ಮೈಸೂರು: ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮತದಾನವಾಗಿರುವುದರಿಂದ ನನಗೆ ಬಹಳ ನಂಬಿಕೆ ಇದೇ ಜನ ನನ್ನನ್ನು ಕೈಬಿಡುವುದಿಲ್ಲ, ಎಂದು ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಸಿಎಚ್. ವಿಜಯಶಂಕರ್ ಹೇಳಿಕೆ ನೀಡಿದ್ದಾರೆ.
ಇಷ್ಟು ದಿನ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಸಿಎಚ್.ವಿಜಯಶಂಕರ್ ಇಂದು ಕುಟುಂಬದೊಂದಿಗೆ ರಿಲಾಕ್ಸ್ ಮೂಡ್ ನಲ್ಲಿದ್ದು, ಬೆಳಗ್ಗೆ ದೇವರ ಪೂಜೆ ಮಾಡಿ ಕುಟುಂಬದವರೊಂದಿಗೆ ಕಾಲ ಕಳೆಯುತ್ತಿದ್ದ ಸಿಎಚ್.ವಿಯಜಶಂಕರ್ ಮಾಧ್ಯಮಗಳ ಜೊತೆ ಮಾತನಾಡಿ, ಚುನಾವಣೆ ಶಾಂತಿಯುತವಾಗಿ ನಡೆಸಿದ್ದು ನೆಮ್ಮದಿಯ ಸಂಗತಿಯಾಗಿದೆ.
ಜನರು ಸ್ವಯಂ ಪ್ರೇರಿತರಾಗಿ ಮತದಾನ ಮಾಡಿದ್ದು ಇದರಿಂದ ದಾಖಲೆಯ ಮತದಾನವಾಗಿದೆ, ಇದನ್ನು ನಾವೆಲ್ಲ ಗೌರವಿಸಬೇಕಾಗಿದೆ ಜೊತೆಗೆ ಈ ಬಾರಿ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚಿನ ಮತದಾನವಾಗಿದ್ದು ನನಗೆ ಬಹಳ ನಂಬಿಕೆ ಇದೇ ಜನ ನನ್ನನ್ನು ಕೈ ಬಿಡುವುದಿಲ್ಲ ಎಂದರು.