ETV Bharat / city

ನ. 19ಕ್ಕೆ "ಮುಗಿಲ್ ಪೇಟೆ" ಬಿಡುಗಡೆ.. ಚಿತ್ರದ ಬಗ್ಗೆ ಮನುರಂಜನ್ ರವಿಚಂದ್ರನ್​​​ ಏನಂತಾರೆ? - ಶಿವಮೊಗ್ಗ ಲೇಟೆಸ್ಟ್ ನ್ಯೂಸ್

ಮನುರಂಜನ್ ರವಿಚಂದ್ರನ್(manuranjan ravichandran) ಅಭಿನಯದ ಬಹು ನಿರೀಕ್ಷಿತ "ಮುಗಿಲ್ ಪೇಟೆ"(mugilpete film) ಚಿತ್ರ ನವೆಂಬರ್ 19ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಬಗ್ಗೆ ನಟ ಮನುರಂಜನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

mugilpete film will be released on  november 19th
ನ. 19ಕ್ಕೆ "ಮುಗಿಲ್ ಪೇಟೆ" ಬಿಡುಗಡೆ
author img

By

Published : Nov 13, 2021, 12:37 PM IST

ಶಿವಮೊಗ್ಗ: ಕ್ರೇಜಿಸ್ಟಾರ್ ರವಿಚಂದ್ರನ್(ravichandran) ಪುತ್ರ ಮನುರಂಜನ್ ರವಿಚಂದ್ರನ್(manuranjan ravichandran) ಅಭಿನಯದ ಬಹುನಿರೀಕ್ಷಿತ "ಮುಗಿಲ್ ಪೇಟೆ"(mugilpete film) ಚಿತ್ರ ನವೆಂಬರ್ 19ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ನಟ ಮನುರಂಜನ್ ರವಿಚಂದ್ರನ್

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದ ನಟ ಮನುರಂಜನ್, ಈ ಚಿತ್ರವು ನನ್ನ ಪಾಲಿಗೆ ಬಹು ನಿರೀಕ್ಷೆಯ ಚಿತ್ರವಾಗಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಅಪಾರ ಮೆಚ್ಚುಗೆ ಸಿಕ್ಕಿದೆ. ಇದೊಂದು ಇಡೀ ಕುಟುಂಬ ಕುಳಿತು ನೋಡಬಹುದಾದ ಚಿತ್ರವಾಗಿದೆ. ಇಂಪಾದ ಹಾಡುಗಳು, ಸೊಗಸಾದ ಹೊರಾಂಗಣ ಚಿತ್ರೀಕರಣ, ನವಿರಾದ ಪ್ರೇಮವನ್ನು ಒಳಗೊಂಡ ಚಿತ್ರವಾಗಿದೆ. ಒಟ್ಟಾರೆ, ಇದು ಒಂದು ಉತ್ತಮ ಕೌಟುಂಬಿಕ ಚಿತ್ರವಾಗಿದ್ದು, ಚಿತ್ರ ಯಶಸ್ವಿಯಾಗಲಿದೆ ಎಂಬ ನಂಬಿಕೆ ನನ್ನದು ಎಂದರು.

ಭರತ್ ಎಸ್. ನಾವುಂದ ಈ ಚಿತ್ರ ನಿರ್ದೇಶಿಸಿದ್ದಾರೆ. "ಮುಗಿಲ್ ಪೇಟೆ" ಇಡೀ ಚಿತ್ರತಂಡದ ಶ್ರಮದ ಫಲವಾಗಿ ಇಂದು ನಮ್ಮ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. 90 ದಿನಗಳ ಕಾಲ ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಕುಂದಾಪುರ, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರೀಕರಣ ನಡೆಸಿದ್ದೇವೆ ಎಂದರು.

ಸಂಬಂಧಗಳಿಗೆ ಬೆಲೆ ಕೊಡುವ ಕುಟುಂಬ

ಸಂಬಂಧಗಳಿಗೆ ಬೆಲೆ ಕೊಡುವ ಒಂದು ಕುಟುಂಬ, ಸಂಬಂಧಗಳನ್ನು ಕಡೆಗಣಿಸುವ ಮತ್ತೊಂದು ಕುಟುಂಬ, ಈ ಎರಡು ಕುಟುಂಬದ ಎರಡು ಜೀವಗಳು ಪ್ರೀತಿ ಮಾಡಿದಾಗ ಏನಾಗುತ್ತದೆ ಎಂಬುದೇ "ಮುಗಿಲ್ ಪೇಟೆ"ಯ ಕಥಾವಸ್ತು. ಕೌಟುಂಬಿಕ ಸನ್ನಿವೇಶ, ಪ್ರೀತಿ, ಸಾಹಸ, ಉತ್ತಮ ಹಾಸ್ಯ ಎಲ್ಲವೂ ನಮ್ಮ ಸಿನಿಮಾದಲ್ಲಿದೆ ಎಂದರು.

ಈ ಚಿತ್ರದಲ್ಲಿ ಸಾಧುಕೋಕಿಲ, ರಂಗಾಯಣರಘು, ತಾರಾ, ಅವಿನಾಶ್ ಅವರಂತಹ ಉತ್ತಮ ಕಲಾವಿದರೊಡನೆ ಅಭಿನಯಿಸಿದ್ದು, ಅನುಭವವನ್ನು ನಿಜಕ್ಕೂ ಮರೆಯುವ ಹಾಗಿಲ್ಲ. ನಾಯಕಿ ಕಯಾದು ಲೋಹರ್ ಅವರ ಅಭಿನಯ ಸೊಗಸಾಗಿ ಮೂಡಿ ಬಂದಿದೆ. ಚಿತ್ರದ ತುಣುಕು ಹಾಗೂ ಹಾಡುಗಳನ್ನು ಅಪ್ಪನಿಗೆ ತೋರಿಸಿದೆ. ಅವರು ಇಷ್ಟಪಟ್ಟಿದ್ದಾರೆ. ಅವರ ಆಶೀರ್ವಾದ ಸದಾ ಇರುತ್ತದೆ ಎಂದರು.

ಇದನ್ನೂ ಓದಿ: ಪುನೀತ್ ಫೋಟೋ ಮುಂದೆ ಶಾಂಪೇನ್​​​ ಬಾಟಲ್ ಓಪನ್..'ಏಕ್ ಲವ್ ಯಾ' ಚಿತ್ರತಂಡದಿಂದ ಪ್ರಮಾದ: ಅಭಿಮಾನಿಗಳ ಆಕ್ರೋಶ

ವಿಶೇಷವಾಗಿ ಮೊದಲ ಬಾರಿಗೆ ನಟ ಸಾಧುಕೋಕಿಲ 16 ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಹಾಗಾಗಿ ಲಿಮ್ಕಾ ದಾಖಲೆಗೆ ಕಳುಹಿಸುವ ಪ್ರಕ್ರಿಯೆ ಸಹ ನಡೆಯುತ್ತಿದೆ. ಹಾಗಾಗಿ ಎಲ್ಲರೂ ಚಿತ್ರ ನೋಡಿ ಬೆಂಬಲಿಸುವಂತೆ ಮನವಿ ಮಾಡಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.