ETV Bharat / city

ಕಾಂಗ್ರೆಸ್​ ವಿರುದ್ಧ ಅವಾಚ್ಯ ಪದ ಬಳಕೆ.. ಸಚಿವ ಸ್ಥಾನದಿಂದ ಈಶ್ವರಪ್ಪ ವಜಾಕ್ಕೆ ಬೇಳೂರು ಆಗ್ರಹ

ಸಚಿವ ಕೆ.ಎಸ್.​​ ಈಶ್ವರಪ್ಪ ಕಾಂಗ್ರೆಸ್ ಪಕ್ಷವನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ರಾಜ್ಯಪಾಲರು ಬಿಜೆಪಿಯ ಕೈಗೊಂಬೆ ಅಲ್ಲ ಎಂದಾದಲ್ಲಿ, ತಕ್ಷಣ ಈಶ್ವರಪ್ಪ ಅವರನ್ನು ಅವರ ಸ್ಥಾನದಿಂದ ವಜಾ ಮಾಡಲಿ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ‌.

KPCC spokesman belooru gopalakrishna
ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ
author img

By

Published : Aug 11, 2021, 12:42 PM IST

ಶಿವಮೊಗ್ಗ: ಕಾಂಗ್ರೆಸ್ ಪಕ್ಷವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಚಿವ ಕೆ.ಎಸ್.​​ ಈಶ್ವರಪ್ಪ ಅವರನ್ನು ರಾಜ್ಯಪಾಲರು ತಕ್ಷಣ ಅವರನ್ನು ವಜಾ ಮಾಡಬೇಕೆಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ‌.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಹಿರಿಯರಿದ್ದಾರೆ. ಅವರ ಹಾಗೆ ಮಾತನಾಡಲು ನನಗೂ ಬರುತ್ತದೆ. ಆದರೆ, ನಾನು ಹಾಗೆ ಮಾತನಾಡುವುದಿಲ್ಲ. ಈಶ್ವರಪ್ಪ ವರ್ತನೆಯಿಂದ ಬಿಜೆಪಿಗಂತೂ ಒಳ್ಳೆಯದಾಗಲ್ಲ. ಈ ರೀತಿ ಮಾತನಾಡಿದರೆ ನಿಮಗೆ ಶೋಭೆ ತರುವುದಿಲ್ಲ ಎಂದರು. ರಾಜ್ಯಪಾಲರು ಬಿಜೆಪಿಯ ಕೈಗೊಂಬೆ ಅಲ್ಲ ಎಂದಾದಲ್ಲಿ, ತಕ್ಷಣ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಿ ಎಂದು ಎಂದರು.

ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ

ಈಶ್ವರಪ್ಪನವರಿಗೆ ವಯಸ್ಸಾಗಿದೆ. ಮುಂದೆ ಟಿಕೇಟ್ ಸಿಗಲ್ಲ ಎಂದು ಹತಾಷರಾಗಿ ಈ ರೀತಿ ಮಾತನಾಡುತ್ತಿರಬಹುದು. ಶಿವಮೊಗ್ಗ ‌ಸ್ಮಾರ್ಟ್ ಸಿಟಿ ಯೋಜನೆ ಪ್ರಾರಂಭವಾಗಿ 7 ವರ್ಷ ಆಗಿದೆ. ಆದರೆ ಇನ್ನೂ ಕಾಮಗಾರಿ ಮುಗಿಯುತ್ತಿಲ್ಲ. ಈಗ ಯಡಿಯೂರಪ್ಪನವರನ್ನು ಕೆಳಗೆ ಇಳಿಸಿದ್ದಾರೆ. ಇದರಿಂದ ಏನೂ ಅಭಿವೃದ್ಧಿ ಆಗಲ್ಲ ಎಂದ್ರು.

ಈಶ್ವರಪ್ಪನವರು ಸಿಟಿ ಬಿಟ್ಟು ಹೊರಗಡೆ ಹೋದ್ರೆ ಏನೂ ಇಲ್ಲ. ಬಿಜೆಪಿ ತತ್ವ ಸಿದ್ಧಾಂತ ಇಟ್ಟುಕೊಂಡಿರುವ ಪಕ್ಷ ಅಂತ ಹೇಳ್ತಾರೆ. ಇದೇನಾ ನಿಮ್ಮ ತತ್ವ ಸಿದ್ಧಾಂತ. ಆರ್‌ಎಸ್​ಎಸ್ ಮುಖಂಡರು ಸಚಿವ ಈಶ್ವರಪ್ಪನವರಿಗೆ ಬುದ್ಧಿ ಹೇಳಬೇಕಿದೆ ಎಂದರು. ಈಶ್ವರಪ್ಪನವರಿಗೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಹೈಕಮಾಂಡ್​ ಕೆಳಗೆ ಇಳಿಸಿದ್ದಾರೆ ಅನ್ನೋದು ಹುಮ್ಮಸ್ಸು ಬಂದಿರಬಹುದು. ಹಾಗಾಗಿ ಅವರು ಬೆಂಕಿ ಚೆಂಡು ಆಗಲು ಹೊರಟಿರಬೇಕು ಎಂದು ವ್ಯಂಗ್ಯವಾಡಿದರು.

ಶಾಸಕ ಹಾಲಪ್ಪನ ಸ್ಥಿತಿ 'ಮಾಡಿದ್ದುಣ್ಣೋ ಮಾರಾಯ' ಎಂಬಂತಾಗಿದೆ:

ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಪಕ್ಷದವರ ಕಾಲು ಹಿಡಿದು ತಾನು ಮಂತ್ರಿ ಆಗುವುದನ್ನು ತಪ್ಪಿಸಿ ಕೋಟಾ ಶ್ರೀನಿವಾಸ ಪೂಜಾರಿಗೆ ಸಚಿವ ಸ್ಥಾನ ಸಿಗುವಂತೆ ಮಾಡಿದ್ದರು. ಈಗ ಅದೇ ಹಾಲಪ್ಪನವರಿಗೆ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಚಿವ ಸ್ಥಾನ ತಪ್ಪಿಸಿ, ಮಂತ್ರಿ ಆಗಿದ್ದಾರೆ. ತನಗೆ ಸಚಿವ ಸ್ಥಾನ ಸಿಗುತ್ತದೆ ಅಂತ ಕೋಟು ಹೊಲಿಸಿಕೊಂಡು ಹಾಲಪ್ಪ ಹೋಗಿದ್ರಂತೆ. ಆದರೆ ಅವರಿಗೆ ಮಂತ್ರಿ ಸ್ಥಾನ ಸಿಗಲಿಲ್ಲ. ಹೀಗಾಗಿ ಮಾಡಿದ್ದುಣ್ಣೋ ಮಾರಾಯ ಎಂಬಂತ ಸ್ಥಿತಿ ಬಂದೊದಗಿದೆ ಎಂದರು.

ಇದನ್ನೂ ಓದಿ: ಆನಂದ್ ಸಿಂಗ್ ರಾಜೀನಾಮೆ ಹಾದಿ ಹಿಡಿಯಲ್ಲ, ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.