ಜೇಮ್ಸ್ ಕ್ಯಾಮರಾನ್ ನಿರ್ದೇಶನದ 'ಅವತಾರ್: ದಿ ವೇ ಆಫ್ ವಾಟರ್' ಟೀಸರ್‌ನ ದೃಶ್ಯವೈಭವ ನೋಡಿ ಸಿನಿಮಾಪ್ರಿಯರು ನಿಬ್ಬೆರಗಾಗಿದ್ದಾರೆ. ಭೂಮಿಯಂತೆ ಕಾಣುವ, ಆಕರ್ಷಕ ಪಂಡೋರಾ ಜಗತ್ತಿನಲ್ಲಿ ವಾಸಿಸುವ 'ನಾವಿ' ಜೀವಿಗಳ ಕುಟುಂಬ ಮತ್ತಷ್ಟು ವಿಸ್ತಾರಗೊಂಡಿದೆ. ಅವರೊಂದಿಗೆ ಬೆಸೆದುಕೊಂಡಿರುವ ಹಾರುವ ಜೀವಿಗಳ ಜೊತೆಗೆ ಈಜುವ ವಿಶೇಷ ಜಲಚರಗಳ ದರ್ಶನವೂ ಆಗುತ್ತದೆ. ನೀರಿನೊಳಗೆ, ಮೇಲೆ.. ಹೀಗೆ ನೀರು ಇಲ್ಲಿನ ಕಥಾವಸ್ತು ಎಂಬಂತೆ ಭಾಸವಾಗುತ್ತದೆ.
- " class="align-text-top noRightClick twitterSection" data="">
‘ಅವತಾರ್’ ಸರಣಿಯಿಂದ ಐದು ಸಿನಿಮಾಗಳು ಹೊರಬರಲಿವೆ. ಮೊದಲ ಸಿನಿಮಾ 2009ರಲ್ಲಿ ತೆರೆಗೆ ಅಪ್ಪಳಿಸಿತ್ತು. ಇದಾದ ಬಳಿಕ ಸೀಕ್ವೆಲ್ ಬರಲು ಸುಮಾರು 13 ವರ್ಷಗಳೇ ಬೇಕಾಯಿತು. ‘ಅವತಾರ್’ ಚಿತ್ರ ವಿಶ್ವದ ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗಳಿಸಿದೆ. 2009ರಲ್ಲಿ ತೆರೆಗೆ ಬಂದ ಸಿನಿಮಾದ ಸೀಕ್ವೆಲ್ ಮೊದಲೇ ಘೋಷಣೆ ಆಗಿತ್ತು. ಆದರೆ, ಟೈಟಲ್ ಏನು? ಸಿನಿಮಾ ಯಾವಾಗ ರಿಲೀಸ್ ಆಗಲಿದೆ? ಎನ್ನುವ ಮಾಹಿತಿ ಹೊರಬಿದ್ದಿರಲಿಲ್ಲ. ಈಗ ವಿಚಾರ ಅಧಿಕೃತವಾಗಿದೆ.
ಇದನ್ನೂ ಓದಿ: ಅವತಾರ್ 2 ಮತ್ತು 3ನೇ ಭಾಗದ ಸಿನಿಮಾ ಚಿತ್ರೀಕರಣದ ಬಗ್ಗೆ ಮಾಹಿತಿ ಕೊಟ್ಟ ಕ್ಯಾಮರೂನ್
ಕ್ರಿಸ್ಮಸ್ ಪ್ರಯುಕ್ತ 2022ರ ಡಿಸೆಂಬರ್ 16ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಚಿತ್ರಕ್ಕೆ ‘ಅವತಾರ್: ದಿ ವೇ ಆಫ್ ವಾಟರ್’ ಎಂದು ಶೀರ್ಷಿಕೆ ಇಡಲಾಗಿದ್ದು, ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಸಿನಿಮಾ ದೊಡ್ಡಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ.
ಇದನ್ನೂ ಓದಿ: 'ಅವತಾರ್' ದಾಖಲೆ ಮುರಿದ 'ಅವೆಂಜರ್ಸ್'; ಭಾರತ, ಚೀನಾದಲ್ಲಿ ಅತ್ಯಧಿಕ ಲಾಭ ಮಾಡಿದ ಸಿನಿಮಾ
ಹಾಲಿವುಡ್ ಮಂದಿಗೆ ಡಿಸೆಂಬರ್ ತಿಂಗಳು ತುಂಬಾನೇ ವಿಶೇಷ. ಕ್ರಿಸ್ಮಸ್ ಇರುವುದರಿಂದ ದುಬಾರಿ ವೆಚ್ಚದ ಸಿನಿಮಾಗಳನ್ನು ಈ ಸಂದರ್ಭದಲ್ಲೇ ರಿಲೀಸ್ ಆಗುತ್ತವೆ. ಕಳೆದ ವರ್ಷ ಡಿಸೆಂಬರ್ 16ರಂದು ‘ಸ್ಪೈಡರ್ ಮ್ಯಾನ್: ನೋ ವೇ ಹೋಂ’ ಚಿತ್ರ ರಿಲೀಸ್ ಆಗಿ ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡಿತ್ತು. ‘ಅವತಾರ್’ ಸಿನಿಮಾ ವಿಶ್ವಮಟ್ಟದಲ್ಲಿ 2.8 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ 21,729 ಕೋಟಿ. ಈ ಚಿತ್ರದ ಕಲೆಕ್ಷನ್ ಇನ್ನೂ ಬ್ರೇಕ್ ಆಗಿಲ್ಲ ಅನ್ನೋದೇ ಅಚ್ಚರಿ!.