ETV Bharat / city

ಚಾಮನಹಳ್ಳಿ ತೋಟದಲ್ಲಿ ಹುಲಿ ಪ್ರತ್ಯಕ್ಷ : ಸೆರೆಗಾಗಿ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ - ಅರಣ್ಯ ಇಲಾಖೆ ತಂಡದಿಂದ ಕಾರ್ಯಾಚರಣೆ

ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದ ಹುಲಿ- ತೋಟದಲ್ಲಿ ಸಿಲುಕಿದ ಟೈಗರ್​- ಸೆರೆ ಹಿಡಿಯಲು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ

Tiger in Chamanahalli farm
ಚಾಮನಹಳ್ಳಿ ತೋಟದಲ್ಲಿ ಹುಲಿ ಪ್ರತ್ಯಕ್ಷ
author img

By

Published : Jul 11, 2022, 1:52 PM IST

ಮೈಸೂರು: ಸರಗೂರು ಬಳಿಯ ಚಾಮನ ಹಳ್ಳಿಯ ತೋಟದಲ್ಲಿ ಭಾನುವಾರ ಸಂಜೆ ದನ ಕಾಯುವ ವ್ಯಕ್ತಿಯೊಬ್ಬರಿಗೆ ಹುಲಿ ಕಾಣಿಸಿಕೊಂಡಿದೆ. ಈ ವಿಚಾರ ತಿಳಿದ ಗ್ರಾಮಸ್ಥರು ಆತಂಕಗೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಹುಲಿ ಸೆರೆಗಾಗಿ ಅರಣ್ಯ ಇಲಾಖೆ ತಂಡವೇ ದೌಡಾಯಿಸಿದ್ದು, ಸಾಕಾನೆ ನೆರವಿನಿಂದ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಚಾಮನಹಳ್ಳಿ ತೋಟದಲ್ಲಿ ಹುಲಿ ಪ್ರತ್ಯಕ್ಷ : ಸೆರೆಗಾಗಿ ಕಾರ್ಯಚರಣೆ ಆರಂಭ

ಅರಣ್ಯ ಇಲಾಖೆಯವರು ನಿನ್ನೆ ಹುಲಿ ಇರುವ ಜಾಗಗಳಲ್ಲಿ ಕ್ಯಾಮರಾ ಅಳವಡಿಸಿದ್ದರು. ಇಂದು ಬೆಳಗ್ಗೆ ಸಾಕಾನೆಗಳಾದ ಭೀಮ ಹಾಗೂ ಶ್ರೀಕಂಠನ ನೆರವಿನಿಂದ ಕಾರ್ಯಾಚರಣೆ ಆರಂಭಿಸಿದ್ದಾರೆ.

Forest Department personnel operating with elephants
ಆನೆಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ

ತೋಟದಲ್ಲಿ ಸಿಕ್ಕಿಬಿದ್ದ ಹುಲಿ: ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿರುವ ಈ ಹುಲಿ ತೋಟದಲ್ಲಿ ನವಿಲನ್ನು ಬೇಟೆಯಾಡಿ ಅದನ್ನು ಅಲ್ಲೇ ತಿಂದು ಮುಗಿಸಿದೆ. ತೋಟದಿಂದ ಹೊರ ಹೋಗಲು ಪ್ರಯತ್ನಿಸಿದಾಗ ತೋಟದ ಸುತ್ತ ಅಳವಡಿಸಿರುವ ಸೋಲಾರ್ ತಂತಿಗೆ ಹುಲಿಯ ಹಿಂಬದಿಯ ಕಾಲು ಸಿಕ್ಕಿ, ಗಾಯಗೊಂಡಿದೆ ಎನ್ನಲಾಗುತ್ತಿದೆ. ಡಿಸಿಎಫ್ ಕಮಲ ಕರಿಕಾಳನ್, ಎಸಿಎಫ್ ಶಿವರಾಮು, ಆರ್​ಎಫ್​ಒ ಮಧು, ವೈದ್ಯ ಪ್ರಕಾಶ್ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಹುಲಿ ಸೆರೆಹಿಡಿಯಲು ಕಾರ್ಯಾಚರಣೆ ಆರಂಭವಾಗಿದೆ.

ಇದನ್ನೂ ಓದಿ: Video - ಕೆಮ್ಮಣ್ಣು ಗುಂಡಿಯ ಪ್ರವಾಸಿ ಸ್ಥಳದಲ್ಲಿ ಮೂರು ಹುಲಿಗಳು ಪ್ರತ್ಯಕ್ಷ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.