ETV Bharat / city

ಮಲೆನಾಡ ಹೆಬ್ಬಾಗಿಲಿನಲ್ಲಿದೆ ದೇಶ ಸೈನಿಕರ ಯಶೋಗಾಥೆ ಸಾರುವ ರಾಜ್ಯದ ಪ್ರಥಮ ಸೈನಿಕ ಪಾರ್ಕ್ - Kargil Vijay Diwas 2022

ದೇಶ ಪ್ರೇಮವನ್ನು ಸೈನಿಕನನ್ನು ನೋಡಿ ಕಲಿಯ ಬೇಕು ಎಂಬ ಮಾತಿದೆ. ಅದಕ್ಕೆ ಸ್ಪೂರ್ತಿಯಾಗಲಿ ಎಂದು ಶಿವಮೊಗ್ಗದಲ್ಲಿ ಸೈನಿಕ ಪಾರ್ಕ್​ ನಿಮಾರ್ಣ ಮಾಡಲಾಗಿದೆ. ಇಲ್ಲಿ ಸೈನಿಕರ ಸಾಹಸ, ವೀರಗಾಥೆಗಳನ್ನು ಪುತ್ಥಳಿಯ ಮೂಲಕ ಹೇಳಲಾಗಿದೆ. ಸಾರ್ವಜನಿಕರಿಗೆ ಇದು ವಿಶ್ರಾಂತಿಯ ತಾಣದೊಂದಿಗೆ, ದೇಶ ಪ್ರೇಮವನ್ನು ತಿಳಿಸುವ ಜಾಗವಾಗಿದೆ.

State first Soldiers Park is located in Shivamogga
ಸೈನಿಕ ಪಾರ್ಕ್
author img

By

Published : Jul 26, 2022, 5:23 AM IST

ಶಿವಮೊಗ್ಗ : ಭಾರತದ ರಾಷ್ಟ್ರಧ್ವಜವನ್ನು ಸೈನಿಕರೆಲ್ಲ ಸೇರಿ ನಿಲ್ಲಿಸುತ್ತಿರುವ ಪುತ್ಥಳಿಗಳು, ರಾಷ್ಟ್ರದ ಮೂರು ಸೇನೆಯ ಮುಖ್ಯಸ್ಥರು. ಗನ್ ಹಿಡಿದು ಗುರಿ ಇಡುತ್ತಿರುವ ಸೈನಿಕರ ಪುತ್ಥಳಿ ಕಂಡು ಬರುವುದು ಶಿವಮೊಗ್ಗದ ಡಿಸಿ ಕಾಂಪೌಂಡ್​ನಲ್ಲಿ. ಇದು ರಾಜ್ಯದ ಪ್ರಥಮ ಸೈನಿಕ್ ಪಾರ್ಕ್ ಆಗಿದೆ.

ಸೈನಿಕ್ ಪಾರ್ಕ್​ನಲ್ಲಿ ಭಾರತೀಯ ಸೈನಿಕರ ಸಾಹಸ ಹಾಗೂ ಶೌರ್ಯವನ್ನು ಸಾರುವ ಪುತ್ಥಳಿಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ಯುವಕರಲ್ಲಿ‌ ದೇಶ ಪ್ರೇಮ ಹಾಗೂ ಗೌರವ ಬೆಲೆಸುವ ಕಾರ್ಯ ಆಗುತ್ತಿದೆ. ದೇಶಕ್ಕಾಗಿ‌ ಸೇವೆ ಸಲ್ಲಿಸುವ ಮನೋಭಾವ ಮೂಡಿಸಲು ಸೈನಿಕ್ ಪಾರ್ಕ್ ನಿರ್ಮಾಣ ಮಾಡಲಾಗಿದೆ.

ಮಲೆನಾಡ ಹೆಬ್ಬಾಗಿಲಿನಲ್ಲಿದೆ ದೇಶ ಸೈನಿಕರ ಯಶೋಗಾಧೆ ಸಾರುವ ರಾಜ್ಯದ ಪ್ರಥಮ ಸೈನಿಕ ಪಾರ್ಕ್

ಸೈನಿಕ್ ಪಾರ್ಕ್​ನ ವಿಶೇಷ: ಸೈನಿಕ್ ಪಾರ್ಕ್​ನ್ನು 2017 ರಲ್ಲಿ ನಿರ್ಮಿಸಲಾಯಿತು. ಈ ಪಾರ್ಕ್​ ಅನ್ನು ಜಿಲ್ಲಾಡಳಿತ ಹಾಗೂ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ಸಹಯೋಗದಿಂದ ನಿರ್ಮಾಣ ಮಾಡಲಾಯಿತು. ಸೈನಿಕ್ ಪಾರ್ಕ್ ನಿರ್ಮಾಣ ಮಾಡಲು ಕರ್ನಾಟಕ ಶಿಲ್ಪಾ ಕಲಾ ಅಕಾಡೆಮಿ ಒಂದು ವಾರಗಳ‌ ಕಾಲ ಶಿಬಿರ ನಡೆಸಿ‌ ನಿರ್ಮಿಸಲಾಗಿದೆ.

ಇಲ್ಲಿ ಯೋಧರೆಲ್ಲಾ ಸೇರಿ ಭಾರತದ ರಾಷ್ಟ್ರಧ್ವಜ ನಿಲ್ಲಿಸುತ್ತಿದ್ದಾರೆ. ಇನ್ನೂಂದು ಕಡೆ ಗನ್ ಹಿಡಿದು ಗುರಿ ಇಡುತ್ತಿರುವ ಯೋಧ, ಪಕ್ಕದಲ್ಲಿ ಭಾರತೀಯ ಮೂರು ಸೇನೆಯ ಮುಖ್ಯಸ್ಥರ ಪುತ್ಥಳಿಯ ಜೊತೆ ಸೈನಿಕರ ಕಥೆಯನ್ನು ತಿಳಿಸಲಾಗಿದೆ.

ಇದರ ಪಕ್ಕದಲ್ಲಿ ಸೈನಿಕ‌ನೋರ್ವ ರಜೆ ಮುಗಿಸಿ ವಾಪಸ್ ಸೇನೆಗೆ‌ ಮರುಳುವಾಗ ತನ್ನ ಮಗು ಹಾಗೂ ಮಡದಿಯನ್ನು ಬಿಟ್ಟು ಹೋಗುವ ದೃಶ್ಯ ಮನ ಕಲಕುವಂತಿದೆ. ಅದರ ಪಕ್ಕದಲ್ಲಿ ಯುದ್ದದಲ್ಲಿ ಗಾಯಾಳುವಾದ ಸೈನಿಕನನ್ನು ಇನ್ನೂರ್ವ ಸೈನಿಕ ಕಾಪಾಡಿ ಹೆಗಲ ಮೇಲೆ ಹೂತ್ತುಕೊಂಡು ಹೋಗುತ್ತಿರುವುದು.

State first Soldiers Park is located in Shivamogga
ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸೈನಿಕನ ಪುತ್ಥಳಿ

ಇನ್ನು ಅಪಾಯದಲ್ಲಿದ್ದ ಮಕ್ಕಳನ್ನು ರಕ್ಷಿಸಿ ಯೋಧನೊಬ್ಬ ಹೆಗಲ ಮೇಲೆ ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದರೆ ಮಗದೊಂದೆಡೆ, ಕಡೆ ಯುದ್ದದಿಂದ ಬಿದ್ದ ಮನೆಯಿಂದ ಜನರನ್ನು ರಕ್ಷಿಸಿ ಕರೆದುಕೊಂಡು ಹೋಗುತ್ತಿರುವ ದೃಶ್ಯವನ್ನು ನೋಡಬಹುದು. ಹೀಗೆ ಒಂದು ಕಡೆ ಸೈನಿಕರ ವೀರಾವೇಶ ಹಾಗೂ ಯುದ್ದ ಇಲ್ಲದೇ ಹೋದಾಗ ಸೈನಿಕರ ಕಾರ್ಯ ಚಟುವಟಿಕೆಗಳ ಕುರಿತು ಪುತ್ಥಳಿಗಳನ್ನು ನಿರ್ಮಿಸಲಾಗಿದೆ. ಈ ಎಲ್ಲ ಪುತ್ಥಳಿಗಳು ಸಿಮೆಂಟ್​ನಿಂದ ತಯಾರು ಮಾಡಲಾಗಿದೆ.

ಮನೆಯಿಂದ ಸೇವೆಗೆ ಹೊರಡುವ (ಎಡ) ಮತ್ತು ರಕ್ಷಣಾ ಕಾರ್ಯದಲ್ಲಿ ಮಕ್ಕಳನ್ನು ಕರೆದು ತರುತ್ತಿರುವ(ಬಲ)ಪುತ್ಥಳಿ

ಹಿಂದಿನ ಜಿಲ್ಲಾಧಿಕಾರಿಗಳ ಕನಸಿನಕೂಸು ಸೈನಿಕ ಪಾರ್ಕ್: 2017 ರಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿಯಾಗಿದ್ದ ದಯಾನಂದ್​ ಅವರು ಶಿವಮೊಗ್ಗ ಜಿಲ್ಲೆಯ ಯುವ ಜನತೆಯಲ್ಲಿ ಸೈನ್ಯದ ಕುರಿತು ಜಾಗೃತಿ, ದೇಶ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ಸೈನಿಕ್ ಪಾರ್ಕ್ ನಿರ್ಮಾಣ ಮಾಡಿಸಿದರು. ಜಿಲ್ಲಾಧಿಕಾರಿಗಳ ಕಾಂಪೌಂಡ್​ನಲ್ಲಿದ್ದ ಖಾಲಿ ಜಾಗವನ್ನೇ ಬಳಸಿಕೊಂಡು ಸೈನಿಕ ಪಾರ್ಕ್ ನಿರ್ಮಿಸಿದರು.

ಇದಕ್ಕಾಗಿ ಹೆಚ್ಚಿನ ಹಣವನನ್ನು‌ ಖರ್ಚು ಮಾಡದೇ, ಪಾರ್ಕ್​ನಲ್ಲಿ ಸೈನಿಕರ ಪುತ್ಥಳಿ ನಿರ್ಮಿಸಲು ಕರ್ನಾಟಕ‌ ಶಿಲ್ಪಕಲಾ ಅಕಾಡೆಮಿ ವತಿಯಿಂದ ಒಂದು ವಾರಗಳ ಕಾಲ‌ ಶಿಬಿರ ನಡೆಸಲಾಯಿತು. ಇದರ ಫಲವಾಗಿ ಸೈನಿಕ್ ಪಾರ್ಕ್‌ ನಿರ್ಮಾಣವಾಯಿತು. ಹಾಲಿ ಈ ಪಾರ್ಕ್​ ಅನ್ನು ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯು ನಿರ್ವಹಣೆ ಮಾಡುತ್ತಿದೆ.

ಪಾರ್ಕ್​ನಲ್ಲಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವ ಸೇರಿದಂತೆ ಹಲವು ದೇಶ ಪ್ರೇಮ ಸಾರುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಪಾರ್ಕ್​ಗೆ ಬರುವವರು ಸೈನಿಕರ ಗುಣಗಾನ ಮಾಡುತ್ತಾ, ದೇಶ ಪ್ರೇಮವನ್ನು ಮೈಗೂಡಿಸಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ : ಎಚ್ಚರಿಕೆ... ಸರ್ಕಾರಿ ಸಿಬ್ಬಂದಿ ಇನ್ಮುಂದೆ ಸರಿಯಾದ ಸಮಯಕ್ಕೆ ಹಾಜರಿರಬೇಕು...!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.