ETV Bharat / crime

ಹೆದ್ದಾರಿ ಪಕ್ಕದ ಕಂಬಕ್ಕೆ ಕಾರು ಡಿಕ್ಕಿ: ಒಂದೇ ಕುಟುಂಬಕ್ಕೆ ಸೇರಿದ ಐವರು ಸ್ಥಳದಲ್ಲೇ ಸಾವು - ಹೆದ್ದಾರಿ ಪಕ್ಕದ ಕಂಬಕ್ಕೆ ಕಾರ್ ಡಿಕ್ಕಿ

ಉತ್ತರಪ್ರದೇಶದ ಪ್ರಯಾಗರಾಜ್ ನಗರದ ಹೆದ್ಧಾರಿಯಲ್ಲಿಅತಿವೇಗದಿಂದ ಪ್ರಯಾಣಿಸುತ್ತಿದ್ದ ಟವೇರಾ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮಗು ಸೇರಿದಂತೆ 4 ಮಹಿಳೆಯರು ಸಾವಿಗೀಡಾಗಿದ್ದಾರೆ. ಇದೇ ವೇಳೆ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

five died in prayagraj
ಉತ್ತರಪ್ರದೇಶದ ಪ್ರಯಾಗರಾಜ್ ಹೆದ್ಧಾರಿ ಐವರು ಸಾವು
author img

By

Published : Oct 27, 2022, 12:51 PM IST

ಪ್ರಯಾಗರಾಜ್(ಉತ್ತರಪ್ರದೇಶ): ನಗರದ ಹಂಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದ ಹೆದ್ಧಾರಿಯಲ್ಲಿಅತಿವೇಗವಾಗಿ ತೆರಳುತ್ತಿದ್ದ ಟವೇರಾ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಪರಿಣಾಮ ಸ್ಥಳದಲ್ಲೇ ‘ಐವರು ಸಾವಿಗೀಡಾಗಿರುವ ಘಟನೆ ಗುರುವಾರ ನಡೆದಿದೆ.

ಈ ಭೀಕರ ದುರಂತದಲ್ಲಿ ಮಗು ಸೇರಿದಂತೆ 4 ಮಹಿಳೆಯರು ಸಾವಿಗೀಡಾಗಿದ್ದು, ಇನ್ನೂ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಕೂಡಲೇ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ದಾರುಣ ಅಪಘಾತದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ರೇಖಾ ( 45 ), ಕೃಷ್ಣಾದೇವಿ ( 70 ), ರೇಖಾ (32) ಕವಿತಾ (36) ಕುಮಾರಿ ಓಜಸ್(1ವರ್ಷ) ಮೃತಪಟ್ಟರೆ,. ಉಮೇಶ ( 33) ಪ್ರಿಯಾ (30 )ಗೋಟು (12) ರಿಷಬ್ (26) ಚಾಲಕ ಇರ್ಷಾದ್ ತೀವ್ರ ಗಾಯಗೊಂಡಿದ್ದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ವಿವರ: ಸಂಜಯ್ ಅಗ್ರಹರಿ ಕುಟುಂಬವು ಟವೇರಾ ಕಾರ್ ನೊಳಗೆ ವಿಂಧ್ಯಾಚಲಕ್ಕೆ ಹೊರಟಿತ್ತು. ಒಮ್ಮಿಂದೊಮ್ಮೆಲೆ ತೆರಳುತ್ತಿದ್ದ ಕಾರು ಪ್ರಯಾಗ್‌ರಾಜ್‌ ಹಂಡಿಯಾ ಪೊಲೀಸ್ ಠಾಣೆ ವ್ಯಾಪ್ತಿ ಹೆದ್ಧಾರಿಯ ಕಂಬಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣ ಪ್ರಯಾಣಿಕರು ಕಿರುಚಾಟದ ಸದ್ದು ಕೇಳಿಸಿದೆ. ಇದನ್ನು ಕೇಳಿದ ಅಕ್ಕಪಕ್ಕದ ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ.

ಅಪಘಾತದ ಬಗ್ಗೆ ಸೇರಿದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲೇ ಪ್ರಯಾಣಿಕರನ್ನು ಕಾರಿನಿಂದ ಹೊರತೆಗೆದು ಪ್ರಾಥಮಿಕ ಚಿಕಿತ್ಸೆಗೆ ಪ್ರಯತ್ನ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಎಸ್ಪಿ ಗಂಗಾಪರ್ ನೇತೃತ್ವದ ಪೊಲೀಸ್ ತಂಡವು ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಕಾರು ಚಾಲಕ ನಿದ್ರೆಗೆ ಜಾರಿದ್ದು ಈ ಅಪಘಾತಕ್ಕೆ ಕಾರಣವಿರಬಹುದು ಎಂದು ಎಸ್ಪಿ ಗಂಗಾಪರ್ ಅವರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ದೋಣಿ ಮಗುಚಿ ಮೂವರ ಸಾವು ಮೂವರ ನಾಪತ್ತೆ.. ತೀವ್ರಗೊಂಡ ಶೋಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.