ತುಮಕೂರು : 20 ವರ್ಷಗಳ ನಂತರ ಜಿಲ್ಲೆಯ ಬಯಲುಸೀಮೆ ಪ್ರದೇಶಗಳ 248 ಕರೆಗಳು ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿವೆ. ಕಳೆದು ಒಂದು ವಾರದಿಂದ ಸುರಿದ ಸತತ ಮಳೆಯಿಂದ ಎಲ್ಲಾ ಕೆರೆಗಳು ತುಂಬಿ ತುಳುಕುತ್ತಿವೆ. ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ 20 ವರ್ಷಗಳ ನಂತರ ಕೆರೆಗಳು ತುಂಬಿದ್ದು, ಈವರೆಗೂ ಎಷ್ಟೇ ಮಳೆ ಬಂದರೂ ತುಂಬಿರಲಿಲ್ಲ.
ಅಲ್ಲದೆ ಕೋಡಿ ಬಿದ್ದ ನೀರು ಹಳ್ಳ ಕೊಳ್ಳಗಳಲ್ಲಿ ಬೆಳೆದಿದ್ದಂತಹ ಜಾಲಿ ಗಿಡಗಳು ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ಕೊಚ್ಚಿಕೊಂಡು ಹೋಗಿದೆ. ಈ ಕುರಿತಂತೆ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿದ್ಯಾ ಕುಮಾರಿ, ಜಿಲ್ಲೆಯ ಬಯಲುಸೀಮೆ ಪ್ರದೇಶದಲ್ಲಿನ ಎಲ್ಲಾ ಕೆರೆಗಳು ಸಂಪೂರ್ಣ ಭರ್ತಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಾರಿ ಹೇಮಾವತಿ ಜಲಾಶಯದಿಂದ ಜಿಲ್ಲೆಗೆ ಕುಡಿಯುವ ನೀರಿನ ಅಗತ್ಯವಿರುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ವಿಜಯಪುರದಲ್ಲಿ ಧಾರಾಕಾರ ಮಳೆ: ಕೃಷಿಭೂಮಿ ಜಲಾವೃತ, ಹೆದ್ದಾರಿ ಬಂದ್, ಸಂಚಾರ ಸ್ಥಗಿತ!