ETV Bharat / crime

ಮೈಸೂರಲ್ಲಿ ವ್ಯಾಪರಿಯನ್ನು ಅಡ್ಡಗಟ್ಟಿ 1.8 ಲಕ್ಷ ರೂ. ಸುಲಿಗೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ! - cctv camera

ಚಾಮರಾಜ ಮೊಹಲ್ಲಾ ನಿವಾಸಿ ಪ್ರೇಮ್ ಕುಮಾರ್ ಅವರ 1.8 ಲಕ್ಷ ರೂ. ಸುಲಿಗೆ ಮಾಡಿಕೊಂಡು ದರೋಡೆಕೊರರು ಪರಾರಿ ಆಗಿದ್ದಾರೆ. ಬಂಡಿ ಪಾಳ್ಯದ ಮಾತಾಜಿ ಟ್ರೆಡಿಂಗ್ ಅಂಗಡಿ ನಡೆಸುತ್ತಿರುವ ಪ್ರೇಮ್​, ಬುಧವಾರ ರಾತ್ರಿ ವ್ಯಾಪಾರ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

Robbed
Robbed
author img

By

Published : Feb 13, 2021, 4:42 AM IST

ಮೈಸೂರು: ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವ್ಯಾಪಾರಿಯನ್ನು ಅಡ್ಡಗಟ್ಟಿದ ಇಬ್ಬರು ಸುಲಿಗೆಕೋರರು, ವ್ಯಾಪಾರಿ ಬಳಿ ಇದ್ದ 1.8 ಲಕ್ಷ ರೂ. ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ದಳವಾಯಿ ಶಾಲೆ ಬಳಿ ನಡೆದಿದೆ.

ಚಾಮರಾಜ ಮೊಹಲ್ಲಾ ನಿವಾಸಿ ಪ್ರೇಮ್ ಕುಮಾರ್ ಹಣ ಕಳೆದುಕೊಂಡವರು. ಬಂಡಿ ಪಾಳ್ಯದ ಮಾತಾಜಿ ಟ್ರೆಡಿಂಗ್ ಅಂಗಡಿ ನಡೆಸುತ್ತಿರುವ ಪ್ರೇಮ್​, ಬುಧವಾರ ರಾತ್ರಿ ತನ್ನ ವ್ಯಾಪಾರ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ.

ಮೈಸೂರಲ್ಲಿ ವ್ಯಾಪರಿಯನ್ನು ಅಡ್ಡಗಟ್ಟಿ ಸುಲಿಗೆ

ಈ ವೇಳೆ ಅಂಗಡಿಯಿಂದಲ್ಲೂ ಹಿಂದೆ ಬಂದ ಖದೀಮರು, ದಳವಾಯಿ ಶಾಲೆ ಬಳಿ ಸ್ಕೂಟರ್‌ನಲ್ಲಿ ಅಡ್ಡ ಹಾಕಿ, 'ನಮ್ಮ ಮೇಲೆ ಏಕೆ ಉಗಿದೆ' ಎಂದು ಜಗಳ ತೆಗೆದು ಸ್ಕೂಟರ್‌ನಿಂದ ಆತನನ್ನು ಕೆಳಗೆ ಬೀಳಿಸಿದ್ದಾರೆ. ರಸ್ತೆ ಬದಿಗೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ.

ಮತ್ತೊಬ್ಬ ಸ್ಕೂಟರ್‌ನ ಕೀ ತೆಗೆದುಕೊಂಡು ಡಿಕ್ಕಿಯಲ್ಲಿ ಇರಿಸಿದ್ದ 1.8 ಲಕ್ಷ ರೂ. ಎತ್ತಿಕೊಂಡ ಹಲ್ಲೆ ಮಾಡಿದ್ದಾನೆ. ಬಳಿಕ ಇಬ್ಬರು ಸುಲಿಗೆಕೋರರು, ಆತನನ್ನು ಅಲ್ಲೆ ತಳ್ಳಿ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಮಹಿಳೆ ಸ್ನಾನ ಮಾಡುವ ದೃಶ್ಯ ಸೆರೆ ಹಿಡಿದ ಆರೋಪ: ವ್ಯಕ್ತಿಯ ಬಂಧನ​​

ವಿಷಯ ತಿಳಿದು ಸ್ಥಳಕ್ಕೆ ಕೆ.ಆರ್. ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಹಲ್ಲೆ ನಡೆಸಿ ಹಣ ಕಿತ್ತುಕೊಂಡು ಹೋಗಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವುದನ್ನು ಗಮನಿಸಿದ್ದಾರೆ. ಈ ಸಂಬಂಧ ವ್ಯಾಪಾರಿ ಪ್ರೇಮ್ ಕುಮಾರ್ ದೂರು ನೀಡಿದ್ದು, ಪೊಲೀಸರು ದೂರು ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.