ETV Bharat / city

ಕೇಂದ್ರದ ಬಜೆಟ್ ಇತಿಹಾಸದಲ್ಲಿ ಬರೆದಿಡುವತಂಹ ಬಜೆಟ್​​​​: ಸಂಸದ ಬಿ.ವೈ.ರಾಘವೇಂದ್ರ - ಕೇಂದ್ರ ಬಜೆಟ್ ಕುರಿತು ಬಿವೈ ರಾಘವೇಂದ್ರ ಹೇಳಿಕೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಿರ್ಮಲಾ ಸೀತಾರಾಮನ್ ಅವರು ದೇಶದ ಆಬಿವೃದ್ಧಿಯ ಬಜೆಟ್​ ಮಂಡಿಸಿದ್ದಾರೆ. ಆತ್ಮ ನಿರ್ಭರ ಭಾರತ ಯೋಜನೆಯಡಿ ಮಂಡಿಸಿರುವ ಬಜೆಟ್ ಜನರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

central-budget-a-budget-that-is-written-in-history
ಕೇಂದ್ರದ ಬಜೆಟ್
author img

By

Published : Feb 13, 2021, 3:02 PM IST

ಶಿವಮೊಗ್ಗ: ಕೇಂದ್ರ ಸರ್ಕಾರದ 2020-21ರ ಬಜೆಟ್ ಭಾರತದ ಇತಿಹಾಸ‌ದಲ್ಲಿ ಬರೆದಿಡುವಂತಹ ಬಜೆಟ್​ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಜಿಲ್ಲಾ ಬಿಜೆಪಿ‌ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಿರ್ಮಲಾ ಸೀತಾರಾಮನ್ ಅವರು ದೇಶದ ಆಬಿವೃದ್ಧಿಯ ಬಜೆಟ್​ ಮಂಡಿಸಿದ್ದಾರೆ. ಆತ್ಮ ನಿರ್ಭರ ಭಾರತ ಯೋಜನೆಯಡಿ ಮಂಡಿಸಿರುವ ಬಜೆಟ್ ಜನರಿಗೆ ಅನುಕೂಲವಾಗಲಿದೆ. ಆರೋಗ್ಯ ಮತ್ತು ಯೋಗ, ಬೌದ್ಧಿಕ, ಹಣಕಾಸು, ಮೂಲಭೂತ ಸೌಲಭ್ಯ, ಅಂತರ್ಗತ ಅಭಿವೃದ್ಧಿ, ಮಾನವ ಶಕ್ತಿ ಬಳಕೆ, ಸಂಶೋಧನೆ ಹಾಗೂ‌ ಅಭಿವೃದ್ಧಿ, ಉತ್ತಮ ಆಡಳಿತ ಎಂಬ ಆರು ಪಿಲ್ಲರ್​ಗಳ ಅನ್ವಯ ಬಜೆಟ್​​ ಮಂಡಿಸಲಾಗಿದೆ ಎಂದರು.

ಕೇಂದ್ರದ ಬಜೆಟ್ ಇತಿಹಾಸದಲ್ಲಿ ಬರೆದಿಡುವತಂಹ ಬಜೆಟ್

ಎಪಿಎಂಸಿ ಕಾಯ್ದಯ ಬಗ್ಗೆ ಅಪ್ರಚಾರ ನಡೆಸಲಾಗುತ್ತಿದೆ.‌ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಬಜೆಟ್​ಅನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವ ಕಾರ್ಯ ಮಾಡುತ್ತವೆ ಎಂದರು. ಈ ವರ್ಷ ಜಿಲ್ಲೆಗೆ ಹೊಸ ಯೋಜನೆಗಳು ಬೇಡವೆಂದು ಅಧಿಕಾರಿಗಳ‌ ಜೊತೆ ಚರ್ಚೆ ನಡೆಸಲಾಗಿದೆ. ಹಳೆ ಯೋಜನೆಗಳ ಮುಂದುವರೆದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸೋಮವಾರ ಭದ್ರಾವತಿ ಹಾಗೂ ಶಿವಮೊಗ್ಗದ‌ ಮೇಲ್ಸೇತುವೆ ಕಾಮಗಾರಿಗಳಿಗೆ ಕೇಂದ್ರದ ರೈಲ್ವೆ ಸಚಿವ ಪಿಯೂಸ್ ಗೋಯಲ್​ ವರ್ಚುವಲ್​​ ಮೂಲಕ ಚಾಲನೆ ನೀಡಲಿದ್ದಾರೆ. ಇದರಲ್ಲಿ ಸಿಎಂ ಯಡಿಯೂರಪ್ಪ ಶಿವಮೊಗ್ಗದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಕಡದಕಟ್ಟೆ ರೈಲ್ವೆ ಕ್ರಾಸಿಂಗ್ 34ಕ್ಕೆ 25.72 ಕೋಟಿ ರೂ. ವೆಚ್ಚದ ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾಗಲಿದೆ. ಸವಳಂಗ ರಸ್ತೆಯ ರೈಲ್ವೆ ಕ್ರಾಸಿಂಗ್ 49 ಕಾಮಗಾರಿಗೆ 60.74 ಕೋಟಿ ರೂ. ಹಾಗೂ ಪಿ ಅಂಡ್ ಟಿ ಕಾಲೋನಿಗೆ ಅಂಡರ್ ಪಾಸ್ ಸೇತುವೆ 52ರಲ್ಲಿ 29.60 ಕೋಟಿ ರೂ. ಖರ್ಚಿನಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.