ETV Bharat / city

ಪ್ರತಿಭಾವಂತ ನಟನನ್ನು ಕಳೆದುಕೊಂಡು ನಾಡು ಬರಿದಾಗಿದೆ: ಸಚಿವ ಈಶ್ವರಪ್ಪ - shivamogga latest news

ನಟ ಪುನೀತ್ ರಾಜ್​ ಕುಮಾರ್​ನನ್ನು ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ.

minister k s eshwarappa
ಸಚಿವ ಕೆ.ಎಸ್. ಈಶ್ವರಪ್ಪ
author img

By

Published : Oct 30, 2021, 1:38 PM IST

ಶಿವಮೊಗ್ಗ: ಕರ್ನಾಟಕ ರಾಜ್ಯ ಅತ್ಯಂತ ಪ್ರತಿಭಾವಂತ ನಟನನ್ನು ಕಳೆದುಕೊಂಡು ಬರಿದಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅವರು ನಟ ಪುನೀತ್ ರಾಜ್ ಕುಮಾರ್​ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ಸಚಿವ ಕೆ.ಎಸ್. ಈಶ್ವರಪ್ಪ

ಚಂದನವನದ ಮೇರು ನಟ ಪುನೀತ್​​ ರಾಜ್​ಕುಮಾರ್ ಅವರ ಅಕಾಲಿಕ ಮರಣವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ನಿನ್ನೆ ಇದ್ರು, ಇಂದು ಅವರಿಲ್ಲ ಎಂದ್ರೆ ಯಾರಿಗೂ ನಂಬಲು ಆಗೋದಿಲ್ಲ. ‌ಕರ್ನಾಟಕ ಚಿತ್ರರಂಗದಲ್ಲಿಯೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಸೌಮ್ಯ ವ್ಯಕ್ತಿ ಪುನೀತ್​ ರಾಜಕುಮಾರ್​. ಬಹಳ ಸಜ್ಜನ ಕಲಾವಿದ. ಅವರನ್ನು ಕಳೆದುಕೊಂಡು ನಾಡು ಬರಿದಾಗಿದೆ. ರಾಜ್ಯ ದುಃಖದಲ್ಲಿ ಮುಳುಗಿದೆ ಎಂದು ಕಂಬನಿ ಮಿಡಿದರು.

ಇದನ್ನೂ ಓದಿ: 'ಪುನೀತ್‌ ನನ್ನ ಮಾಮ.. ಮಾಮ.. ಅಂತಿದ್ದ' : ವಿಪಕ್ಷ ನಾಯಕ ಸಿದ್ದರಾಮಯ್ಯ ಭಾವುಕ

ನಾವ್ಯಾರೂ ಕಲ್ಪನೆ ಮಾಡಿರಲಿಲ್ಲ, ಪುನೀತ್ ರಾಜ್ ಕುಮಾರ್ ಇಷ್ಟು ಬೇಗ ನಮ್ಮನ್ನು ಬಿಟ್ಟು ಅಗಲುತ್ತಾರೆ ಎಂದು ಅಂದು‌ಕೊಂಡಿರಲಿಲ್ಲ. ನಾವೆಲ್ಲ ಅವರ ಕುಟುಂಬ ಇದ್ದ ಹಾಗೆ. ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ.., ಪುನೀತ್ ರಾಜ್ ಕುಮಾರ್ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.