ETV Bharat / entertainment

ಮಾಲಿವುಡ್​ನಲ್ಲಿ ಹೊಸ ದಾಖಲೆ ಬರೆದ '2018 ಎವ್ರಿವನ್ ಈಸ್ ಎ ಹೀರೋ' ಸಿನಿಮಾ

ಸಾಕಷ್ಟು ವಿರೋಧದ ನಡುವೆಯೂ 'ದಿ ಕೇರಳ ಸ್ಟೋರಿ' ರಾಷ್ಟ್ರವ್ಯಾಪಿ ಗಮನ ಸೆಳೆಯುತ್ತಿರುವ ಸಮಯದಲ್ಲೇ ಮಲಯಾಳಂನಲ್ಲಿ ಮೇ 5 ರಂದು ಬಿಡುಗಡೆಯಾದ '2018 ಎವೆರಿವನ್ ಈಸ್ ಎ ಹೀರೋ' ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಹೊಸ ದಾಖಲೆ ಬರೆದಿದೆ.

2018 Everyone Is A Hero
2018 ಎವೆರಿವನ್ ಈಸ್ ಎ ಹೀರೋ
author img

By

Published : May 15, 2023, 7:12 AM IST

ತಿರುವನಂತಪುರಂ : ನಟ ಟೋವಿನೋ ಥಾಮಸ್ ಅಭಿನಯದ ಮಲಯಾಳಂ ಚಿತ್ರ '2018 ಎವೆರಿವನ್ ಈಸ್ ಎ ಹೀರೋ' ವಿಶ್ವಾದ್ಯಂತ ತೆರೆಕಂಡು ಬ್ಲಾಕ್‌ ಬಸ್ಟರ್ ಹಿಟ್ ಆಗಿದೆ. ಎಲ್ಲೆಡೆಯಿಂದ ಬರುತ್ತಿರುವ ಅಪಾರ ಮೆಚ್ಚುಗೆ ಚಿತ್ರದ ಬಲ ಹೆಚ್ಚಿಸಿದೆ. ಸಿನಿಮಾ ಪ್ರದರ್ಶನಗೊಂಡ 9 ದಿನದಲ್ಲೇ ಕೇರಳವೊಂದರಲ್ಲೇ ಸುಮಾರು 5.18 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಮಾಲಿವುಡ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ವಿಶ್ವಾದ್ಯಂತ ಮೊದಲ 9 ದಿನದಲ್ಲಿ 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ₹100 ಕೋಟಿಯತ್ತ ದಾಪುಗಾಲಿಡುತ್ತಿದೆ.

  • " class="align-text-top noRightClick twitterSection" data="">

ಮಾಲಿವುಡ್ ಇತಿಹಾಸದಲ್ಲಿ ಸಿನಿಮಾವೊಂದು ಬಿಡುಗಡೆಯಾದ ದಿನದಿಂದಲೇ ಇಷ್ಟೊಂದು ಗಳಿಕೆ ಮಾಡಿರುವುದು ಇದೇ ಮೊದಲು. ಅಲ್ಲದೇ, ಹೊರ ರಾಜ್ಯ, ದೇಶಗಳಿಂದ ಸಹ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಇದು 2018 ರಲ್ಲಿ ನಡೆದ ನಿಜವಾದ "ದಿ ಕೇರಳ ಸ್ಟೋರಿ" ಎನ್ನುತ್ತಾರೆ ಅಭಿಮಾನಿಗಳು.

ಇದನ್ನೂ ಓದಿ : ಸುದೀಪ್ , ಯಶ್ ದಿವ್ಯಮೌನ... ಶಿವಣ್ಣ, ಧ್ರುವ, ವಿಜಿ ಕೈಯಲ್ಲಿ ಕನ್ನಡ ಚಿತ್ರರಂಗದ ತೇರು

ಜೂಡ್ ಆಂಥೋನಿ ಜೋಸೆಫ್ ನಿರ್ದೇಶನದಲ್ಲಿ ಮೇ 5 ರಂದು ಬಿಡುಗಡೆಯಾದ ಮಾಲಿವುಡ್‌ನ ಅತಿ ದೊಡ್ಡ ಬಜೆಟ್​ನ ಚಿತ್ರ '2018 ಎವ್ರಿವನ್ ಈಸ್ ಎ ಹೀರೋ'ದಲ್ಲಿ ಟೋವಿನೋ ಥಾಮಸ್, ಆಸಿಫ್ ಅಲಿ, ಗುಂಜಾಕೊ ಬೋಬನ್, ಲಾಲ್, ನರೇನ್, ವಿನೀತ್ ಶ್ರೀನಿವಾಸನ್, ಅಪರ್ಣಾ ಬಾಲಮುರಳಿ, ತನ್ವಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : 100 ಕೋಟಿ ಕ್ಲಬ್​ ಸೇರಿದ ' ದಿ ಕೇರಳ ಸ್ಟೋರಿ '.. ಟೀಕೆಗೊಳಗಾದರೂ 2023ರ ಯಶಸ್ವಿ ಚಲನಚಿತ್ರವಿದು

ಟೋವಿನೋ ಅಭಿನಯದ 2021 ರಲ್ಲಿ ಬಿಡುಗಡೆಯಾದ 'ಮಿನ್ನಲ್ ಮುರಳಿ' ಸಿನಿಮಾದ ನಂತರ ರಾಷ್ಟ್ರಮಟ್ಟದ ಗಮನ ಮತ್ತು ಪ್ರೇಕ್ಷಕರ ಮನಗೆದ್ದ ಚಿತ್ರ ಇದಾಗಿದೆ. ಕೇರಳದ ಕೆಲವು ಭಾಗಗಳನ್ನು ಧ್ವಂಸಗೊಳಿಸಿದ 2018 ರ ಪ್ರವಾಹದ ಕಥೆಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಚಿತ್ರೀಕರಿಸಲಾಗಿದ್ದು, ಮಾನವ ಸಂಬಂಧಗಳ ಮೇಲೆ ಪ್ರಕೃತಿ ವಿಕೋಪ ಹೇಗೆಲ್ಲ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನುವುದನ್ನು ತೋರಿಸಲಾಗಿದೆ.

ಇದನ್ನೂ ಓದಿ : ' ಅವಕಾಶಕ್ಕಾಗಿ ನಿರ್ದೇಶಕರ ಕಾಲು ಹಿಡಿದಿದ್ದೇನೆ ' : ವೀಕೆಂಡ್‌ ವಿತ್ ರಮೇಶ್‌ ಶೋದಲ್ಲಿ ಚಿನ್ನಿ ಮಾಸ್ಟರ್​​

ಈ ಚಿತ್ರದ ಮೂಲಕ ನಿರ್ದೇಶಕ ಜೂಡ್ ಕೇರಳದಲ್ಲಿ ಸಂಭವಿಸಿದ ಪ್ರವಾಹವನ್ನು ಮರು ಸೃಷ್ಟಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಥೆಯನ್ನು ನೈಜವಾಗಿ ಹೆಣೆಯಲಾಗಿದ್ದು, ಕಾವ್ಯ ಫಿಲಂ ಕಂಪನಿ ಮತ್ತು ಪಿಕೆ ಪ್ರೈಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ವೇಣು ಕುನ್ನಪಿಲ್ಲಿ, ಸಿಕೆ ಪದ್ಮಕುಮಾರ್ ಮತ್ತು ಆಂಡೋ ಜೋಸೆಫ್ ಚಿತ್ರ ನಿರ್ಮಿಸಿದ್ದಾರೆ.

ಇದನ್ನೂ ಓದಿ : "ದಿ ಕೇರಳ ಸ್ಟೋರಿ" ಸಂಬಂಧ ನಿಮ್ಮ ಸಮಸ್ಯೆಯೇನು ? , ಬ್ಯಾನ್​​ ಮಾಡಿದ 2 ರಾಜ್ಯಕ್ಕೆ ಸುಪ್ರೀಂ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.