ಶಿವಮೊಗ್ಗ: ಇಂದು ಪ್ರಕಟವಾದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಸಾಗರದ ಅಭಿರಾಮ್ 625ಕ್ಕೆ 624 ಅಂಕ ಪಡೆದಿದ್ದಾನೆ.
ಅಭಿರಾಮ್ ಸಾಗರದ ಪ್ರಗತಿ ಸಂಯುಕ್ತ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಇವರ ತಂದೆ-ತಾಯಿ ವಕೀಲ ವೃತ್ತಿ ಮಾಡುತ್ತಿದ್ದಾರೆ. ಅಭಿರಾಮ್ ಸಂಸ್ಕೃತದಲ್ಲಿ 125, ಇಂಗ್ಲಿಷ್- 100, ಕನ್ನಡ-100, ಗಣಿತ- 100, ವಿಜ್ಞಾನ- 100 ಹಾಗೂ ಸಮಾಜ ವಿಜ್ಞಾನದಲ್ಲಿ -99 ಅಂಕ ಗಳಿಸಿದ್ದಾನೆ.
ಅಭಿರಾಮ್ ಮುಂದೆ ಸೈನ್ಸ್ ಓದುವ ಆಸೆಯನ್ನು ವ್ಯಕ್ತಪಡಿಸಿದ್ದು, ತನ್ನ ಓದಿಗೆ ಸಹಕಾರ ನೀಡಿದ ಪೋಷಕರು ಹಾಗೂ ಶಾಲಾ ಶಿಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾನೆ.