ಚಿತ್ರದುರ್ಗ : ನಿವೇಶನದ ಇ-ಸ್ವತ್ತಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪಿಡಿಒ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನಲ್ಲಿ ನಡೆದಿದೆ.
ನೇರಳಕಟ್ಟೆ ಗ್ರಾಮದ ಮೂರ್ತಪ್ಪ ಅನ್ನೋರು ಮನೆ ನಿವೇಶನದ ಇ-ಸ್ವತ್ತಿಗೆ ಅರ್ಜಿಸಲ್ಲಿಸಿದ್ದರು. ಇ-ಸ್ವತ್ತನ್ನು ನೀಡಲು ಪಿಡಿಒ ಸಂದೀಪ ಕುಮಾರ್ ₹2 ಸಾವಿರ ಲಂಚಕ್ಕೆ ಮೂರ್ತಪ್ಪ ಅವರ ಬಳಿ ಬೇಡಿಕೆಯಿಟ್ಟಿದ್ದರು.
ಲಂಚ ಸ್ವೀಕಾರ ಮಾಡುವ ವೇಳೆ ಎಸಿಬಿ ಡಿವೈಎಸ್ ಪಿ ಬಸವರಾಜ್ ಆರ್ ಮಗದುಮ್ ನೇತೃತ್ವದಲ್ಲಿ ದಾಳಿ ಮಾಡಿದೆ. ಇದೀಗ ಲಂಚ ಸ್ವೀಕಾರ ಮಾಡಿದ ತಪ್ಪಿಗೆ ಪಿಡಿಒ ಸಂದೀಪ್ ವಿಚಾರಣೆಗೊಳಗಾಗಿದ್ದಾರೆ.