ಶಿವಮೊಗ್ಗ: ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಬನ್ನೇರುಘಟ್ಟದಿಂದ ಎರಡು ಸಿಂಹಗಳ ಆಗಮನವಾಗಿದೆ.
ಈವರೆಗೆ ನಾಲ್ಕು ಸಿಂಹಗಳಿದ್ದವು. ಇದೀಗ ಬನ್ನೇರುಘಟ್ಟದಿಂದ ಯಶವಂತ ಹಾಗೂ ಸುಚಿತ್ರ ಎಂಬ ಎರಡು ಸಿಂಹಗಳು ಆಗಮಿಸಿವೆ. ಇವುಗಳ ಆಗಮನದಿಂದ ಸಫಾರಿಯಲ್ಲಿನ ಸಿಂಹಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಸದ್ಯ ಎರಡನ್ನೂ ಸಫಾರಿಯ ಗೇಜ್ನಲ್ಲಿ ಇಡಲಾಗಿದೆ.
ಸಿಂಹಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಬಳಿಕ ಅವುಗಳನ್ನು ಪ್ರವಾಸಿಗರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಖಂದ ಚಂದ್ ತಿಳಿಸಿದ್ದಾರೆ.
ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮವನ್ನು ಕೇಂದ್ರ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಿಸಲಾಗಿದ್ದು, ಇದರಿಂದ ಅನೇಕ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ.
ಇದನ್ನೂ ಓದಿ: ಇಬ್ಬರು ಬೈಕ್ ಕಳ್ಳರ ಬಂಧನ: ಬಂಗಾರಪೇಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ