ETV Bharat / city

ಕೋವಿಡ್ ನಂತರ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸುಧಾರಣೆಯಾಗಿದೆ: ಸಚಿವ ಮಾಧುಸ್ವಾಮಿ - improvements of health sector in tumakuru

ತಾಲೂಕು ಕೇಂದ್ರಗಳಲ್ಲಿಯೇ ಬಹುತೇಕ ಖಾಯಿಲೆಗಳಿಗೆ ಚಿಕಿತ್ಸೆ ನೀಡುವಂತಹ ವೈದ್ಯಕೀಯ ಸೌಲಭ್ಯವಿದ್ದು, ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಸಚಿವ ಮಾಧುಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

minister madhuswamy
ಸಚಿವ ಮಾಧುಸ್ವಾಮಿ
author img

By

Published : Oct 5, 2021, 1:22 PM IST

Updated : Oct 5, 2021, 1:31 PM IST

ತುಮಕೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಬೆಳಕಿಗೆ ಬಂದ ನಂತರ ಆರೋಗ್ಯ ಕ್ಷೇತ್ರವು ಅತಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಎಲ್ಲ ತಾಲೂಕು ಕೇಂದ್ರಗಳಲ್ಲಿ ಬಹುತೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಂತಹ ವೈದ್ಯಕೀಯ ಸೌಲಭ್ಯವಿದ್ದು, ಗಣನೀಯ ಪ್ರಮಾಣದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಆರೋಗ್ಯ ಕ್ಷೇತ್ರದ ಸುಧಾರಣೆ ಬಗ್ಗೆ ಸಚಿವ ಮಾಧುಸ್ವಾಮಿ ಮಾತನಾಡಿರುವುದು...

ನಗರದಲ್ಲಿ ಮಾತನಾಡಿದ ಅವರು, ವಿವಿಧ ರೀತಿಯ ರೋಗ ರುಜಿನಗಳಿಂದ ಬಳಲುತ್ತಿರುವ ರೋಗಿಗಳಿಗೆ ತಾಲೂಕು ಮಟ್ಟದಲ್ಲಿಯೇ ಚಿಕಿತ್ಸೆ ನೀಡುವ ವ್ಯವಸ್ಥೆ ಜಾರಿಗೆ ಬಂದಿದೆ. ಮೊದಲು ಸಣ್ಣ ಪ್ರಮಾಣದ ವೈರಲ್ ಫೀವರ್ ಇದ್ದರೂ ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ರೋಗಿಗಳು ಚಿಕಿತ್ಸೆಗೆ ಬರಬೇಕಿತ್ತು. ಆದ್ರೆ ಪ್ರಸ್ತುತ ತಾಲೂಕು ಆಸ್ಪತ್ರೆಗಳಲ್ಲಿಯೇ ವೈರಲ್ ಫೀವರ್​ಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸುವಂತಹ ಆರೋಗ್ಯ ವ್ಯವಸ್ಥೆಯಿದೆ. ಹೀಗಾಗಿ ಜನರು ಕಾಯಿಲೆಗಳಿಂದ ಬಳಲುವುದು ತಪ್ಪುತ್ತಿದೆ ಎಂದರು.

ಇದನ್ನೂ ಓದಿ: ಬಾಕಿ ಉಳಿಸಿಕೊಂಡ ಎರಡು ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ಜಾರಿ: ಸಚಿವ ಮುನೇನಕೊಪ್ಪ

ಜಿಲ್ಲೆಯಲ್ಲಿ 2,000 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಗುರುತಿಸಲಾಗಿದೆ. ಅಪೌಷ್ಟಿಕತೆಯಿಂದ ಮಕ್ಕಳನ್ನು ಪಾರು ಮಾಡಲು ಪೂರಕವಾದ ಪೌಷ್ಟಿಕಾಂಶಭರಿತ ಆಹಾರವನ್ನು ವಿತರಣೆ ಮಾಡಲಾಗುತ್ತಿದೆ. ಸ್ಪಿರುಲಿನಾ ಚಿಕ್ಕಿಗಳನ್ನು ನೀಡಲಾಗುತ್ತಿದೆ. ಅಲ್ಲದೇ ಸಿಎಫ್​​ಟಿಆರ್​ಐ ನಿಯಮಾವಳಿ ಪ್ರಕಾರ, ಮಕ್ಕಳ ಮೇಲೆ ತೀವ್ರ ಗಮನ ಹರಿಸಲಾಗುತ್ತಿದೆ. ಅಂತಹ ಮಕ್ಕಳನ್ನು ಅಪೌಷ್ಟಿಕತೆಯಿಂದ ದೂರ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಂಗನವಾಡಿ, ಶಾಲೆಗಳಲ್ಲಿ ಹಾಲಿನ ಪುಡಿಯನ್ನು ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Last Updated : Oct 5, 2021, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.