ETV Bharat / city

ಖಾತೆ ಹಂಚಿಕೆ ಸರ್ಕಸ್​​ ಕುರಿತು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದೇನು? - DCM Ashwath narayana

ಸಚಿವ ಸಂಪುಟಕ್ಕೆ ತಗೆದುಕೊಳ್ಳುವುದು, ಖಾತೆ ಹಂಚುವುದು ಸಿಎಂಗೆ ಬಿಟ್ಟ ಪರಮಾಧಿಕಾರ ಎಂದು ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.

dcm-ashwath-narayana
ಡಿಸಿಎಂ ಅಶ್ವತ್ಥ ನಾರಾಯಣ
author img

By

Published : Jan 25, 2021, 3:27 PM IST

ಮೈಸೂರು: ಖಾತೆ ಹಂಚಿಕೆ ವಿಚಾರದಲ್ಲಿ ನನಗೆ ಯಾವುದೇ ಮಾಹಿತಿ ಇಲ್ಲ. ಸಚಿವ ಸಂಪುಟಕ್ಕೆ ತಗೆದುಕೊಳ್ಳುವುದು, ಖಾತೆ ಹಂಚುವುದು ಸಿಎಂಗೆ ಬಿಟ್ಟ ಪರಮಾಧಿಕಾರ. ಯಡಿಯೂರಪ್ಪ ಅವರು ಏನು ನಿರ್ಧಾರ ತಗೆದುಕೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.

ಇದನ್ನೂ ಓದಿ...ಮೈಸೂರು : ರಾಗಿ ಯಂತ್ರಕ್ಕೆ ಸಿಲುಕಿ ವ್ಯಕ್ತಿ ಸಾವು

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಸವಾಲು-ಸಮಸ್ಯೆ ಇದ್ದೇ ಇರುತ್ತದೆ. ಎಲ್ಲವನ್ನೂ ಸದ್ಯದಲ್ಲೇ ಬಗೆಹರಿಸಿಕೊಂಡು ಮುಂದೆ ಹೋಗುತ್ತೇವೆ. ಅಸಮಾಧಾನಿತ ಸಚಿವರು ನಮ್ಮ‌ ಸ್ನೇಹಿತರೇ. ಅವರ ಜೊತೆ ಪರಸ್ಪರ ಕುಳಿತು ಮಾತನಾಡುತ್ತೇವೆ. ಒಂದು ಪಕ್ಷದಲ್ಲಿ ಎಲ್ಲರೂ ಅಣ್ಣ-ತಮ್ಮಂದಿರ ರೀತಿ‌ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸುತ್ತೇವೆ ಎಂದರು.

ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣ ಪ್ರತಿಕ್ರಿಯೆ

ನಾಳೆ ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ. ಕೃಷಿ ಕಾಯ್ದೆಗಳು ರೈತರ ಪರವಾಗಿರುವುದು. ಮುಂದೆ ಎಲ್ಲವೂ ಅವರಿಗೆ ಗೊತ್ತಾಗಲಿದೆ ಎಂದ ಡಿಸಿಎಂ, ಮುಂದಿನ ದಿನಗಳಲ್ಲಿ ಆನ್​ಲೈನ್ ತರಗತಿ​​ಗೂ ಹಾಜರಾತಿ ಕಡ್ಡಾಯ ಮಾಡುತ್ತೇವೆ. ಹಾಗೆಯೇ ಎಲ್ಲಾ ಅತಿಥಿ ಉಪನ್ಯಾಸಕರಿಗೂ ಪಾಠ ಮಾಡುವ ಅವಕಾಶ ನೀಡುತ್ತೇವೆ. ಇದೀಗ ಶೇ.50ರಷ್ಟು ಮಾತ್ರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.