ಮೈಸೂರು: ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಇರುವ ಹೆಣ್ಣು ಘೇಂಡಾಮೃಗ ಬಬ್ಲಿ ಜೊತೆ ಗಂಡು ಘೇಂಡಾಮೃಗ ವಿರಾಟ್ ಕಿಸ್ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.
ನಗರದ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಭಾರತ ತಳಿಯ 3 ಘೇಂಢಾಮೃಗಗಳಿದ್ದು, ಅದರಲ್ಲಿ 1 ವಿರಾಟ್ ಎಂಬ ಗಂಡು ಘೇಂಡಮೃಗ, ಬಬ್ಲಿ ಹಾಗೂ ಗೌರಿ ಎಂಬ 2 ಹೆಣ್ಣು ಘೇಂಡಾಮೃಗಗಳಿವೆ. ವಿರಾಟ್ನನ್ನು ಮೈದಾನದಲ್ಲಿ ಬಿಡಲಾಗಿದ್ದು, ಹೆಣ್ಣು ಘೇಂಡಾಮೃಗ ಬಬ್ಲಿಯನ್ನು ಕಬ್ಬಿಣದ ಸಲಾಕೆಯಿಂದ ನಿರ್ಮಾಣ ಮಾಡಿರುವ ದೊಡ್ಡ ಶೆಡ್ ನಲ್ಲಿ ಇಡಲಾಗಿದೆ. ವಿರಾಟ್-ಬಬ್ಲಿ ಹತ್ತಿರ ಬಂದು ಕಬ್ಬಿಣದ ಸಲಾಕೆಯ ಮೂಲಕ ಕಿಸ್ ಮಾಡಿದ ಈ ದೃಶ್ಯ ಈಟಿವಿ ಭಾರತದ ಕ್ಯಾಮೆರಾದಲ್ಲಿ ಸೆರೆಯಾಗಿದೆ.