರಿಂದ ಕುಟುಂಬದಲ್ಲಿ ಸಂತಸ ಮೂಡಿದೆ. ದೇವರು ಇದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ತಮ್ಮ ಸಂತಸ ವ್ಯಕ್ತಪಡಿಸಿದರು.

ಚಿರು ಸಮಾಧಿ ಬಳಿ ಪ್ರೇರಣಾ ಸೀಮಂತ: ಸೆಪ್ಟೆಂಬರ್​ 11 ರಂದು ಚಿರಂಜೀವಿ ಸರ್ಜಾ ಸಮಾಧಿ ಬಳಿ ಪ್ರೇರಣಾ ಸೀಮಂತವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಸುಂದರ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಅಪ್ಪ ಅಮ್ಮ ಹಾಗು ಸ್ನೇಹಿತರು, ಹಾಗೆಯೇ ಪ್ರೇರಣಾ ಸಂಬಂಧಿಕರು ಹಾಜರಾಗಿದ್ದರು.

ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಬಾಲ್ಯದ ಸ್ನೇಹಿತರು. ಈ ಸ್ನೇಹ ಬಳಿಕ ದಾಂಪತ್ಯವಾಗಿ ಬದಲಾಯಿತು. ಡಿಸೆಂಬರ್ 9, 2018 ರಂದು ನಿಶ್ಚಿತಾರ್ಥ ಮಾಡಿಕೊಂಡ ಧ್ರುವ ಮತ್ತು ಪ್ರೇರಣಾ, ನವೆಂಬರ್ 2019 ರಲ್ಲಿ ಸಪ್ತಪದಿ ತುಳಿದರು. ಇಬ್ಬರೂ ತಮ್ಮ ಮೊದಲ ಹೆಣ್ಣು ಮಗುವನ್ನು ಅಕ್ಟೋಬರ್ 2022 ರಲ್ಲಿ ಸ್ವಾಗತಿಸಿದರು. ಈಗ ಗಂಡು ಮಗು ಜನನದಿಂದ ಧ್ರುವ ಸರ್ಜಾ ಮನೆಯಲ್ಲಿ ದೊಡ್ಡ ಮಟ್ಟದ ಸಂಭ್ರಮ ಮನೆ ಮಾಡಿದೆ. ಯಾಕೆಂದರೆ ಮಗ ರೂಪದಲ್ಲಿ ಚಿರಂಜೀವಿ ಸರ್ಜಾನೆ ಮತ್ತೆ ಬಂದಿದ್ದಾರೆ ಎಂದು ಧ್ರುವ ಕುಟುಂಬದಲ್ಲಿ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ಇದನ್ನೂ ಓದಿ: ಅಣ್ಣ ಚಿರು ಸಮಾಧಿ ಬಳಿ ಪತ್ನಿ ಸೀಮಂತ ಶಾಸ್ತ್ರ ನೆರವೇರಿಸಿದ ಧ್ರುವ ಸರ್ಜಾ

Last Updated : Sep 18, 2023, 10:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.