ಶಿವಮೊಗ್ಗ: ಅಬಕಾರಿ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 464 ಲೀಟರ್ ಕೊಳೆ ಹಾಗೂ ಕಳ್ಳಭಟ್ಟಿಯನ್ನ ವಶಕ್ಕೆ ಪಡೆಯಲಾಗಿದೆ.

ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಸೂಡೂರು ಗ್ರಾಮದ ಬೀರನಾಯ್ಕ (65) ಎಂಬುವವರ ಮನೆ ಮೇಲೆ ದಾಳಿ ನಡೆಸಿ, 4 ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆಯಲಾಗಿದೆ. ಚೂಡನಾಳ್ ಗ್ರಾಮದ ರಾಮಾನಾಯ್ಕ (55) ಎಂಬಾತನ ಮನೆಯಿಂದ 60 ಲೀಟರ್ ಬೆಲ್ಲದ ಕೊಳೆ ಹಾಗೂ 500 ಮಿಲಿ ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆಯಲಾಗಿದ್ದು, ಎರಡು ಪ್ರಕರಣಗಳಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.

ಇನ್ನು ಶಿಕಾರಿಪುರ ತಾಲೂಕು ಚಿಕ್ಕಮಾಗಡಿ ತಾಂಡದ ನೀಲಗಿರಿ ಪ್ಲಾಂಟೇಷನ್ನಲ್ಲಿ 400 ಲೀಟರ್ ಬೆಲ್ಲದ ಕೊಳೆಯನ್ನ ವಶಕ್ಕೆ ಪಡೆಯಲಾಗಿದೆ.