ಶಿವಮೊಗ್ಗ : ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ವತಿಯಿಂದ ಸಾಗರದಲ್ಲಿ ಕಾರ್ಗಿಲ್ ವಿಜಯೋತ್ಸವ ದಿನವನ್ನು ಆಚರಿಸಲಾಯಿತು.
ಸಾಗರದ ತಮ್ಮ ಕಚೇರಿಯಲ್ಲಿ ಸರಳ ಸಮಾರಂಭದ ಮೂಲಕ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮಾಡಲಾಯಿತು. ಮಾಜಿ ಯೋಧರು ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಭಾರತೀಯ ಸೈನಿಕರ ಬಲಿದಾನ, ತ್ಯಾಗವನ್ನು ಹಾಗೂ ತಾವು ಯುದ್ಧದಲ್ಲಿ ಭಾಗಿಯಾದ ಕ್ಷಣದ ಬಗ್ಗೆ ಮೆಲುಕು ಹಾಕಿದರು. ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ಸೈನಿಕರಿಗೆ ಎಲ್ಲರು ಗೌರವ ನೀಡುವುದನ್ನು ಕಲಿಯಬೇಕು.
ಸರ್ಕಾರಗಳು ಸಹ ಮಾಜಿ ಸೈನಿಕರನ್ನು ಸರಿಯಾಗಿ ನಡೆಸಿಕೊಳ್ಳಬೇಕು ಎಂದು ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಸುಭಾಷ್, ರಂಗರಾಜ್, ಅಣ್ಣಪ್ಪ, ರವಿ ಬಂದಗದ್ದೆ, ಸೋಮಣ್ಣ, ವೆಂಕಟೇಶ್, ಪರಮೇಶ್ವರಪ್ಪ, ವಸಂತ್ ಕುಗ್ವೆ, ಕಿಶೋರ್ ಭೈರಾಪುರ ಹಾಜರಿದ್ದರು.