ETV Bharat / city

ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಸಹಕಾರಿ : ಡಾ. ಜಿ. ಪರಮೇಶ್ವರ್

ಸಿದ್ದರಾಮಯ್ಯನವರಿಗೂ ಕೂಡ ಅವರ ಹುಟ್ಟುಹಬ್ಬ ಆಚರಿಸಲು ಆಸಕ್ತಿ ಇರಲಿಲ್ಲ. ಆದರೆ ಬೆಂಬಲಿಗರು ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ, ನಿಮಗೂ 75 ವರ್ಷವಾಗಿದೆ ಎಂದು ಹೇಳಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ ಎಂದು ಮಾಜಿ ಡಿಸಿಎಂ ಜಿ ಪರಮೇಶ್ವರ್​ ಹೇಳಿದರು.

Parameshwar and his wife participated in a special Homa
ಪರಮೇಶ್ವರ್​ ಹಾಗೂ ಅವರ ಪತ್ನಿ ವಿಶೇಷ ಹೋಮ ಹವನಾದಿಯಲ್ಲಿ ಪಾಲ್ಗೊಂಡರು
author img

By

Published : Aug 6, 2022, 7:56 PM IST

ತುಮಕೂರು: ಸಿದ್ದರಾಮಯ್ಯ ನಮ್ಮ ಪಕ್ಷದ ಹಿರಿಯ ಹಾಗೂ ಪ್ರಭಾವಿ ನಾಯಕರು. ಅವರಿಗಿರುವಂತಹ ಜನಮನ್ನಣೆ ಅವರ ಹುಟ್ಟುಹಬ್ಬದ ಮೂಲಕ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಸಹಕಾರಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 10 ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಸ್ವಯಂಪ್ರೇರಿತರಾಗಿ ಬಂದಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ನಮಗೆಲ್ಲರಿಗೂ ಒಂದು ರೀತಿ ಬಲ ಬಂದಂತಾಗಿದೆ. ಸಿದ್ದರಾಮಯ್ಯನವರಿಗೂ ಕೂಡ ಅವರ ಹುಟ್ಟುಹಬ್ಬ ಆಚರಿಸಲು ಆಸಕ್ತಿ ಇರಲಿಲ್ಲ. ಆದರೆ ಅವರ ಬೆಂಬಲಿಗರು ಆಯೋಜನೆ ಮಾಡಿದ್ದರು. ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ, ನಿಮಗೂ 75 ವರ್ಷವಾಗಿದೆ ಎಂದು ಹೇಳಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಡಾ. ಜಿ.ಪರಮೇಶ್ವರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ 71ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ತುಮಕೂರು ನಗರದ ಸಿದ್ಧಾರ್ಥ ಕಾಲೇಜು ಆವರಣದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಪರಮೇಶ್ವರ್​ ಹಾಗೂ ಅವರ ಪತ್ನಿ ವಿಶೇಷ ಹೋಮ ಹವನಾದಿಯಲ್ಲಿ ಪಾಲ್ಗೊಂಡರು.

ಇದನ್ನೂ ಓದಿ : ಸಿದ್ದು-ಡಿಕೆಶಿ ನಡುವೆ ಮೂರನೇ ವ್ಯಕ್ತಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ; ಸಚಿವ ಉಮೇಶ್​ ಕತ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.