ಗಯಾ(ಬಿಹಾರ): ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಬರೋಬ್ಬರಿ ಎರಡು ವರ್ಷಗಳ ಕಾಲ ದೈಹಿಕ ಸಂಪರ್ಕ ಬೆಳೆಸಿ, ವ್ಯಕ್ತಿಯೊಬ್ಬ ಮೋಸ ಮಾಡಿದ್ದಾನೆಂದು ಆರೋಪಿಸಿ ಯುವತಿಯೊಬ್ಬಳು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಬಿಹಾರದ ಗಯಾದಲ್ಲಿ ಈ ಘಟನೆ ನಡೆದಿದೆ.
ಕಳೆದ ಎರಡು ವರ್ಷಗಳ ಹಿಂದೆ ರೈಲಿನಲ್ಲಿ ಯೋಗೇಶ್ ಎಂಬ ವ್ಯಕ್ತಿ ಜೊತೆ ಯುವತಿ ಪರಿಚಯವಾಗಿದ್ದಳು. ಇದಾದ ಬಳಿಕ ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದಾರೆ. ಇದರ ಬೆನ್ನಲ್ಲೇ ದೇವಸ್ಥಾನದಲ್ಲಿ ಯಾರಿಗೂ ಗೊತ್ತಿಲ್ಲದ ರೀತಿಯಲ್ಲಿ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದಾರೆ. ಬಳಿಕ ಇಬ್ಬರು ಒಟ್ಟಿಗೆ ವಾಸಮಾಡಲು ಶುರು ಮಾಡಿದ್ದು, ಎರಡು ವರ್ಷಗಳ ಕಾಲ ನಿರಂತರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಆದರೆ, ಇದೀಗ ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾನೆಂದು ಆರೋಪಿಸಿ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ತನಗೆ ನ್ಯಾಯ ಒದಗಿಸಿಕೊಡುವಂತೆ ಕಾನ್ಪುರದ ಎಸ್ಎಸ್ಪಿ ಕಚೇರಿಯಲ್ಲಿ ದೂರು ದಾಖಲು ಮಾಡಿದ್ದಾಳೆ.
ಯುವತಿ ಹೇಳಿದ್ದೇನು?
ಎರಡು ವರ್ಷಗಳ ಹಿಂದೆ ಗಯಾ ನಿವಾಸಿ ಯೋಗೇಶ್ ಜೊತೆ ಯುವತಿ ರೈಲಿನಲ್ಲಿ ಪರಿಚಯವಾಗಿದ್ದಳು. ಇದಾದ ಬಳಿಕ ಇಬ್ಬರು ಸ್ನೇಹಿತರಾಗಿ ಪರಸ್ಪರ ಪ್ರೀತಿಸಲು ಶುರು ಮಾಡಿದ್ದಾಗಿ ಹೇಳಿಕೊಂಡಿದ್ದಾಳೆ. ಇದಾದ ಬಳಿಕ ದೇವಸ್ಥಾನವೊಂದರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ಮಾಹಿತಿ ನೀಡಿದ್ದಾಳೆ.
ಇದಾದ ಬಳಿಕ ಒಟ್ಟಿಗೆ ಜೀವನ ನಡೆಸಲು ಶುರು ಮಾಡಿದ್ದು, ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋಗಿ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಜೊತೆಗೆ ನನ್ನನ್ನು ಹೆಂಡತಿ ಎಂದು ಹೇಳಲು ಸಹ ಶುರು ಮಾಡಿದ್ದನು. ಯೋಗೇಶ್ ಕಾನ್ಪುರ್ ರೈಲ್ವೆ ಇಲಾಖೆಯಲ್ಲಿ ಟಿಟಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ಕಾನ್ಪುರ್ದಿಂದ ಗಯಾಕ್ಕೆ ವರ್ಗಾವಣೆಯಾಗಿದ್ದಾನೆ.
ಇದನ್ನೂ ಓದಿರಿ: ಅಫ್ಘನ್ ಬಿಕ್ಕಟ್ಟು.. 45 ನಿಮಿಷಗಳ ಕಾಲ ರಷ್ಯಾ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಮಾತುಕತೆ
ಗಯಾಕ್ಕೆ ಬಂದ ಬಳಿಕ ನನ್ನೊಂದಿಗೆ ದೂರವಾಣಿ ಸಂಪರ್ಕ ಕಡಿದುಕೊಂಡು ಬೇರೆ ಯುವತಿ ಜೊತೆ ಮದುವೆ ಮಾಡಿಕೊಳ್ಳಲು ತಯಾರಿ ನಡೆಸಿದ್ದನು. ಇದರ ಮಾಹಿತಿ ಸಿಕ್ಕಾಗ ನಾನು ಆತನನ್ನು ಸಂಪರ್ಕಿಸಲು ಯತ್ನಿಸಿದ್ರೂ, ನನಗೆ ಸಿಕ್ಕಿಲ್ಲ. ಹೀಗಾಗಿ ನ್ಯಾಯಕ್ಕಾಗಿ ಎಸ್ಎಸ್ಪಿ ಅವರನ್ನ ಭೇಟಿ ಮಾಡಿದ್ದೇನೆಂದು ತಿಳಿಸಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈಗಾಗಲೇ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.