ETV Bharat / city

ಮೈಸೂರಿನಲ್ಲಿ ಧಾರಾಕಾರ ಮಳೆ; ಬಡಾವಣೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

ಮೈಸೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಬಡಾವಣೆಗಳು ಜಲಾವೃತವಾಗಿವೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ವಾಹನಗಳು ನೀರಿನಲ್ಲಿ ಮುಳುಗಿವೆ.

heavy rain leads to problem in Mysore
ಮೈಸೂರಿನಲ್ಲಿ ಧಾರಾಕಾರ ಮಳೆ
author img

By

Published : May 18, 2022, 12:56 PM IST

ಮೈಸೂರು: ಮಂಗಳವಾರ ರಾತ್ರಿಯಿಂದ ಸುರಿಯುತ್ತಿರುವ ಜಡಿಮಳೆಗೆ ಹುಣಸೂರು ನಗರದ ಮಂಜುನಾಥ ಬಡಾವಣೆ, ಸಾಕೇತ ಬಡಾವಣೆ, ನ್ಯೂ ಮಾರುತಿ ಬಡಾವಣೆಯ ಬಹುತೇಕ ಮನೆಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದ್ದು ದಿನಬಳಕೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಶಬ್ಬೀರ್ ನಗರ, ಕಿರಿಜಾಜಿ ರಸ್ತೆಯ ಸಂಪರ್ಕ ಕಡಿತಗೊಂಡಿದೆ. ಹುಣಸೂರು ನ್ಯಾಯಾಲಯ ಆವರಣಕ್ಕೆ ನೀರು ನುಗ್ಗಿದೆ. ತೋಟಗಾರಿಕೆ ಇಲಾಖೆ ಜಲಾವೃತಗೊಂಡಿದೆ. ಬಡಾವಣೆಗಳಲ್ಲಿ ನೀರು ಹೊಳೆಯಂತೆ ಹರಿಯುತ್ತಿದೆ.

ಮುಂಜಾನೆ 03 ಗಂಟೆಯಿಂದಲೇ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹೆಚ್.ರಾಜು ನೇತೃತ್ವದಲ್ಲಿ ಪೌರಾಯುಕ್ತ ರವಿಕುಮಾರ್, ನಗರ ಠಾಣೆ ಇನ್ಸ್​​ಪೆಕ್ಟರ್ ಶ್ರೀನಿವಾಸ್, ಹುಣಸೂರು ಅಗ್ನಿ ಶಾಮಕ ಅಧಿಕಾರಿ ಸತೀಶ್, ನಗರಸಭೆ ಸಿಬ್ಬಂದಿ ಮನೆಗಳಲ್ಲಿ ಸಿಲುಕಿರುವವರನ್ನು ಹೊರಕರೆತರಲು ಹರಸಾಹಸ ಪಡುತ್ತಿದ್ದಾರೆ. ಈ ಮೊದಲು ನಗರಸಭೆ ಸಿಬ್ಬಂದಿ ಬಡಾವಣೆ ನೀರು ಸರಾಗವಾಗಿ ಹರಿದು ಹೋಗಲು ಅಲ್ಲಲ್ಲಿ ತಾತ್ಕಾಲಿಕ ಚರಂಡಿ ನಿರ್ಮಿಸಿದ್ದರೂ ಕೂಡ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಈ ಸಮಸ್ಯೆಯಾಗಿದೆ.

ಇದನ್ನೂ ಓದಿ: ಉ.ಕ ಜಿಲ್ಲೆಯಲ್ಲಿ ಬಿರುಗಾಳಿಗೆ ಹಾರಿದ ಮನೆಗಳ ಚಾವಣಿ, ವಿದ್ಯುತ್ ಕಂಬ ಧರೆಗೆ

ಬೆಳಗ್ಗೆ ಕೆಲಹೊತ್ತು ಬಿಡುವು ನೀಡಿದ್ದ ಮಳೆರಾಯ ಮತ್ತೆ ತನ್ನ ಆರ್ಭಟ ಮುಂದುವರಿಸಿದ್ದರಿಂದಾಗಿ ಕಾರ್ಯಾಚರಣೆಗೆ ತೊಡಕಾಗಿದೆ. ಮನೆಯೊಂದರ ಸದಸ್ಯರು ನೀರಿನಲ್ಲಿ ಮುಳುಗುತ್ತಿದ್ದೇವೆಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಪೊಲೀಸರು ತೆರಳಿ ಅವರನ್ನು ರಕ್ಷಿಸಿದ್ದಾರೆ. ಆದರೆ ಒಮ್ಮೆಲೆ ನೀರು ಹರಿದು ಬಂದಿದ್ದು ಪೊಲೀಸ್ ಜೀಪ್ ಕೂಡ ಅರ್ಧದಷ್ಟು ನೀರಿನಲ್ಲಿ ಮುಳುಗಿತ್ತು. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.