ಮೈಸೂರು: ನಾಡ ದೇವತೆ ದರ್ಶನಕ್ಕೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ, ಚಾಮುಂಡಿ ಬೆಟ್ಟದಲ್ಲಿ ಬಾಂಬ್ ನಿಷ್ಕ್ರಿಯ, ಶ್ವಾನ ದಳಗಳಿಂದ ತಪಾಸಣೆ ನಡೆಸಿದೆ. ಮೋದಿ ತೆರಳುವ ಮಾರ್ಗದ ಸುತ್ತಮುತ್ತ ಗುಡ್ಡಗಾಡು ಪ್ರದೇಶಗಳಲ್ಲಿ, ಬಾಂಬ್ ನಿಷ್ಕ್ರಿಯ ದಳದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು.
ಜೂ.20 ರಂದು ಸಂಜೆ ಚಾಮುಂಡಿ ಬೆಟ್ಟಕ್ಕೆ ಹಾಗೂ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖ ಮಠಕ್ಕೆ ಪ್ರಧಾನಿ ಮೋದಿ ಭೇಟಿ ನೀಡುವರು. ಜೂ.21 ರಂದು ಯೋಗ ದಿನಾಚರಣೆಯಲ್ಲಿ ಭಾಗಿಯಾಗುವರು.
ಇದನ್ನೂ ಓದಿ: ಜೂನ್ 20ಕ್ಕೆ ರಾಜ್ಯಕ್ಕೆ ಪ್ರಧಾನಿ: ಸಬ್ ಅರ್ಬನ್ ರೈಲ್ವೆ ಸೇರಿ ಹಲವು ಯೋಜನೆಗಳಿಗೆ ಚಾಲನೆ