ಝಾನ್ಸಿ(ಉತ್ತರಪ್ರದೇಶ): ಮನೆಯಲ್ಲಿ ಹೆಣ್ಣು ಮಗು ಹುಟ್ಟಿತು ಎಂದು ದುಃಖಿತನಾದ ಯುವಕನೊಬ್ಬ ಏಳು ಜನರನ್ನು ಹತ್ಯೆ ಮಾಡುವುದಾಗಿ ಫೇಸ್ ಬುಕ್ನಲ್ಲಿ ಬೆದರಿಕೆ ಹಾಕಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಯುವಕನ ಫೇಸ್ ಬುಕ್ ಐಡಿ ನಕಲಿಯಲ್ಲ, ಅದು ಅಸಲಿ ಎಂದು ಪೊಲೀಸರು ಹೇಳಿದ್ದಾರೆ.
ಝಾನ್ಸಿಯ ರಾಯನ್ ರಾಯಕವಾರ್ ಹೆಸರಿನ ವ್ಯಕ್ತಿಯೊಬ್ಬ ಏಳು ಜನರನ್ನು ಬರ್ಬರವಾಗಿ ಹತ್ಯೆ ಮಾಡುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ. ಶೀಘ್ರದಲ್ಲೇ ಏಳು ಜನರನ್ನು ಹತ್ಯೆ ಮಾಡುವುದಾಗಿ ಮತ್ತು ಆಡಳಿತಕ್ಕೆ ಧೈರ್ಯವಿದ್ದರೆ ತಡೆಯಲಿ ಎಂದು ಆತ ಬರೆದಿದ್ದ. ಇದಲ್ಲದೇ ತನ್ನ ಪೋಸ್ಟ್ ಗೆ ತಾನೇ ಕಮೆಂಟ್ ಮಾಡುತ್ತ ಇನ್ನೂ ಹಲವಾರು ವಿಷಯಗಳನ್ನು ಬರೆದಿದ್ದ.
ಯುವಕನ ಈ ಪೋಸ್ಟ್ ನಂತರ, ಅವನ ಇಬ್ಬರು ಫೇಸ್‌ಬುಕ್ ಸ್ನೇಹಿತರಾದ ಪ್ರಿನ್ಸ್ ಮತ್ತು ದೀಪಕ್ ಕೂಡ ಕಮೆಂಟ್ ಮಾಡಿದ್ದಾರೆ. ಇದರಲ್ಲಿ ಪ್ರಿನ್ಸ್, 'ರಿಕ್ವೆಸ್ಟ್ ಹೈ ಭಾಯ್, ಪ್ಲೀಸ್ ಬತಾದೋ' ಎಂದು ಬರೆದಿದ್ದು, ಇದಾದ ನಂತರ ಮತ್ತೊಬ್ಬ ಸ್ನೇಹಿತ ದೀಪಕ್ 'ನನ್ನ ಸಹೋದರ ತಾಳ್ಮೆಯಿಂದಿರಿ, ಕೋಪಗೊಳ್ಳಬೇಡಿ' ಎಂದು ಬರೆದಿದ್ದಾರೆ. ಈ ಪೋಸ್ಟ್ ಅನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ತಕ್ಷಣ, ಅದರ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಲು ಪ್ರಾರಂಭಿಸಿದವು ಮತ್ತು ಇದು ಬಾರಿ ಚರ್ಚೆಯ ವಿಷಯವಾಯಿತು.
ಮಾಹಿತಿ ಸಿಕ್ಕ ತಕ್ಷಣ ಸೈಬರ್ ಸೆಲ್ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಫೇಸ್ ಬುಕ್ ಸಹಾಯದಿಂದ ತಡರಾತ್ರಿ ಯುವಕನ ಮನೆಗೆ ಬಂದು ಯುವಕನನ್ನು ಬಂಧಿಸಿದ್ದಾರೆ.
ಯುವಕನಿಗೆ ಇತ್ತೀಚೆಗಷ್ಟೇ ಹೆಣ್ಣು ಮಗು ಹುಟ್ಟಿತ್ತು. ಆದರೆ ಆತನ ಬಳಿ ಹಣವಿಲ್ಲದ ಕಾರಣದಿಂದ ಹತಾಶನಾಗಿ ಇಂಥ ಪೋಸ್ಟ್ ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ:ಪಿಎಫ್ಐ ಪ್ರತಿಭಟನೆಯಲ್ಲಿ ಕೇಳಿ ಬಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ