ಶಿವಮೊಗ್ಗ: ಜಿಲ್ಲೆಯಲ್ಲಿಂದು 8 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 261ಕ್ಕೆ ಏರಿಕೆಯಾಗಿದೆ.
ಪಿ- 9897 ಪ್ರಾಥಮಿಕ ಸಂಪರ್ಕದಿಂದ ಒಬ್ಬರಿಗೆ, ಪಿ- 14387ರ ಪ್ರಾಥಮಿಕ ಸಂಪರ್ಕದಿಂದ ಇಬ್ಬರಿಗೆ, ಐಎಲ್ಐ ಪ್ರಕರಣದ ಮೂಲಕ ನಾಲ್ಕು ಜನರಿಗೆ ಸೋಂಕು ತಗುಲಿದೆ. ಅಲ್ಲದೇ, ಅಂತರ ಜಿಲ್ಲಾ ಪ್ರವಾಸದಿಂದ ಬಂದ ಒಬ್ಬರಿಗೆ ಕೊರೊನ ಸೋಂಕು ದೃಢಪಟ್ಟಿದೆ. 261 ಸೋಂಕಿತರ ಪೈಕಿ 117 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇನ್ನುಳಿದ 140 ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೊರೊನಾಗೆ ಈವರೆಗೆ ನಾಲ್ವರು ಬಲಿಯಾಗಿದ್ದಾರೆ.