ETV Bharat / crime

ಮಗುವಿನ ಮೇಲೆ ಅತ್ಯಾಚಾರ ಯತ್ನ: ಆರೋಪಿಯನ್ನು ಹೊಡೆದು ಕೊಂದ ಕುಟುಂಬಸ್ಥರು - ಮಲಮಗಳ ಮೇಲೆ ಅತ್ಯಾಚಾರ

ಮಲತಂದೆಯೊಬ್ಬ ತಮ್ಮ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದರೆ, ಮತ್ತೊಂದು ಪ್ರಕರಣದಲ್ಲಿ ಮಲತಂದೆಯೊಬ್ಬ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೀಡಾಗಿದ್ದಾನೆ.

Attempted rape of a child; The accused was beaten to death by family members
ಮಗುವಿನ ಮೇಲೆ ಅತ್ಯಾಚಾರ ಯತ್ನ; ಆರೋಪಿಯನ್ನು ಹೊಡೆದು ಕೊಂದ ಕುಟುಂಬಸ್ಥರು
author img

By

Published : Jul 30, 2022, 12:05 PM IST

ವಿಜಯವಾಡ( ಆಂಧ್ರಪ್ರದೇಶ): ಕುಡಿದ ಮತ್ತಿನಲ್ಲಿ ಕೆಲವರಿಗೆ ತಮ್ಮ ಮಕ್ಕಳು ಯಾರು ಎಂಬುದು ಸಹ ಜ್ಞಾನವಿರುವುದಿಲ್ಲ. ಇಂಥ ರಾಕ್ಷಸರೇ ತಮಗೆ ಹುಟ್ಟಿದ ಮಕ್ಕಳ ಮೇಲೆಯೇ ಅತ್ಯಾಚಾರವೆಸಗಲು ಮುಂದಾಗುತ್ತಾರೆ. ಇಂಥವೇ ಎರಡು ಘಟನೆಗಳು ಪಶ್ಚಿಮ ಕೃಷ್ಣಾ ಜಿಲ್ಲೆಯಲ್ಲಿ ಕಳೆದ ದಿನ ನಡೆದ ಬಗ್ಗೆ ವರದಿಯಾಗಿವೆ. ಒಂದು ಪ್ರಕರಣದಲ್ಲಿ ಮಲತಂದೆಯೊಬ್ಬ ತನ್ನ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದರೆ, ಮತ್ತೊಂದು ಪ್ರಕರಣದಲ್ಲಿ ತಂದೆಯ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೀಡಾಗಿದ್ದಾರೆ.

ಘಟನೆಗಳ ವಿವರ: ಚಂದರಲಪಾಡು ಮಂಡಲದ ಕೋಣಯಪಾಳೆಮ್ ನಲ್ಲಿ ವಿವಾಹಿತ ಮಹಿಳೆಯೊಬ್ಬರಿಗೆ ಇಬ್ಬರು ಹೆಣ್ಣು ಮಕ್ಕಳು. ಅನಾರೋಗ್ಯದಿಂದ ಗಂಡ ತೀರಿಕೊಂಡಾಗ ಅವರು ಕೃಷ್ಣಾ ಜಿಲ್ಲೆಯ ಕಂಕಿಪಾಡು ಪ್ರದೇಶದ ಬತ್ತಿನಾ ಕೊಂಡಾಲ ಎಂಬಾತನೊಂದಿಗೆ ಮತ್ತೊಮ್ಮೆ ಮದುವೆಯಾಗಿದ್ದರು. ಇವರ ಇಬ್ಬರು ಹೆಣ್ಣು ಮಕ್ಕಳು ಕೋಣಪಾಳೆಯಮ್​ನಲ್ಲಿ ಅಜ್ಜಿ ಮನೆಯಲ್ಲಿ ಬೆಳೆಯುತ್ತಿದ್ದಾರೆ.

ಗಂಡ ಹೆಂಡತಿ ಇಬ್ಬರೂ ಕೂಲಿ ಕೆಲಸಕ್ಕಾಗಿ ಪಾಲ್ಮೇರು ಹತ್ತಿರದ ವೆಲ್ಪುಲಾ ಗ್ರಾಮಕ್ಕೆ ಬಂದಿದ್ದರು. ಆದರೆ ಜುಲೈ 27 ರಂದು ಪತಿ ಕೊಂಡಾಲು ಹೆಂಡತಿಗೆ ಹೇಳದೇ ಕೋಣಪಾಳೆಯಮ್​ಗೆ ಬಂದು ಹಿರಿಯ ಮಗಳಿಗೆ ನಿದ್ರೆ ಮಾತ್ರೆ ನೀಡಿ ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಕಿರಿಯ ಮಗಳು ಕಿರುಚಿಕೊಂಡಾಗ ನೆರೆಹೊರೆಯವರು ಜಮಾಯಿಸಿದ ನಂತರ ಕೊಂಡಾಲು ಓಡಿ ಹೋಗಿದ್ದಾನೆ.

ಈ ಹಿಂದೆಯೂ ಬಾಲಕಿಯ ಮೇಲೆ ಆತ ಅನೇಕ ಬಾರಿ ಅತ್ಯಾಚಾರವೆಸಗಿರುವುದಾಗಿ ತಿಳಿದು ಬಂದಿದೆ. ಈ ತಿಂಗಳು 28ರಂದು ಬಾಲಕಿಯ ತಾಯಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೋಕ್ಸೊ ಕಾಯ್ದೆ ಹಾಗೂ ಎಸ್​ಸಿ/ಎಸ್ಟಿ ದೌರ್ಜನ್ಯ ನಿಷೇಧ ಕಾಯ್ದೆಯಡಿ ಎಫ್​ಐಆರ್ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ, ಆಂಜನೇಯಪುರಂ ತಿರುವುರು ಮಂಡಲ ನಿವಾಸಿ ಇದುಪುಲಪಾಟಿ ದಾಸು (32) ಎಂಬಾತ ಕುಡಿದ ನಶೆಯಲ್ಲಿ ತನ್ನ ಸಹೋದರ ಸಂಬಂಧಿಯ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಪಾಲಕರು ಮನೆಗೆ ಬಂದ ನಂತರ ಮಗು ನಡೆದ ಘಟನೆಯಲ್ಲಿ ತಿಳಿಸಿದೆ. ಇದರಿಂದ ಆಕ್ರೋಶಿತರಾದ ಕುಟುಂಬಸ್ಥರು ದಾಸುನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಗೊಂಡ ಆತ ನಂತರ ಮೃತಪಟ್ಟಿದ್ದಾನೆ.

ಇದನ್ನು ಓದಿ:ಶಾಪಿಂಗ್​ ಕಾಂಪ್ಲೆಕ್ಸ್​​ನಲ್ಲಿ ಸಹೋದರಿಯರಿಗೆ ಲೈಂಗಿಕ ಕಿರುಕುಳ.. ಆರೋಪಿ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.