ಮನುಷ್ಯ ಮತ್ತು ಶ್ವಾನದ ಬಾಂಧವ್ಯವನ್ನು ಸೂಕ್ಷ್ಮವಾಗಿ ಚಿತ್ರಿಸಿದ ಸಿನೆಮಾ 777 ಚಾರ್ಲಿ. ಚಿತ್ರದಲ್ಲಿ ಧರ್ಮನ (ರಕ್ಷಿತ್ ಶೆಟ್ಟಿ) ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಅಷ್ಟೇ ಅಲ್ಲ, ಸದ್ಯ 50ನೇ ದಿನದತ್ತ ಮುನ್ನಗುತ್ತಿರುವ ಸಿನೆಮಾವನ್ನು ಬಿಗ್ ಸ್ಕ್ರೀನ್ ಅಲ್ಲದೆ ಸ್ಮಾಲ್ ಸ್ಕ್ರೀನ್ನಲ್ಲಿಯೂ ಕೂಡ ಕೋಟ್ಯಂತರ ಜನ ನೋಡಿ ಮೆಚ್ಚಿಕೊಂಡಿದ್ದಾರೆ.
ಈ ಸಿನೆಮಾದ ಮೂಲಕ ಬೀದಿನಾಯಿಗಳನ್ನು ದತ್ತು ತೆಗೆದುಕೊಳ್ಳುವ ಅಭಿಯಾನ ಪ್ರರಂಭವಾಗಿದೆ. ಸಿನಿಮಾದ ಆಶಯದಂತೆ ಬೀದಿ ನಾಯಿಗಳ ರಕ್ಷಣೆಗೆ ಚಾರ್ಲಿ ಹೆಸರಲ್ಲಿ ಬ್ಯಾಂಕ್ನಲ್ಲಿ 5 ಕೋಟಿ ರೂಪಾಯಿ ಠೇವಣಿ ಇಟ್ಟು, ಅದರಿಂದ ಬರುವ ಬಡ್ಡಿ ಹಣವನ್ನು ಎನ್ಜಿಒಗಳಿಗೆ ಕೊಡಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ, ಸಿನಿಮಾ ಶೂಟಿಂಗ್ ವೇಳೆ ಬೆವರು ಹರಿಸಿದ ತಂಡದವರಿಗೆಲ್ಲ ಗಳಿಕೆಯ ಶೇಕಡಾ 10 ರಷ್ಟು ಹಣ ಹಂಚಿಕೆಯಾಗಿದೆ.
ಈ ಮಧ್ಯೆ ರಕ್ಷಿತ್ ಶೆಟ್ಟಿ ಇಡೀ ಚಿತ್ರತಂಡವನ್ನು ಥಾಯ್ಲೆಂಡ್‌ಗೆ ಕರೆದುಕೊಂಡು ಹೋಗಿ ಸಕ್ಸಸ್ ಪಾರ್ಟಿ ಮಾಡುತ್ತಿದ್ದಾರೆ. ನಿರ್ದೇಶಕ ಕಿರಣ್‌ರಾಜ್, ಸಂಗೀತ ನಿರ್ದೇಶಕ ನೋಬಿನ್ ಪೌಲ್, ನಾಯಕಿ ಸಂಗೀತಾ ಶೃಂಗೇರಿ ಸೇರಿದಂತೆ ಅನೇಕರು ಈ ಟ್ರಿಪ್‌ನಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: 'ಮ್ಯಾನ್ಷನ್ ಹೌಸ್ ಮುತ್ತು' ಮೂಲಕ ನಾಯಕ ನಟನಾಗಲಿದ್ದಾರೆ ಗಾಯಕ ನವೀನ್ ಸಜ್ಜು