ಶಿವಮೊಗ್ಗ: ನಗರದ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ಸೋಂಕಿತರು ವಾಸಿಸುತ್ತಿದ್ದ ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ.
ನಗರದ ಚನ್ನಪ್ಪ ಲೇಔಟ್ನ ಮೊದಲನೇ ಕ್ರಾಸ್, ಹೊಸಮನೆ ಬಡಾವಣೆಯ ಒಂದನೇ ಕ್ರಾಸ್, ಶರಾವತಿ ನಗರ ಎ ಬ್ಲಾಕ್ ಆರನೇ ಕ್ರಾಸ್ ಪ್ರದೇಶಗಳನ್ನು ಸ್ಯಾನಿಟೈಸ್ ಮಾಡಿ, ಸೀಲ್ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಂಟೇನ್ಮೆಂಟ್ ಝೋನ್ಗಳ ಸಂಖ್ಯೆಯೂ ಹೆಚ್ಚುತ್ತಿವೆ.
ಶಿವಮೊಗ್ಗ ನಗರದಲ್ಲಿ 50 ಹಾಗೂ ಜಿಲ್ಲೆಯಲ್ಲಿ ಒಟ್ಟು 77 ಕಂಟೇನ್ಮೆಂಟ್ ಝೋನ್ಗಳಿವೆ.