ಮೈಸೂರು : ರಾಜ್ಯ ಸರ್ಕಾರವೇನೋ ರೈತರು ತರಕಾರಿ ಮಾರಾಟ ಮಾಡಲು ಅವಕಾಶ ನೀಡಿದೆ. ತರಕಾರಿ ತೆಗೆದುಕೊಂಡು ಎಪಿಎಂಸಿಗೆ ಬಂದರೆ, ಅದನ್ನು ಕೊಳ್ಳುವವರಿಲ್ಲದೆ ದಿನೇದಿನೆ ಕೊಳೆಯುತ್ತಿರುವುದನ್ನು ನೋಡಿ ರೈತರ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿದೆ.
ನಗರದ ನಂಜನಗೂಡು ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮರುಕಟ್ಟೆ ಸಮಿತಿ( ಎಪಿಎಂಸಿ)ಗೆ ಕೊರೊನಾ ಕರ್ಪ್ಯು ಹಿನ್ನೆಲೆ ಕೇರಳ,ಮಹಾರಾಷ್ಟ್ರ,ತಮಿಳುನಾಡು ಹಾಗೂ ಇತರೆ ರಾಜ್ಯಗಳಿಗೆ ಹಾಗೂ ಜಿಲ್ಲೆಗಳಿಗೆ ತರಕಾರಿ ಹೋಗುವುದು ಗಣನೀಯವಾಗಿ ಕುಸಿದಿರುವುದರಿಂದ, ಇಲ್ಲಿಗೆ ತರಕಾರಿ ತಂದು ವ್ಯಾಪಾರವೂ ಇಲ್ಲದೇ, ಅತ್ತ ವಾಪಸ್ ತೆಗೆದುಕೊಂಡು ಹೋಗಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ರೈತರು ಹಾಗೂ ಅಕ್ಕಪಕ್ಕದ ಜಿಲ್ಲೆಯ ರೈತರು, ವಾಹನಗಳಲ್ಲಿ ತರಕಾರಿ ತುಂಬಿಕೊಂಡು ಎಪಿಎಂಸಿಗೆ ಬಂದರೆ, ರಾಜ್ಯ ಸರ್ಕಾರ ನಿಗದಿ ಪಡಿಸಿರುವ ಸಮಯವೇ ಜಾರಿ ಹೋಗಿರುತ್ತದೆ. ನಂತರ ಅಲ್ಲಿಂದ ತರಕಾರಿ ಆಚೆ ಹೋಗುವುದೇ ಸವಾಲಾಗಿದೆ. ಕೊರೊನಾದ ಈ ಲಾಕ್ಡೌನ್ ಕಾರಣಕ್ಕೆ ತರಕಾರಿ ಬೆಳೆದ ರೈತರು ಹಾಗೂ ವ್ಯಾಪಾರಿಗಳ ಮುಖದಲ್ಲಿ ಸಂತಸವೇ ಇಲ್ಲದಂತಾಗಿದೆ.