ಮೆಹಬೂಬಾಬಾದ್: ವಿದ್ಯುತ್ ಸ್ಪರ್ಶಿಸಿ ಅನೇಕ ಜಾನುವಾರುಗಳು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಜನವರಿಯಿಂದ ಈವರೆಗೆ ಒಟ್ಟು 77 ಜಾನುವಾರುಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿದ್ಯುತ್ ಶಾಕ್ನಿಂದ ಬಲಿಯಾಗಿವೆ.
ಮೆಹಬೂಬಾಬಾದ್ ಜಿಲ್ಲೆಯ ನರಸಿಂಹುಲುಪೇಟ ಮಂಡಲದ ಚಾರ್ಲಚಂದ್ರು ತಾಂಡಾದಲ್ಲಿ ಮೊನ್ನೆ ಗುರುವಾರ ಸುರಿದ ಭಾರಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆದರೆ ವಿದ್ಯುತ್ ಸಂಪರ್ಕ ಮರಳಿಸಿರುವುದು ತಿಳಿಯದೆ ಜನರು ಹೊಲಗಳಿಗೆ ಮೇವಿಗಾಗಿ ತಮ್ಮ ಜಾನುವಾರುಗಳನ್ನು ಬಿಟ್ಟಿದ್ದಾರೆ.
ಹುಲ್ಲು ಮೇಯುವ ವೇಳೆ ಕರೆಂಟ್ ವೈರ್ ತಾಗಿದ ಪರಿಣಾಮ ಸ್ಥಳದಲ್ಲೇ ಐದು ಎತ್ತುಗಳು, ಒಂದು ಹಸು ಮತ್ತು ಒಂದು ಎಮ್ಮೆ ಮೃತಪಟ್ಟಿವೆ. ಜೀವನಾಧಾರದ ಭಾಗವಾಗಿದ್ದ ಮೂಕ ಜೀವಿಗಳನ್ನು ಕಳೆದುಕೊಂಡಿರುವ ರೈತರು ಸ್ಥಳಕ್ಕೆ ಬಂದು ಕಣ್ಣೀರು ಸುರಿಸುತ್ತಿದ್ದಾರೆ.